ಕಾಂಗ್ರೆಸ್ ಹೈಕಮಾಂಡ್ ನಮಗೆ ದೇವಸ್ಥಾನ ಇದ್ದ ಹಾಗೆ: ಡಿಕೆಶಿ

Public TV
1 Min Read
DK Shivakumar 10

ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ (Congress Highcommand) ನಮಗೆ ದೇವಸ್ಥಾನ ಇದ್ದ ಹಾಗೆ, ಸಮಯ ಸಿಕ್ಕರೆ ಹೈಕಮಾಂಡ್ ಭೇಟಿಯಾಗಿ ಅವರಿಗೆ ಕೈ ಮುಗಿದು ಬರುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ತಿಳಿಸಿದ್ದಾರೆ.

ಎರಡು ದಿನ ದೆಹಲಿ ಪ್ರವಾಸ ಕೈಗೊಳ್ಳುತ್ತಿರುವ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಎತ್ತಿನಹೊಳೆ ಯೋಜನೆ ಸಂಬಂಧಿಸಿದಂತೆ ಕೇಂದ್ರ ಅರಣ್ಯ ಸಚಿವರನ್ನು ಭೇಟಿಯಾಗಬೇಕು. ತುಮಕೂರು ಮತ್ತು ಹಾಸನ ವಿಚಾರದಲ್ಲಿ ಕೇಂದ್ರ ಅನುಮತಿ ಕೊಡಬೇಕಿದೆ. ಈ ವಿಷಯದ ಕುರಿತು ಚರ್ಚೆಗೆ ಅವಕಾಶ ಕೊಟ್ಟಿದ್ದಾರೆ. ಅರಣ್ಯ ಸಚಿವರ ಜೊತೆ ಕೇಂದ್ರ ಜಲ ಸಂಪನ್ಮೂಲ ಸಚಿವರು ಸಮಯ ಕೊಟ್ಟಿದ್ದಾರೆ. ಅವರ ಜೊತೆಗೂ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಹಾಸನದಲ್ಲಿ ಮಾತ್ರ ಹಾರ್ಟ್ ಅಟ್ಯಾಕ್ ಕೇಸ್ ಜಾಸ್ತಿ ಆಗಿಲ್ಲ, ಇಡೀ ದೇಶದಲ್ಲಿ ಆಗ್ತಿದೆ: ಎ.ಮಂಜು

ಇದೇ ವೇಳೆ ಸಮಯ ಸಿಕ್ಕರೆ ಹೈಕಮಾಂಡ್ ನಾಯಕರನ್ನು ಭೇಟಿಯಾಗ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಹೈಕಮಾಂಡ್ ಅನ್ನೋದು ದೇವಸ್ಥಾನ ಇದ್ದ ಹಾಗೆ. ಅವಕಾಶ ಸಿಕ್ಕರೆ ಭೇಟಿ ಆಗಿ ಕೈ ಮುಗಿದು ಬರುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಹಿಮಾಚಲಪ್ರದೇಶ: 17 ದಿನದಲ್ಲಿ 19 ಬಾರಿ ಮೇಘಸ್ಫೋಟ – 82 ಸಾವು, ಬದರೀನಾಥ ಮಾರ್ಗ ಬಂದ್

Share This Article