Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕಾಂಗ್ರೆಸ್ ಹೈಕಮಾಂಡ್ ಮಲ್ಲಿಕಾರ್ಜುನ ಖರ್ಗೆ ಅಲ್ಲ, ವೇಣುಗೋಪಾಲ್: ಛಲವಾದಿ ನಾರಾಯಣಸ್ವಾಮಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಕಾಂಗ್ರೆಸ್ ಹೈಕಮಾಂಡ್ ಮಲ್ಲಿಕಾರ್ಜುನ ಖರ್ಗೆ ಅಲ್ಲ, ವೇಣುಗೋಪಾಲ್: ಛಲವಾದಿ ನಾರಾಯಣಸ್ವಾಮಿ

Bengaluru City

ಕಾಂಗ್ರೆಸ್ ಹೈಕಮಾಂಡ್ ಮಲ್ಲಿಕಾರ್ಜುನ ಖರ್ಗೆ ಅಲ್ಲ, ವೇಣುಗೋಪಾಲ್: ಛಲವಾದಿ ನಾರಾಯಣಸ್ವಾಮಿ

Public TV
Last updated: December 3, 2025 5:35 pm
Public TV
Share
3 Min Read
chalavadi narayanaswamy 1
SHARE

ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ (Congress Highcommand) ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅಲ್ಲ, ವೇಣುಗೋಪಾಲ್ (KC Venugopal) ಕಾಂಗ್ರೆಸ್ ಹೈಕಮಾಂಡ್ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸಿಎಂ ಮತ್ತು ವೇಣುಗೋಪಾಲ್ ಭೇಟಿ ಬಗ್ಗೆ ಬಿಜೆಪಿ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಇಷ್ಟು ದಿನ ರಾಜ್ಯದ ಗೊಂದಲಕ್ಕೆ ಎಐಸಿಸಿ ಅಧ್ಯಕ್ಷರು ಎಲ್ಲರನ್ನು ಕರೆದು ಮಾತುಕತೆ ಮಾಡಿ ನನ್ನಿಂದ ಏನು ಆಗಲ್ಲ ಅಂತ ದೆಹಲಿ ಹೋಗಿದ್ದರು. ನನ್ಮ ಕೈಯಲ್ಲಿ ಏನು ಇಲ್ಲ, ಹೈಕಮಾಂಡ್ ಗಮನಕ್ಕೆ ತರುತ್ತೇನೆ ಅಂತ ಹೇಳಿ ಹೋದ್ರು. ಯಾಕೆ ಮಲ್ಲಿಕಾರ್ಜುನ ಖರ್ಗೆ ಹೀಗೆ ಮಾತಾಡಿದ್ರು ಅಂತ ರಾಜ್ಯದ ಜನರಿಗೆ ಗೊಂದಲ ಆಗಿತ್ತು. ಈಗ ಆ ಗೊಂದಲ ಏನು ಅಂತ ಕ್ಲಿಯರ್ ಆಗಿದೆ. ಕಾಂಗ್ರೆಸ್ ಹೈಕಮಾಂಡ್ ಯಾರು ಅಂದರೆ ವೇಣುಗೋಪಾಲ್ ಅಂತ ಗೊತ್ತಾಯ್ತು. ಎಐಸಿಸಿ ಅಧ್ಯಕ್ಷರಿಗಿಂತ ವೇಣುಗೋಪಾಲ್ ದೊಡ್ಡವರು ಅಂತ ಗೊತ್ತಾಯ್ತು ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಹೊಸ ಧಾರಾವಾಹಿ: ರಾಕಿಂಗ್ ಸ್ಟಾರ್ ಯಶ್ ಅಭಿಮಾನಿ ಜೈ ಲಲಿತಾ

Mallikarjun Kharge 2

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರು ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆಗೂ ವೇಣುಗೋಪಾಲ್ ಹೈಕಮಾಂಡ್ ಆಗಿದ್ದಾರೆ. ಇದು ಕಾಂಗ್ರೆಸ್ ಪರಿಸ್ಥಿತಿ ಎಲ್ಲಿಗೆ ಬಂದಿದೆ ಗೊತ್ತಾಯ್ತು. ಯಾವುದೋ ಒಬ್ಬ ವ್ಯಕ್ತಿ ಕೈಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಇದೆ ಎಂದು ಹರಿಹಾಯ್ದರು. ಇದನ್ನೂ ಓದಿ: ಕಾಂಗ್ರೆಸ್ ಹೈಕಮಾಂಡ್ ಸತ್ತು ಹೋಗಿದೆ, ಸಿಎಂ-ಡಿಸಿಎಂ ಕುರ್ಚಿ ಕಿತ್ತಾಟ ಬಿಟ್ಟು ರೈತರ ಸಮಸ್ಯೆ ಆಲಿಸಲಿ: ರೇಣುಕಾಚಾರ್ಯ

