ಬೆಂಗಳೂರು: ಸಂಪುಟ ಪುನಾರಚನೆಗೆ ರಾಹುಲ್ ಗಾಂಧಿ (Rahul Gandhi) ಗ್ರೀನ್ ಸಿಗ್ನಲ್, ವಿರೋಧಿಗಳು ಚಿತ್.. ಸಿದ್ದರಾಮಯ್ಯ ಮಾಸ್ಟರ್ ಸ್ಟ್ರೋಕ್… ಯೆಸ್, ಸಿಎಂ ಡೆಲ್ಲಿ ಟೂರ್ ಸಕ್ಸಸ್ ಆದಂತೆ ಕಾಣ್ತಿದೆ. ಫಟಾಫಟ್ ಆಗಿ ರಾಹುಲ್ ಗಾಂಧಿ ಭೇಟಿಗೆ ಸಮಯ ಪಡೆದ ಸಿದ್ದರಾಮಯ್ಯ (Siddaramaiah) ಎಲ್ಲವನ್ನೂ ರಹಸ್ಯವಾಗಿಟ್ಟು ಗುನ್ನಾ ಹೊಡೆದಿದ್ದಾರೆ.
ದೆಹಲಿಗೆ ಬರುತ್ತಿದ್ದಂತೆ ರಾಹುಲ್ ಗಾಂಧಿ ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ ಬಿಹಾರ ಚುನಾವಣೆ ಸೋಲಿನ ಸಮಾಧಾನದ ನೆಪದಲ್ಲಿ ಕ್ಯಾಬಿನೆಟ್ ಪುನಾರಚನೆ ಕ್ಲೈಮ್ ಮಾಡಿದ್ದಾರೆ. ಇದನ್ನೂ ಓದಿ: ಮಾಹಿತಿ ಆಯೋಗಕ್ಕೆ 35,009 ಮೇಲ್ಮನವಿ ಸಲ್ಲಿಕೆ: ಚಾ.ನಗರ ಜಿಲ್ಲೆಯಿಂದ 614 ಮೇಲ್ಮನವಿ- ರಾಜ್ಯ ಮಾಹಿತಿ ಆಯೋಗದ ಆಯುಕ್ತರಿಂದ ವಿವರ

ಸಂಪುಟ ಪುನಾರಚನೆಗೆ ಗ್ರೀನ್ ಸಿಗ್ನಿಲ್ ಕೊಟ್ಟ ರಾಹುಲ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಜೊತೆ ಮಾತನಾಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಸುಮಾರು 12 ರಿಂದ 15ಕ್ಕೂ ಹೆಚ್ಚು ಸಚಿವರಿಗೆ ಸಂಪುಟದಿಂದ ಕೊಕ್ ನೀಡಲಿದ್ದು, 15 ಹೊಸ ಸೇರ್ಪಡೆಗೆ ಸಿಎಂ ಪ್ಲ್ಯಾನ್ ಮಾಡಿದ್ದಾರೆ. ಸೋಮವಾರ ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಸಮಯ ಕೇಳಿರುವ ಸಿಎಂ ಸಿದ್ದರಾಮಯ್ಯ, ಅವತ್ತೇ ಹೈಕಮಾಂಡ್ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ಆದರೆ, ಕ್ಯಾಬಿನೆಟ್ ಬಗ್ಗೆ ಚರ್ಚೆ ಆಗಿಲ್ಲ ಅಂತ ಸಿಎಂ ಹೇಳಿದ್ದಾರೆ.
