ಹಾಸನ: ಸಿದ್ದರಾಮಯ್ಯ (Siddaramaiah) ಮುಖ್ಯಮಂತ್ರಿ ಆಗಿದ್ದಾರೆ. ರಾಜ್ಯದಲ್ಲಿ ಬಂಡೆಯಂತಹ ಸರ್ಕಾರವಿದ್ದು, ಬಂಡೆ ರೂಪದಲ್ಲಿಯೇ ಅವರು ಕೆಲಸ ಮಾಡುತ್ತಿದ್ದಾರೆ. ಸಿಎಂ ಬದಲಾವಣೆ ಪ್ರಶ್ನೆ ಪ್ರಸ್ತುತ ಇಲ್ಲಾ ಎಂದು ಶಾಸಕ ಕೆ.ಎಂ ಶಿವಲಿಂಗೇಗೌಡ (Shivalinge Gowda) ಹೇಳಿದ್ದಾರೆ.
ಹಾಸನ (Hassan) ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಗೀಜಿಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಸಿಎಂ ಇದ್ದಾರೆ. ನಮ್ಮದು ನೂರಾರು ವರ್ಷಗಳ ಇತಿಹಾಸವಿರುವ ಪಕ್ಷ, ಹೈಕಮಾಂಡ್ (Congress High Command) ಭದ್ರವಾಗಿದೆ. ಆದ್ದರಿಂದ ಯಾರು ಮುಖ್ಯಮಂತ್ರಿ ಆಗಬೇಕು, ಬಿಡಬೇಕು ಅನ್ನೋದು ಹೈಕಮಾಂಡ್ ತೀರ್ಮಾನ. ಸಿದ್ದರಾಮಯ್ಯ ಅವರೇ ಸಿಎಂ ಅಂತ ಮುಕ್ತವಾಗಿ ಹೈಕಮಾಂಡ್ ಹೇಳಿ ಕಳುಹಿಸಿದೆ. 68 ಸಾವಿರ ಕೋಟಿ ಬಡಜನಕ್ಕೆ ಗ್ಯಾರಂಟಿ ಕೊಟ್ಟಿರುವ ಇತಿಹಾಸ ಈ ಭಾರತ ದೇಶದಲ್ಲಿ ಇದ್ದರೆ ಅದು ಕರ್ನಾಟಕ ರಾಜ್ಯ ಮಾತ್ರ. ಯಾರಿಂದಲೂ ಸಿದ್ದರಾಮಯ್ಯ ಅವರನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
Advertisement
Advertisement
ಗೃಹಸಚಿವ ಪರಮೇಶ್ವರ್ (G Parameshwar) ಅವರು ಸಮಯ, ಸಂದರ್ಭ ಸಿಕ್ಕಾಗ ಅವರ ಮನೆಯಲ್ಲಿ ಎಲ್ಲ ಊಟಕ್ಕೆ ಸೇರಿಕೊಳ್ತಾರೆ. ಕೆಲವೊಂದು ವಿಚಾರಗಳನ್ನು ಮಾತಾಡ್ತಾರೆ. ಗೃಹಸಚಿವರ ಜೊತೆ ಮಾತನಾಡಿದ್ದಕ್ಕೆಲ್ಲಾ ತಪ್ಪು ಅರ್ಥ ಕಲ್ಪಿಸಿದರೆ ಹೇಗೆ? ಯಾಕೆ ತಪ್ಪು ಅರ್ಥ ಕಲ್ಪಿಸಬೇಕು? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಬಸ್‌ಗೆ ಬೆಂಕಿ ಹಚ್ಚಿದ ಪ್ರಕರಣ- ಮಹಾರಾಷ್ಟ್ರದ ಬಸ್ ಕರ್ನಾಟಕಕ್ಕೂ ಬರುತ್ತೆ: ರಾಮಲಿಂಗಾರೆಡ್ಡಿ ಖಡಕ್ ವಾರ್ನಿಂಗ್