ಈ ದೇಶ ನಡೆಸೋ ಕಾಂಗ್ರೆಸ್ ಕೈಯಲ್ಲಿ ಇವತ್ತು ಬಂಡವಾಳ ಇಲ್ಲ. ಬಂಡವಾಳಕ್ಕೆ ಇರೋ ಒಂದೇ ಒಂದು ರಾಜ್ಯ ಕರ್ನಾಟಕ. ವೇಣುಗೋಪಾಲ್ ಅಲ್ಲಿ ಕುಳಿತು ಕಾಂಗ್ರೆಸ್‌ನಲ್ಲಿ ಇರೋ 2-3 ಗುಂಪುಗಳನ್ನ ಕರೆಯುತ್ತಿದ್ದಾರೆ. ಯಾವ ಗುಂಪು ಎಷ್ಟು ಬಾಳಿಕೆ ಬರುತ್ತೆ ಅಂತ ವೇಣುಗೋಪಾಲ್ ನೋಡುತ್ತಿದ್ದಾರೆ. ಕಾಂಗ್ರೆಸ್‌ಗೆ ಮೊದಲು ಎಟಿಎಂ ಲೀಡರ್ ಬೇರೆ ಇದ್ದರು. ಆ ಜನರಲ್ ಸೆಕ್ರೆಟರಿ ಬೇರೆ. ಹೈಕಮಾಂಡ್ ಜನರಲ್ ಸೆಕ್ರೆಟರಿ ವೇಣುಗೋಪಾಲ್. ಇವರು ಯರ‍್ಯಾರು ಎಷ್ಟಕ್ಕೆ ಬಾಳುತ್ತೀರಾ. ನೀವು ಎಷ್ಟಕ್ಕೆ ಬಾಳುತ್ತೀರಾ ಅಂತ ಇಬ್ಬರನ್ನು ತೂಕ ಮಾಡೋ ಸ್ಥಿತಿಗೆ ಬಂದಿದೆ. ರಾಜ್ಯದ ಹಿತ ಮರೆತು ಅಧಿಕಾರ ಉಳಿಯೋಕೆ, ಛೇರ್ ಉಳಿಸಿಕೊಳ್ಳಬೇಕು ಅಂತ ಸಿಎಂ-ಡಿಸಿಎಂ ಪೈಪೋಟಿಗೆ ಬಿದ್ದು ರಾಜ್ಯದ ಸ್ಥಿತಿ ಗಂಭೀರ ಮಾಡಿದ್ದಾರೆ ಎಂದು ಸಿಎಂ, ಡಿಸಿಎಂ, ಹೈಕಮಾಂಡ್ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಶ್ರೀರಂಗಪಟ್ಟಣ | ಜಾಮಿಯಾ ಮಸೀದಿ ಹಿಂದೂಗಳದ್ದು, ಹನುಮ ಮಂದಿರ ಮತ್ತೆ ಕಟ್ಟುವೆವು – ಮಾಲಾಧಾರಿಗಳ ಬಿಗಿಪಟ್ಟು

KC Venugopal

ರಾಜ್ಯದಲ್ಲಿ ಅನೇಕ ಸಮಸ್ಯೆ ಇದೆ. ರೈತರ ಬಗ್ಗೆ ದಲಿತರ ಬಗ್ಗೆ ಕೇಳೋರು ಇಲ್ಲ. ದಲಿತರ ಯೋಗ ಕ್ಷೇಮ ಈ ಸರ್ಕಾರ ನೋಡಿಲ್ಲ. ಕಾಂಗ್ರೆಸ್‌ನಲ್ಲಿರೋ ದಲಿತ ಲೀಡರ್‌ಗಳಿಗೂ ಕಾಂಗ್ರೆಸ್ ಉಳಿಯೋದು ಮುಖ್ಯ. ದಲಿತ ಸಮುದಾಯ ಉಳಿಯೋದು ಮುಖ್ಯ ಅಲ್ಲ. ಅಧಿವೇಶನ 8 ರಿಂದ ಪ್ರಾರಂಭ ಆಗುತ್ತಿದೆ. ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಮಾಡೋಕೆ ಅಧಿವೇಶನ ಮಾಡುತ್ತೇವೆ. ಆದರೆ ಈಗಾಗಲೇ 31 ಬಿಲ್‌ಗಳು ಇವೆ. ಈಗ ಮತ್ತೆ 22 ಹೊಸ ಬಿಲ್‌ಗಳು ಇವೆ ಅಂತ ಹೇಳುತ್ತಿದ್ದಾರೆ. ಇದು ಬಿಲ್ ಪಾಸ್ ಅಧಿವೇಶನನಾ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಶಿವನಸಮುದ್ರ ನಾಲೆಯಿಂದ ಆನೆ ರಕ್ಷಿಸಿದ ಸಿಬ್ಬಂದಿ ಸನ್ಮಾನಿಸಿದ ಸಚಿವ ಈಶ್ವರ ಖಂಡ್ರೆ

