ಬೆಂಗಳೂರು: ಮೂಲ ಮತ್ತು ವಲಸಿಗ ಆಂತರಿಕ ಫೈಟ್ ನಡುವೆಯೂ ಮಾಜಿ ಸಿಎಂ ಸಿದ್ದರಾಮಯ್ಯ ವಿಪಕ್ಷ ನಾಯಕನಾಗುವ ಮೂಲಕ ಗೆದ್ದಿದ್ದಾರೆ. ವಿಪಕ್ಷ ನಾಯಕರನ್ನಾಗಿ ಆಯ್ಕೆ ಮಾಡುವಾಗಲೇ ಕಾಂಗ್ರೆಸ್ ಹೈಕಮಾಂಡ್ ವಿಧಿಸಿರುವ ಷರತ್ತುಗಳಿಗೆ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿವೆ.
ವಿಪಕ್ಷ ನಾಯಕರಾಗಬೇಕಾದರೆ ನಮ್ಮ ಕೆಲ ಷರತ್ತುಗಳು ಒಪ್ಪಿಕೊಳ್ಳಬೇಕು. ಹೈಕಮಾಂಡ್ ಎಚ್ಚರಿಕೆಯಾಗಿ ಕೆಲ ಸಂದೇಶಗಳನ್ನು ಸಿದ್ದರಾಮಯ್ಯರಿಗೆ ರವಾನಿಸಿದ್ದು, ಮಾಜಿ ಸಿಎಂ ಸಮ್ಮತಿಯನ್ನು ಸೂಚಿಸಿದ್ದಾರೆ ಎನ್ನಲಾಗಿದೆ. ಕೈ ಹೈಕಮಾಂಡ್ ಹಾಕಿರುವ ಷರತ್ತುಗಳು ಈ ಕೆಳಗಿನಂತಿವೆ.
ಷರತ್ತುಗಳು:
* ಸಿಎಲ್‍ಪಿ ನಾಯಕನ ಸ್ಥಾನವನ್ನ ಸಿದ್ದರಾಮಯ್ಯ ಯಾವಾಗ ಬೇಕಾದ್ರು ಬಿಟ್ಟುಕೊಡಬೇಕು
* ನೀವು ಕೇಳಿದ ವಿಪಕ್ಷ ಸ್ಥಾನ ನೀಡಲಾಗಿದೆ. ಹಾಗಾಗಿ ಸಿಎಲ್‍ಪಿಯಿಂದ ಕೈಬಿಟ್ಟು ಬೇರೆ ನಾಯಕರಿಗೆ ಅವಕಾಶ ನೀಡಬೇಕು.
* ವಿಪಕ್ಷ ನಾಯಕ ಸ್ಥಾನವನ್ನು ಸಮರ್ಥವಾಗಿ ಎದುರಿಸಬೇಕು.
* ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರುವಂತ ವಾತಾವರಣ ನಿರ್ಮಿಸುವುದು ನಿಮ್ಮ ಜವಾಬ್ದಾರಿ.
* ಅತೃಪ್ತಿ ಶಮನಗೊಳಿಸಿ, ಮೂಲ ಕಾಂಗ್ರೆಸಿಗರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದು.
* ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಕ್ಕೆ ಅವಕಾಶ ಕೊಡಬೇಡಿ.
* ಮತ್ತೆ ಅತೃಪ್ತಿ ಮುಂದುವರೆದ್ರೆ ಯಾವಾಗ ಬೇಕಾದರು ಹೈಕಮಾಂಡ್ ಮಧ್ಯಪ್ರವೇಶ.
* ಯಾವುದೇ ತೀರ್ಮಾನ ಕೈಗೊಳ್ಳುವಾಗ ಹಿರಿಯರ ಸಲಹೆ ಪಡೆದೇ ಮುಂದುವರಿಯಬೇಕು.
* ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಹೈಕಮಾಂಡ್ ತೀರ್ಮಾನ. ನೀವು ಮಾತನಾಡುವಂತಿಲ್ಲ.