ಬೆಂಗಳೂರು: ಕಾಂಗ್ರೆಸ್‌ನವರಿಗೆ (Congress) ಹಿಂದೂಗಳೇ (Hindu) ಟಾರ್ಗೆಟ್. ಹಿಂದೂಗಳನ್ನ ಟೀಕೆ ಮಾಡೋದನ್ನ ಕಾಂಗ್ರೆಸ್ ಬ್ರ‍್ಯಾಂಡ್ ಮಾಡಿಕೊಂಡಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ (R Ashok) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಾವರ್ಕರ್ (Vinayak Damodar Savarkar) ದನದ ಮಾಂಸ ತಿನ್ನುತ್ತಿದ್ದರು ಎಂಬ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಅವರಿಗೆ ಸಾವರ್ಕರ್ ವಿಲನ್ ಆಗಿದ್ದಾರೆ. ಅದಕ್ಕೆ ಹೀಗೆಲ್ಲ ಮಾತನಾಡುತ್ತಾರೆ. ಸಾವರ್ಕರ್ ಕಾಲಾಪಾನಿ ಶಿಕ್ಷೆ ಒಳಗಾಗಿದ್ದವರು, ಸ್ವಾತಂತ್ರ‍್ಯ ಹೋರಾಟಗಾರರು. ಈಗ ಅವರು ಸತ್ತು ಸ್ವರ್ಗದಲ್ಲಿ ಇದ್ದಾರೆ. ಯಾಕೆ ಅವರ ಬಗ್ಗೆ ಅಪಾದನೆ ಮಾಡುತ್ತಿದ್ದೀರಾ ಎಂದು ಕಿಡಿಕಾರಿದರು. ಇದನ್ನೂ ಓದಿ: ನಾನು ರಾಜೀನಾಮೆ ಕೊಡ್ತೀನಿ, ಸಿದ್ದರಾಮಯ್ಯನವರೂ ನೈತಿಕತೆ ಹೊತ್ತು ರಾಜೀನಾಮೆ ನೀಡಲಿ – ಆರ್.ಅಶೋಕ್
ಕಾಂಗ್ರೆಸ್ ಅವರಿಗೆ ಕೇಸರಿ ಶಾಲು ಹಾಕಬಾರದು. ನಾಮ ಹಾಕಬಾರದು. ಕುಂಕುಮ ಇಡೋದು ಆಗಲ್ಲ. ಮುಂದೆ ಹೆಣ್ಣುಮಕ್ಕಳು ಬಳೆ, ಕುಂಕುಮ ಹಾಕೋದಕ್ಕೂ ವಿರೋಧ ಮಾಡುತ್ತಾರೆ. ಕಾಂಗ್ರೆಸ್ ಅವರು ಮೊದಲು ಹಿಂದೂಗಳನ್ನು ತೆಗಳೋದು ಬಿಡಬೇಕು. ಹಿಂದೂಗಳನ್ನ ಮಾತ್ರ ಯಾಕೆ ಟೀಕೆ ಮಾಡುತ್ತೀರಾ? ಮುಸ್ಲಿಮರಿಗೆ ಒಂದು ಮಾತು ಆಡಿದ್ದೀರಾ ನೀವು? ಹಿಂದೂಗಳನ್ನು ಮಾತ್ರ ಟಾರ್ಗೆಟ್ ಯಾಕೆ ಮಾಡುತ್ತೀರಿ ಎಂದು ಹರಿಹಾಯ್ದರು. ಇದನ್ನೂ ಓದಿ: ಚಾರಣಕ್ಕೆ ಅನ್‌ಲೈನ್ ಟಿಕೆಟ್ – ಅರಣ್ಯ ವಿಹಾರ ವೆಬ್‌ಸೈಟ್ ಲೋಕಾರ್ಪಣೆ
ಮುಸ್ಲಿಮರು ಒಂದೇ ದೇವರು ಅಂತಾರೆ. ನಾವು ಮುಕ್ಕೋಟಿ ದೇವರನ್ನು ಪೂಜೆ ಮಾಡುತ್ತೇವೆ. ಬೆಳೆಯನ್ನು ನಾವು ಪೂಜೆ ಮಾಡುತ್ತೇವೆ. ನಮ್ಮ ಧರ್ಮ ಯಾಕೆ ಅವಹೇಳನ ಮಾಡುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ನಾನು ಬಳ್ಳಾರಿ ಹೋಗೋವಾಗ ಪಾದಯಾತ್ರೆ ಮಾಡಿ ಸಿಎಂ ಆದವರು ಮನ:ಶಾಂತಿ ಕಳೆದುಕೊಂಡಿದ್ದಾರೆ: ಜನಾರ್ದನ ರೆಡ್ಡಿ