ಸದನ ನಡೆಯೋದೆ 8-9 ದಿನ. ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಇಲ್ಲ. ರಾಜು ಕಾಗೆ ಪ್ರತ್ಯೇಕ ರಾಜ್ಯ ಬೇಕು ಅಂತ ಕೇಳುತ್ತಿದ್ದಾರೆ. ನಿಮ್ಮದೇ ಶಾಸಕರು. ಇದಕ್ಕೆ ಸರ್ಕಾರ ಉತ್ತರ ಕೊಡಬೇಕು. ಕಾಂಗ್ರೆಸ್ ದೇಶ, ರಾಜ್ಯ ಒಡೆಯೋದ್ರಲ್ಲಿ ನಿಪುಣರು. ಯುಪಿ, ಛತ್ತೀಸ್‌ಗಢ, ಆಂಧ್ರ ಪ್ರದೇಶ ಒಡೆದರು. ಈಗ ಕರ್ನಾಟಕ ಒಡೆಯೋಕೆ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಅನುಮಾನ ಮೂಡುತ್ತಿದೆ. ಈ ಬಿಲ್ ಪಾಸ್ ಮಾಡೋಕೆ ವಿಶೇಷ ಅಧಿವೇಶನ ಕರೆಯಿರಿ. ಆದರೆ ಬೆಂಗಳೂರಿಗೆ ಸಂಬಂಧಿಸಿದ ಬಿಲ್ ಬೆಳಗಾವಿಯಲ್ಲಿ ಮಾಡೋದು ಸರಿಯಲ್ಲ ಎಂದರು. ಇದನ್ನೂ ಓದಿ: ‘ಸಂಚಾರ್ ಸಾಥಿ’ ಆ್ಯಪ್ ಪ್ರಿ-ಇನ್ಸ್ಟಾಲ್ ಕಡ್ಡಾಯವಲ್ಲ: ಕೇಂದ್ರ ಸ್ಪಷ್ಟನೆ

ಸಚಿವ ಹೆಚ್‌ಕೆ ಪಾಟೀಲ್‌ರನ್ನ ಏನೋ ಅಂದುಕೊಂಡಿದ್ದೆ. ಉತ್ತರ ಕರ್ನಾಟಕ ಭಾಗದ ನಾಯಕರಾಗಿ ಅವರು ಆ ಭಾಗಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕ ಹೀಗೆ ತಾರತಮ್ಯ ಆಗೋಕೆ ಉತ್ತರ ಕರ್ನಾಟಕದ ನಾಯಕರೇ ಕಾರಣ. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಯಾಕೆ ಹಿಂದುಳಿದಿದೆ? ಅಲ್ಲಿಯವರೇ ಸಿಎಂ ಆಗಿದ್ದರು ಯಾಕೆ ಅಭಿವೃದ್ಧಿ ಆಗಿಲ್ಲ? ತಾರತಮ್ಯ ಮಾಡೋರಿಗೆ ತಕ್ಕ ಪಾಠ ಕಲಿಸೋ ಕೆಲಸ ಮಾಡಬೇಕು ಎಂದು ಕರೆ ನೀಡಿದರು. ಇದನ್ನೂ ಓದಿ: ಇಡ್ಲಿ, ನಾಟಿಕೋಳಿ ತಿಂದಮೇಲೆ ಎಲ್ಲವೂ ಮುಗಿದಿದೆ, ಇನ್ನು ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ: ಇಕ್ಬಾಲ್ ಹುಸೇನ್

