ಬೆಂಗಳೂರು: ಕೇಸರಿ ಕನ್ನಡಕದೊಳಗಿಂದ ಬೊಮ್ಮಾಯಿಗೆ ಜನರ ಕಷ್ಟ ಕಾಣದಿರಬಹುದು, ನಮಗೆ ಕಾಣುತ್ತಿದೆ. ಕಠೋರ ಹೃದಯಿಯಾದ ತಮಗೆ ಜನರ ಕಷ್ಟ ಅರಿಯುವುದು ಹಾಗೂ ಜನಪರವಾದ ಹೋರಾಟವನ್ನು ಗೌರವಿಸುವುದು ಹೇಗೆ ತಿಳಿಯಲು ಸಾಧ್ಯ ಬಿಡಿ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಟ್ವಿಟ್ಟರ್ ಮೂಲಕ ಕಿಡಿಕಾರಿದೆ.
ಟ್ವೀಟ್‍ನಲ್ಲಿ ಏನಿದೆ?
ಬೊಮ್ಮಾಯಿ ಅವರೇ, ಬೆಲೆ ಏರಿಕೆ ಮಾಡುವುದು ನಿಮ್ಮ ಜನ್ಮಸಿದ್ದ ಹಕ್ಕೇ?. ನಿಮ್ಮ ವರ್ತನೆ ನೋಡಿದರೆ ನಿಮ್ಮ ಸರ್ಕಾರ ಹಾಗೆಯೇ ಭಾವಿಸಿದಂತಿದೆ. ಕೇಸರಿ ಕನ್ನಡಕದೊಳಗಿಂದ ನಿಮಗೆ ಜನರ ಕಷ್ಟ ಕಾಣದಿರಬಹುದು, ನಮಗೆ ಕಾಣುತ್ತಿದೆ, ಕಠೋರ ಹೃದಯಿಯಾದ ತಮಗೆ ಜನರ ಕಷ್ಟ ಅರಿಯುವುದು ಹಾಗೂ ಜನಪರವಾದ ಹೋರಾಟವನ್ನು ಗೌರವಿಸುವುದು ಹೇಗೆ ತಿಳಿಯಲು ಸಾಧ್ಯ ಬಿಡಿ. ಇದನ್ನೂ ಓದಿ: ನಾನು ಮಾತನಾಡಲ್ಲ, ನನ್ನ ಆಕ್ಷನ್ ಮಾತನಾಡುತ್ತದೆ: ವಿಪಕ್ಷಗಳಿಗೆ ಬೊಮ್ಮಾಯಿ ತಿರುಗೇಟು
ಮುಖ್ಯಮಂತ್ರಿಗಳೇ….
ಸೌಖ್ಯವೇ? ಆರೋಗ್ಯವಾಗಿದ್ದೀರಿ ಅಲ್ಲವೇ? ಕಣ್ಣು, ಕಿವಿಗಳು ಸಮರ್ಪಕವಾಗಿ ಕೆಲಸ ಮಾಡುತ್ತಿವೆ ತಾನೇ? ಮೆದುಳು ಸುಸ್ಥಿತಿಯಲ್ಲಿದೆ ತಾನೇ? ಹೃದಯವಿದೆಯಲ್ಲವೇ?
ಎಲ್ಲವೂ ಸರಿ ಇದ್ದು ಸುಮ್ಮನಿದ್ದೀರಿ ಎಂದರೆ ‘ರಾಮ’ ನಿಮ್ಮನ್ನು ಎಂದಿಗೂ ಕ್ಷಮಿಸಲಾರ. pic.twitter.com/qvKPG80LWt
— Karnataka Congress (@INCKarnataka) April 11, 2022
ಮುಖ್ಯಮಂತ್ರಿಗಳೇ, ಸೌಖ್ಯವೇ? ಆರೋಗ್ಯವಾಗಿದ್ದೀರಿ ಅಲ್ಲವೇ? ಕಣ್ಣು, ಕಿವಿಗಳು ಸಮರ್ಪಕವಾಗಿ ಕೆಲಸ ಮಾಡುತ್ತಿವೆ ತಾನೇ? ಮೆದುಳು ಸುಸ್ಥಿತಿಯಲ್ಲಿದೆ ತಾನೇ? ಹೃದಯವಿದೆಯಲ್ಲವೇ?ಎಲ್ಲವೂ ಸರಿ ಇದ್ದು ಸುಮ್ಮನಿದ್ದೀರಿ ಎಂದರೆ ‘ರಾಮ’ ನಿಮ್ಮನ್ನು ಎಂದಿಗೂ ಕ್ಷಮಿಸಲಾರ. ಇದನ್ನೂ ಓದಿ: ರಾಜ್ಯದಲ್ಲಿ ಈ ಬಾರಿ ಹೆಚ್‍ಡಿಕೆ ಸಿಎಂ ಆಗೋದು ಗ್ಯಾರಂಟಿ: ಬಂಡೆಪ್ಪ ಖಾಶೆಂಪೂರ್
ಗೃಹ ಸಚಿವ ಆರಗ ಜ್ಞಾನೇಂದ್ರ ಅಯ್ಯೋ ಬಿಡಿ. ನೀವೆಷ್ಟು ಸಮರ್ಥರು ಅನ್ನೋದು ಗೊತ್ತಿರೋದೇ. ರಾಜ್ಯದಲ್ಲಿ ಧರ್ಮಯುದ್ಧ ನಡೀತಾ ಇದ್ರೂ, ಬಾಯಿಗೆ ಕಡುಬು ತುರುಕಿಕೊಂಡು ಕುಳಿತಿದ್ದೀರಿ. ನೀವು ಗೃಹಮಂತ್ರಿ ಆಗಿರೋದು ಬಿಜೆಪಿ ಮೆಚ್ಚಿಸೋಕೂ ಅಲ್ಲ, ಸಿಎಂ ಮೆಚ್ಚಿಸೋಕೂ ಅಲ್ಲ. ಮೊದಲು ಬಕೆಟ್ ಹಿಡಿಯೋದು ಬಿಡಿ. ಜನಮೆಚ್ಚೋ ಕೆಲಸ ಮಾಡಿ.