Advertisement
Advertisement
ಕಾಂಗ್ರೆಸ್‌ನಿಂದ 3 ಜನ ಬರ್ತಾರೆ, 6 ಜನ ಬರ್ತಾರೆ ಅಂತ ಹೇಳೋದೆಲ್ಲಾ ಸುಳ್ಳು. ನಾನು ಕಾಫಿ ಕುಡಿಯುವಾಗ ಬರೋದು ಫೋಟೋ ತೆಗೆದುಕೊಳ್ಳೋದು, ಆಮೇಲೆ ನನ್ನ ಟಚ್‌ನಲ್ಲಿದ್ದಾನೆ ಅಂತಾ ಹೇಳುವ ಕೆಲಸ ಮಾಡ್ತಿದ್ದಾರೆ. ಅವರಿಗೆ ತಾಕತ್ ಇದ್ದರೆ ಕಾಂಗೆಸ್ ಬಿಟ್ಟು ಬಿಜೆಪಿಗೆ ಹೋಗ್ತಿನಿ ಅಂತಾ ಒಬ್ಬ ಎಂಎಲ್‌ಎ ಕೈಲಿ ಹೇಳಿಸಲಿ ಅಂತ ಸವಾಲ್ ಹಾಕಿದರಲ್ಲದೇ, ಸಿಎಂ ಬದಲಾವಣೆ ಹೈಕಮಾಂಡ್‌ಗೆ ಬಿಟ್ಟ ಬಿಚಾರ. ಪಕ್ಷದೊಳಗೆ ಯಾವುದೇ ಗೊಂದಲವಿಲ್ಲ. ಇವರು ಹೇಳುತ್ತಿರುವುದಕ್ಕೆಲ್ಲಾ ಎರಡೂವರೆ ವರ್ಷ ಆದ್ಮೇಲೆ ಉತ್ತರ ಸಿಗುತ್ತೆ ಹೇಳಿದ್ದಾರೆ. ಇದನ್ನೂ ಓದಿ: ಕೇಂದ್ರದಿಂದ ಐಫೋನ್ ಕದ್ದಾಲಿಕೆಗೆ ಯತ್ನ – ಎಚ್ಚರಿಕೆ ಸಂದೇಶ ಬಂದಿದ್ದಾಗಿ ಪ್ರತಿಪಕ್ಷ ನಾಯಕರ ಆರೋಪ
ಹೈಕಮಾಂಡ್‌ನವರು ಏನು ಹೇಳಿದ್ದಾರೆ ಅನ್ನೋದು ಇವರಿಗೆ ಗೊತ್ತಾ? ರಾಹುಲ್‌ಗಾಂಧಿ, ಸೋನಿಯಾಗಾಂಧಿ, ಸುರ್ಜೆವಾಲ ಬಂದು ಇವರಿಗೆ ಅನೌನ್ಸ್ ಮಾಡಿದ್ರಾ? ಯಾರೋ ಡಿ.ಕೆ ಶಿವಕುಮಾರ್ ಅಭಿಮಾನಿಗಳು ಎರಡೂವರೆ ವರ್ಷ ಆದ್ಮೇಲೆ ಸಿಎಂ ಆಗ್ತಾರೆ ಅಂದಿರಬಹುದು. ಅದು ಅವರ ವೈಯುಕ್ತಿಕ ಅಭಿಪ್ರಾಯವೇ ಹೊರತು ಹೈಕಮಾಂಡ್ ಅಭಿಪ್ರಾಯ ಅಲ್ಲ. ಹೈಕಮಾಂಡ್ ಬಾಯಿಬಿಟ್ಟ ಮೇಲೆ ಇದೆಲ್ಲಾ ಮಾತನಾಡಬೇಕು. ಬರೀ ಗಾಳಿ ಸುದ್ದಿಯಲ್ಲೇ ಈ ದೇಶ ಹಾಳಾಗಿ ಹೋಗಿದೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಮತೀಯ ದ್ವೇಷಕ್ಕೆ ಪ್ರಚೋದನೆ ಆರೋಪ – ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಿರುದ್ಧ ಕೇಸ್
Web Stories