ಬೆಂಗಳೂರು: ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕ ರವಿ ಬೆಳಗೆರೆ ಬಂಧಿಸೋ ಮೂಲಕ ಗೌರಿ ಲಂಕೇಶ್ ಹತ್ಯೆ ಕೇಸ್‍ನಿಂದ ಜನರನ್ನು ದಿಕ್ಕು ತಪ್ಪಿಸಲು ಸರ್ಕಾರ ಯತ್ನಿಸುತ್ತಿದೆ ಅಂತಾ ಬಿಜೆಪಿ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಗೌರಿ ಲಂಕೇಶ್ ಹಂತಕರ ಬಂಧನಕ್ಕೆ ನೇಮಕಗೊಂಡಿರುವ ಎಸ್‍ಐಟಿ ಕೆಲಸವೇ ಮಾಡುತ್ತಿಲ್ಲ. ಎಸ್‍ಐಟಿ ತಂಡ ಗಣೇಶನ ಮಾಡಿ ಅಂದ್ರೆ ಅವರ ಅಪ್ಪನನ್ನು ಮಾಡ್ತಿದೆ. ಬೆಳಗೆರೆ ಸುಪಾರಿ ಪ್ರಕರಣವನ್ನು ದೊಡ್ಡದು ಮಾಡಲು ಹೊರಟಿದೆ. ಆದ್ರೆ ಗೌರಿ ಕೇಸೇ ಬೇರೆ. ಹಂತಕರ ಬಗ್ಗೆ ಯಾವುದೇ ಸುಳಿವು ಅವರಿಗೆ ಸಿಕ್ಕಿಲ್ಲ. ಜನರ ಮನಸ್ಸನ್ನು ಬೇರೆ ಕಡೆ ತಿರುಗಿಸಲು ರವಿ ಬೆಳೆಗೆರೆ ಪ್ರಕರಣವನ್ನು ಅದಕ್ಕೆ ಲಿಂಕ್ ಮಾಡುತ್ತಿದ್ದಾರೆ. ರವಿ ಬೆಳೆಗೆರೆ ಸುಪಾರಿ ಪ್ರಕರಣ ತನಿಖೆಗೆ ಬೇರೆ ಪೊಲೀಸ್ ವಿಭಾಗಗಳಿವೆ. ಎಸ್‍ಐಟಿ ತನಗೆ ವಹಿಸಿದ ಮೂಲ ಕರ್ತವ್ಯವನ್ನೇ ಮೆರೆತು ಬೇರೆ ಮಾಡಲು ಹೊರಟಿದೆ ಅಂತ ಅಂತ ಕಿಡಿಕಾರಿದ್ರು.
Advertisement
Advertisement
ಗೌರಿ ಹಂತಕರ ಬಗ್ಗೆ ಯಾವುದೇ ಸುಳಿವು ಅವರಿಗೆ ಸಿಕ್ಕಿಲ್ಲ. ಆದ್ರೆ ವಹಿಸಿದ ಮೂಲ ಕರ್ತವ್ಯವನ್ನು ಬಿಟ್ಟು ಬೆಳಗೆರೆ ಕೇಸ್ ಹಿಂದೆ ಬಿದ್ದಿದೆ. ಒಟ್ಟಿನಲ್ಲಿ ವಿಷಯಾಂತರ ಮಾಡಲು ಸರ್ಕಾರ ಹೊರಟಿದೆ ಅಂತಾ ಸಿಡಿಮಿಡಿಗೊಂಡಿದ್ದಾರೆ.
Advertisement
ಪೊಲೀಸ್ ಇಲಾಖೆ ಯಾರ ಹಿಡಿತದಲ್ಲಿ ಇದೆ ಅನ್ನೋದೆ ಗೊತ್ತಾಗ್ತಿಲ್ಲ. ಕೆಂಪಯ್ಯ ಹಿಡಿತದಲ್ಲೇ ಪೊಲೀಸ್ ಇಲಾಖೆ ಇದೆ. ರಾಮಲಿಂಗಾರೆಡ್ಡಿ ಕೂಡ ಬೇರೆ ಗೃಹ ಸಚಿವರಂತೆ ಕೆಂಪಯ್ಯ ಕೆಳಗೆ ಕಾರ್ಯನಿರ್ವಹಿಸ್ತಿದ್ದಾರೆ. ಗೌರಿ ಹತ್ಯೆ ಹಂತಕರನ್ನ ಹಿಡಿದೇ ಬಿಡ್ತೀವಿ ಅಂತಾ ಸುಮ್ನೆ ಹೇಳ್ತಿದ್ದಾರೆ ಅಷ್ಟೇ ಅಂತ ಅವರು ಆರೋಪಿಸಿದ್ದಾರೆ.
Advertisement