ಬೆಂಗಳೂರು: ಚುನಾವಣೆಯಲ್ಲಿ ಕಾಂಗ್ರೆಸ್ (Congress) ಜಯಭೇರಿ ಬಾರಿಸುತ್ತಲೇ ಮುಂದಿನ ಸಿಎಂ (Karnataka Chief Minister) ಯಾರಾಗಬೇಕು ಎಂಬ ಮಿಲಿಯನ್ ಡಾಲರ್ ಪ್ರಶ್ನೆ ಕೇಳಿಬಂದಿದ್ದು, ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ (DK Shivakumar) ನಡುವೆ ಸಿಎಂ ಗಾದಿಗಾಗಿ ಭಾರೀ ಪೈಪೋಟಿ ನಡೆಯುತ್ತಿದೆ.
ರಾತ್ರೋರಾತ್ರಿ ಸಿದ್ದರಾಮಯ್ಯ ಮತ್ತು ಡಿಕೆಶಿ ಮನೆಗಳ ಮುಂದೆ ಅವರ ಬೆಂಬಲಿಗರು ದೊಡ್ಡ ದೊಡ್ಡ ಫ್ಲೆಕ್ಸ್ ಹಾಕಿದ್ದಾರೆ. ಈ ಫ್ಲೆಕ್ಸ್ ರಾಜಕೀಯ ಕಾಂಗ್ರೆಸ್‍ನಲ್ಲಿ ಸಂಚಲನ ಮೂಡಿಸಿವೆ.. ಈ ನಡುವೆ, ತಾನೆ ಮುಂದಿನ ಸಿಎಂ ಆಗೋ ಸಂದೇಶವನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇರವಾಗಿ ರವಾನೆ ಮಾಡಿದ್ದಾರೆ. ತಾವು ಈ ಹಿಂದೆ ಸಹಕಾರ ಕೊಟ್ಟ ಮಾದರಿಯಲ್ಲಿಯೇ ಸಿದ್ದರಾಮಯ್ಯ ಅವರು ಈಗ ತಮಗೆ ಸಹಕಾರ ಕೊಡುವ ವಿಶ್ವಾಸವಿದೆ ಎಂದಿದ್ದಾರೆ. ಇದನ್ನೂ ಓದಿ: ಸಮುದಾಯದ ಐವರಿಗೆ ಸಚಿವ ಸ್ಥಾನ, 1 ಡಿಸಿಎಂ ಕೊಡಿ – ಮುಸ್ಲಿಂ ಮುಖಂಡರ ಆಗ್ರಹ
ಖಾಸಗಿ ಹೋಟೆಲಿನಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ (CLP) ಹೈಕಮಾಂಡ್ ವೀಕ್ಷಕರಾದ ಸುಶೀಲ್ ಕುಮಾರ್ ಶಿಂಧೆ ಸಮ್ಮುಖದಲ್ಲಿ ಈ ಪ್ರಕ್ರಿಯೆ ನಡೆಯಲಿದೆ. ಸಿದ್ದರಾಮಯ್ಯ ಮತ್ತು ಡಿಕೆಶಿ ಬೆಂಬಲಿಗರಲ್ಲಿ ಅನೇಕರು, ನಮ್ಮ ನಾಯಕನಿಗೆ ಸಿಎಂ ಪಟ್ಟ ಕಟ್ಟಿ ಎಂಬ ಬೇಡಿಕೆ ಮುಂದಿರಿಸಿದ್ದಾರೆ. ಜೊತೆಗೆ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಣಯಕ್ಕೆ ಬದ್ಧ ಎಂಬ ಮಾತನ್ನು ಸೇರಿಸಿದ್ದಾರೆ. ಇದನ್ನೂ ಓದಿ: ಸಿಎಂ ಕುರ್ಚಿ ಫೈಟ್; 50-50 ಪ್ಲಾನ್ ಡಿಕೆಶಿ ಮುಂದಿಡ್ತಾರಾ ಸಿದ್ದು?
ಈಗಾಗಲೇ ಸೋನಿಯಾ, ರಾಹುಲ್ ಗಾಂಧಿ ಜೊತೆ ಚರ್ಚಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೆಹಲಿಗೆ ತೆರಳಿದ್ದಾರೆ. ಒಂದೆರಡು ದಿನದಲ್ಲಿ ಹೈಕಮಾಂಡ್ ಈ ವಿಚಾರದಲ್ಲಿ ನಿರ್ಣಯ ತೆಗೆದುಕೊಳ್ಳಲಿದೆ.
ಹೈಕಮಾಂಡ್ ಲೆಕ್ಕಾಚಾರ – 01
ಸಿದ್ದರಾಮಯ್ಯ ಸಿಎಂ ಆದಲ್ಲಿ ನಾಲ್ಕು ಡಿಸಿಎಂ ಹುದ್ದೆ ಸೃಷ್ಟಿಸಲಾಗುತ್ತದೆ. ಲಿಂಗಾಯತ+ಒಕ್ಕಲಿಗ+ದಲಿತ+ಮುಸ್ಲಿಂ ನಾಯಕರಿಗೆ ಡಿಸಿಎಂ ಹುದ್ದೆ ನೀಡಲಾಗುತ್ತದೆ.
ಹೈಕಮಾಂಡ್ ಲೆಕ್ಕಾಚಾರ – 02
ಡಿಕೆ ಶಿವಕುಮಾರ್ ಸಿಎಂ ಆದಲ್ಲಿ ನಾಲ್ಕು ಡಿಸಿಎಂ ಹುದ್ದೆ ಸೃಷ್ಟಿಸಿ, ಲಿಂಗಾಯತ+ಕುರುಬ+ದಲಿತ+ಮುಸ್ಲಿಂ ನಾಯಕರಿಗೆ ಪಟ್ಟ ನೀಡಲಾಗುತ್ತದೆ.
ಹೈಕಮಾಂಡ್ ಲೆಕ್ಕಾಚಾರ – 03
ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಬದಲು ಬೇರೆಯವರು ಸಿಎಂ ಆದಲ್ಲಿ ಜಾತಿ ಆಧಾರಿತವಾಗಿ ಬೇರೆ ಬೇರೆ ಸೂತ್ರ ಹೆಣೆಯಲಾಗುತ್ತದೆ.