ಬೆಂಗಳೂರು: ಸಚಿವ ಸ್ಥಾನ ಹಾಗೂ ನಿಗಮ ಮಂಡಳಿ ಕುರ್ಚಿ ಮೇಲೆ ಆಸೆ ಇಟ್ಟುಕೊಂಡು ಕೂತವರಿಗೆ ಮತ್ತೆ ನಿರಾಸೆಯಾಗಿದೆ. ಆಷಾಢ ಬಳಿಕ ಕುರ್ಚಿ ಫಿಕ್ಸ್ ಆಗಬಹುದು ಅಂತಾ ಲೆಕ್ಕಾಚಾರ ಹಾಕಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರಿಗೆ ಮತ್ತೊಂದು ಸಮಸ್ಯೆ ಎದುರಾಗಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ನಿಗಮ ಮಂಡಳಿ ಹಾಗೂ ಸಚಿವ ಸ್ಥಾನ ನೇಮಕ ಮತ್ತಷ್ಟು ವಿಳಂಬವಾಗಲಿದೆ. ಆಷಾಢದ ಬಳಿಕ ಕಾಂಗ್ರೆಸ್‍ನ ಐದು ಸಚಿವ ಸ್ಥಾನ ಹಾಗೂ ನಿಗಮ ಮಂಡಳಿ ಪೈಕಿ 20 ಕಾಂಗ್ರೆಸ್ ಹಾಗೂ 10 ಜೆಡಿಎಸ್ ಶಾಸಕರಿಗೆ ಹಂಚುವ ಪ್ಲಾನ್ ಇತ್ತು. ಸ್ಥಳೀಯ ಚುನಾವಣೆ ಘೋಷಣೆಯಿಂದಾಗಿ ನೀತಿಸಂಹಿತೆ ಜಾರಿಯಾಗಿದ್ದು ನೇಮಕಕ್ಕೆ ಅವಕಾಶ ಇದೆಯೇ ಎನ್ನುವ ಗೊಂದಲ ಕಾಂಗ್ರೆಸ್ ನಾಯಕರಿಗೆ ಮೂಡಿದೆ.
Advertisement
ಹೀಗಾಗಿ ಈ ಬಗ್ಗೆ ಸ್ಪಷ್ಟನೆ ಕೋರಿ ಸದ್ಯದಲ್ಲಿ ಚುನಾವಣೆ ಆಯೋಗಕ್ಕೆ ಪತ್ರ ಬರೆಯಲಿದ್ದಾರೆ. ಒಂದು ವೇಳೆ ಚುನಾವಣೆ ಆಯೋಗ ನೇಮಕಕ್ಕೆ ಗ್ರೀನ್ ಸಿಗ್ನಲ್ ಕೊಡದಿದ್ರೆ, ಇನ್ನೂ ಒಂದು ತಿಂಗಳು ಸಚಿವ ಸ್ಥಾನ ಮತ್ತು ನಿಗಮ ಮಂಡಳಿ ಅಧ್ಯಕ್ಷಗಾದಿ ಆಕಾಂಕ್ಷಿಗಳು ಕಾಯಬೇಕಾಗುತ್ತೆ.
Advertisement
Advertisement
ಮೈತ್ರಿಗೆ ಹೈಕಮಾಂಡ್ ಸಮ್ಮತಿ:
ಇತ್ತ ಲೋಕಸಭೆ ಚುನಾವಣೆಯಲ್ಲಿ ಮೈತ್ರಿಗೆ ಸ್ವಪಕ್ಷಿಯರಿಂದಲೇ ವಿರೋಧ ವ್ಯಕ್ತವಾಗಿರುವ ಬೆನ್ನಲೆ ಸ್ಥಳೀಯ ಚುನಾವಣೆಯಲ್ಲೂ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಸಮ್ಮತಿಸಿದೆ. ಸಾಕಷ್ಟು ವಿರೋಧ ನಡುವೆಯೂ ಅಗತ್ಯ ಬಿದ್ದರೆ ಮೈತ್ರಿಗೆ ಮುಂದಾಗುವಂತೆ ರಾಜ್ಯ ನಾಯಕರಿಗೆ ಹೈಕಮಾಂಡ್ ಸೂಚನೆ ಕೊಟ್ಟಿದೆ.
Advertisement
ಮೈತ್ರಿ ಮಾಡಿಕೊಳ್ಳುವ ಬಗ್ಗೆ ಜಿಲ್ಲಾ ನಾಯಕರಿಗೆ ಜವಾಬ್ದಾರಿ ನೀಡಿ, ಅವರ ಅಭಿಪ್ರಾಯ ಪಡೆದು ಮೈತ್ರಿ ಬಗ್ಗೆ ನಿರ್ಧರಿಸಲು ಕಾಂಗ್ರೆಸ್ ಹೈಕಮಾಂಡ್ ತಿಳಿಸಿದೆ. ಬಹಳ ಪ್ರಮುಖವಾಗಿ ಬಿಜೆಪಿ ಬಲಿಷ್ಠವಾಗಿರುವ ಕಡೆ ಮೈತ್ರಿಗೆ ಹೈಕಮಾಂಡ್ ಸಮ್ಮಿತಿಸಿದೆ ಅಂತಾ ಮೂಲಗಳು ಸ್ವಷ್ಟಪಡಿಸಿವೆ. ಮೈಸೂರು ಭಾಗದಲ್ಲಿ ಜೆಡಿಎಸ್, ಕಾಂಗ್ರೆಸ್ ನಡುವೆ ನೇರ ಪೈಪೋಟಿ ಇದ್ದು, ಈ ಭಾಗದಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಸ್ವರ್ಧಿಸಲು ಹೈಕಮಾಂಡ್ ಸೂತ್ರ ಹೆಣೆದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews