50 ವರ್ಷಗಳಿಂದ ಕಾಂಗ್ರೆಸ್ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡಿಲ್ಲ: ಬೊಮ್ಮಾಯಿ

Public TV
1 Min Read
BASAVARAJ BOMMAI 13

ಬೀದರ್: ಕಾಂಗ್ರೆಸ್ (Congress) 50 ವರ್ಷಗಳಿಂದ ಲಿಂಗಾಯತರನ್ನು (Lingayats) ಮುಖ್ಯಮಂತ್ರಿ (CM) ಮಾಡೋಕೆ ಆಗಿಲ್ಲ. ಇದೀಗ ಕಾಂಗ್ರೆಸ್ ಲಿಂಗಾಯತರ ಬಗ್ಗೆ ಮೊಸಳೆ ಕಣ್ಣೀರು ಹಾಕುತ್ತಿದೆ. ಅವರಿಗೆ ಯಾವ ನೈತಿಕ ಹಕ್ಕಿದೆ? ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಟಾಂಗ್ ನೀಡಿದರು.

BASAVARAJ BOMMAI 6

ಬಿಜೆಪಿ (BJP) ಲಿಂಗಾಯತರಿಗೆ ಅನ್ಯಾಯ ಮಾಡಿದೆ ಎಂದು ಕಾಂಗ್ರೆಸ್ ಆರೋಪಕ್ಕೆ ಬೀದರ್‌ನ (Bidar) ಭಾಲ್ಕಿಯಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ, ಲಿಂಗಾಯತರು ಅಷ್ಟೇ ಅಲ್ಲಾ, ಎಲ್ಲಾ ಸಮುದಾಯಕ್ಕೆ ಮಾಡಿದ್ದನ್ನು ತಿಳಿಸಬೇಕಿದೆ. ಹೀಗಾಗಿ ಯಡಿಯೂರಪ್ಪನವರ ಸಭೆಯಲ್ಲಿ ತೀರ್ಮಾನ ಮಾಡಿದ್ದಾರೆ. ಲಿಂಗಾಯತರಿಗೆ ಅತಿ ಹೆಚ್ಚು ಸೀಟುಗಳು ಕೊಟ್ಟಿದ್ದು ಬಿಜೆಪಿ. ಆದರೆ ಸಮಾಜವನ್ನು ಹೊಡೆಯುವಂತಹ ಕೆಲಸ ಹಾಗೂ ಹುನ್ನಾರ ಮಾಡಿದ್ದು ಕಾಂಗ್ರೆಸ್‌ನವರು ಎಂದು ಸಿಎಂ ಗರಂ ಆದರು. ಇದನ್ನೂ ಓದಿ: ಸಿದ್ದರಾಮಯ್ಯಗೆ ಪುಕ್ಕಲುತನ ಕಾಡ್ತಿರೋದ್ರಿಂದ 18 ವರ್ಷ ತುಂಬದ ಮೊಮ್ಮಗ ಜೊತೆ ಪ್ರಚಾರಕ್ಕೆ ಬರ್ತಿದ್ದಾರೆ – ಸಿಂಹ ಕಿಡಿ

ನಾವು ಸಮಾಜವನ್ನು ಜೋಡಿಸುವ ಕೆಲಸ ಮಾಡುತ್ತೇವೆ. ಆದರೆ ನಾಯಕತ್ವ ಯಾರು ಕೊಟ್ಟಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. 50 ವರ್ಷದಿಂದ ನಿಜಲಿಂಗಪ್ಪ ಬಳಿಕ ಕಾಂಗ್ರೆಸ್‌ನಲ್ಲಿ ಲಿಂಗಾಯತರು ಯಾರೂ ಸಿಎಂ ಆಗಲಿಲ್ಲ. ವೀರೇಂದ್ರ ಪಾಟೀಲ್‌ಗೆ 9 ತಿಂಗಳಲ್ಲೇ ಹೀನಾಯವಾಗಿ ತೆಗೆದಿದ್ದರು ಎಂದು ಕಾಂಗ್ರೆಸ್ ನಾಯಕರಿಗೆ ಸಿಎಂ ತೀರುಗೇಟು ನೀಡಿದರು. ಇದನ್ನೂ ಓದಿ: ದಿಢೀರ್‌ ಬೆಳವಣಿಗೆ – ಕನಕಪುರದಿಂದ ಡಿಕೆ ಸುರೇಶ್‌ ನಾಮಪತ್ರ ಸಲ್ಲಿಕೆ

Share This Article