TAGGED:bengaluruchalavadi narayanaswamycongressKC Venugopalmallikarjun khargeಕಾಂಗ್ರೆಸ್ಕೆಸಿ ವೇಣುಗೋಪಾಲ್ಛಲವಾದಿ ನಾರಾಯಣಸ್ವಾಮಿಬೆಂಗಳೂರುಮಲ್ಲಿಕಾರ್ಜುನ ಖರ್ಗೆ
Share This Article
Facebook Whatsapp Whatsapp Telegram

Cinema news

Rishab Shetty
ಕೊಲ್ಲೂರು ಮೂಕಾಂಬಿಕಾ ದೇವಿ ದರ್ಶನ ಪಡೆದ ರಿಷಬ್ ದಂಪತಿ
Cinema Districts Karnataka Latest Sandalwood Top Stories
Rachita Ram
ಪ್ರೇಮಿಗಳ ದಿನದಂದೆ I Love You ಅಂತ ರಚ್ಚು ಪ್ರಪೋಸ್‌ – ಹೇಳಿದ್ದು ಯಾರಿಗೆ?
Bengaluru City Cinema Latest Main Post Sandalwood
ranveer singh 2
ಬಿಷ್ಣೋಯ್ ಗ್ಯಾಂಗ್‌ನಿಂದ ಮತ್ತೆ ರಣವೀರ್ ಸಿಂಗ್‌ಗೆ ಬೆದರಿಕೆ
Cinema Latest Top Stories
Joe Simon
ಫಿಲ್ಮ್‌ ಚೇಂಬರ್‌ನಲ್ಲೇ ಹೃದಯಾಘಾತ – ಸಾಹಸಸಿಂಹ ಚಿತ್ರದ ನಿರ್ದೇಶಕ ಜೊ ಸೈಮನ್ ನಿಧನ
Cinema Latest Main Post

You Might Also Like

yadgir
Districts

ಯಾದಗಿರಿಯಲ್ಲಿ ಅನಿಷ್ಟ ಪದ್ಧತಿ ಇನ್ನೂ ಜೀವಂತ – ಸ್ವಕುಳ ಸಾಳಿ ಸಮಾಜದ 15 ಕುಟುಂಬಕ್ಕೆ ಬಹಿಷ್ಕಾರ ಶಿಕ್ಷೆ

Public TV
By Public TV
1 minute ago
Bengaluru GBA Skywalk
Bengaluru City

18 ಟ್ರಾಫಿಕ್ ಹಾಟ್‌ಸ್ಪಾಟ್ ಪ್ರದೇಶಗಳಲ್ಲಿ ಸ್ಕೈವಾಕ್ ನಿರ್ಮಾಣಕ್ಕೆ ಜಿಬಿಎ ಪ್ಲ್ಯಾನ್

Public TV
By Public TV
17 minutes ago
siddaramaiah dk shivakumar
Bengaluru City

ʻಪವರ್‌ ಫೈಟ್‌ʼ ನಡುವೆ ನಾಳೆಯಿಂದ 27 ಶಾಸಕರ ಫಾರಿನ್ ಟ್ರಿಪ್‌ ಫಿಕ್ಸ್?‌

Public TV
By Public TV
21 minutes ago
Team India
Cricket

ಭಾರೀ ಮುಖಭಂಗ – ಪಾಕ್‌ ಸೋಲೋದು ಗೊತ್ತಾಗ್ತಿದ್ದಂತೆ ಮೈದಾನದಿಂದ ಪೇರಿಕಿತ್ತ ಪಿಸಿಬಿ ಅಧ್ಯಕ್ಷ

Public TV
By Public TV
42 minutes ago
Ramalinga Reddy BMTC Electric Bus
Bengaluru City

ಎಲೆಕ್ಟ್ರಿಕ್ ಬಸ್ ನಿರ್ವಹಣೆ ಬಗ್ಗೆ ಅಸಮಾಧಾನ – ಸಾರಿಗೆ ಸಚಿವರಿಂದ ಮತ್ತೆ ಕೇಂದ್ರಕ್ಕೆ ಪತ್ರ

Public TV
By Public TV
55 minutes ago
mattighatt falls
Districts

ಶಿರಸಿಯ ಮತ್ತಿಘಟ್ಟ ಫಾಲ್ಸ್‌ನಲ್ಲಿ ಮುಳುಗಿ ವಿದ್ಯಾರ್ಥಿ ಸಾವು

Public TV
By Public TV
9 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?