ಇನ್ನು ಸಿಎಂ ಸಿದ್ದರಾಮಯ್ಯ ಮಾಸ್ಟರ್ ಸ್ಟ್ರೋಕ್‌ಗೆ ಡಿಕೆಶಿ ಚಿತ್ ಆಗಿದ್ದಾರೆ. ಡಿಕೆಶಿ ಡೆಲ್ಲಿ ಎಂಟ್ರಿಗೂ ಮುನ್ನವೇ ರಾಹುಲ್ ಭೇಟಿಯಾಗಿ ಸಿದ್ದರಾಮಯ್ಯ ಟಕ್ಕರ್ ಕೊಟ್ಟಿದ್ದಾರೆ. ಪವರ್ ಶೇರ್ ವಿಚಾರದಲ್ಲಿ ವಿಶ್ವಾಸದಲ್ಲಿದ್ದ ಡಿಕೆಶಿಗೆ ಇವತ್ತಿನ ಮಟ್ಟಿಗೆ ಶಾಕ್ ಎನ್ನಬಹುದು. ಡಿಕೆಶಿ ಇವತ್ತು ದೆಹಲಿಯಲ್ಲೇ ವಾಸ್ತವ್ಯ ಹೂಡಲಿದ್ದು, ರಾಹುಲ್ ಗಾಂಧಿ ಭೇಟಿ ಮಾಡುವ ಸಾಧ್ಯತೆ ಇದೆ. ಆದ್ರೆ ಸಿದ್ದರಾಮಯ್ಯ ಸಂಪುಟ ರಚನೆಗೆ ಗೇಮ್ ಪ್ಲ್ಯಾನ್‌ಗೆ ಡಿಕೆಶಿ ಚೆಕ್‌ಮೇಟ್ ಕುತೂಹಲ ಮೂಡಿಸಿದ್ದು, ಹೈಕಮಾಂಡ್ ಕ್ಲಾರಿಟಿ ಕೊಡುತ್ತಾ ಕಾದುನೋಡಬೇಕಿದೆ.

ರಾಜ್ಯ ಕಾಂಗ್ರೆಸ್ ಸ್ಥಿತಿಗೆ ಬಿಜೆಪಿ ನಾಯಕರು ಲೇವಡಿ
ಈ ನಡುವೆ ಬಿಹಾರ ಫಲಿತಾಂಶ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಸ್ಥಿತಿಗೆ ಬಿಜೆಪಿ ನಾಯಕರು ಲೇವಡಿ ಮಾಡಿದ್ದಾರೆ. ವಿಪಕ್ಷ ನಾಯಕ ಆರ್ ಅಶೋಕ್, ಸಿದ್ದರಾಮಯ್ಯ ಸ್ಟ್ರಾಂಗ್ ಆಗ್ತಿದ್ದಾರೆ. ಇನ್ಮುಂದೆ ರಾಹುಲ್ ಗಾಂಧಿ ಸಿದ್ದರಾಮಯ್ಯ ಮಾತು ಕೇಳಬೇಕು. ಸಿಎಂಗೆ ಶುಕ್ರದೆಸೆ, ರಾಹುಲ್‌ಗೆ ರಾಹುಕಾಲ, ಡಿಕೆಶಿ ಮನೆಗೆ ಹೋಗುವ ಕಾಲ ಬಂದಿದೆ ಎಂದು ಅಶೋಕ್ ಕಾಲೆಳೆದಿದ್ದಾರೆ. ಇದನ್ನೂ ಓದಿ: ಸರ್ಕಾರಕ್ಕೆ 44 ಕೋಟಿ ರೂ. ನಷ್ಟ; ಬೇಲೆಕೇರಿ ಅದಿರು ಕೇಸಲ್ಲಿ ಸತೀಶ್ ಸೈಲ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ
ಒಟ್ಟಿನಲ್ಲಿ ರಾಜ್ಯ ಕಾಂಗ್ರೆಸ್‌ನ ಮುಂದಿನ ಬೆಳವಣಿಗೆಗಳ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಇದನ್ನೂ ಓದಿ: ‘ಡಿಜಿಟಲ್ ಗೋಲ್ಡ್’ ಬಗ್ಗೆ ನಿಮಗೆಷ್ಟು ಗೊತ್ತು?- ಹೂಡಿಕೆ ಮಾಡ್ತಿದ್ದೀರಾ? – ಹಾಗಾದ್ರೆ ಎಚ್ಚರ!

