ಬೆಂಗಳೂರು: ದೆಹಲಿಯಲ್ಲಿ ಕಾಂಗ್ರೆಸ್ (Congress) ಹ್ಯಾಟ್ರಿಕ್ ಸಾಧನೆ ಮಾಡಿದೆ. ಸತತ 3ನೇ ಬಾರಿಗೆ ಶೂನ್ಯ ಸಂಪಾದನೆ ಮಾಡಿದೆ. ಅಲ್ಲದೇ ದೆಹಲಿಯಲ್ಲಿ ಡಿಕೆಶಿ ಗ್ಯಾರಂಟಿ ಠುಸ್ ಪಟಾಕಿ ಆಗಿದೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ವ್ಯಂಗ್ಯವಾಡಿದರು.
???? Historic achievement by @IncIndia in Delhi! Under the “leadership” of @RahulGandhi, they have achieved something truly extraordinary—???? “ZERO” seats! ????#DelhiElections2025 pic.twitter.com/hxUwsW0UgQ
— BJP Karnataka (@BJP4Karnataka) February 8, 2025
ದೆಹಲಿ ಚುನಾವಣಾ ಫಲಿತಾಂಶದ (Delhi Election Results) ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹ್ಯಾಟ್ರಿಕ್ ಸಾಧನೆ ಮಾಡಿದೆ. ಮೋದಿಗೆ ಪರ್ಯಾಯ ನಾಯಕನನ್ನ ಕೊಡ್ತೀವಿ ಅಂತ ಬಿಂಬಿಸಿಕೊಳ್ಳುವ ಕಾಂಗ್ರೆಸ್‌ಗೆ ಲೋಕಸಭಾ ಚುನಾವಣೆ, ಹರಿಯಾಣ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳಲ್ಲಿ ಮುಖಭಂಗ ಆಗಿತ್ತು. ಈಗ ಕಾಂಗ್ರೆಸ್ ಸ್ಥಿತಿ ಏನು ಅಂತ ಜನ ತೋರಿಸಿಕೊಟ್ಟಿದ್ದಾರೆ ಎಂದು ತಿವಿದರು. ಇದನ್ನೂ ಓದಿ: ಜನಶಕ್ತಿಯೇ ಸರ್ವಶ್ರೇಷ್ಠ – ಅಭಿವೃದ್ಧಿ, ಉತ್ತಮ ಆಡಳಿತ ಗೆಲ್ಲುತ್ತದೆ: ಮೋದಿ
ಇನ್ನೂ ದೆಹಲಿಯಲ್ಲಿ ಗ್ಯಾರಂಟಿ ಪ್ರಚಾರಕ್ಕೆ ಡಿಕೆ ಶಿವಕುಮಾರ್ ಅವರೇ ಹೋಗಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿ, ಗ್ಯಾರಂಟಿಗಳೆಲ್ಲವೂ ತಾತ್ಕಾಲಿಕ. ನಮ್ಮ ರಾಜ್ಯದಲ್ಲೇ ಮೈಕ್ರೋ ಫೈನಾನ್ಸ್‌ನಿಂದ ಏನಾಗ್ತಿದೆ ಎಂಬುದನ್ನು ಜನ ನೋಡ್ತಿದ್ದಾರೆ. ಹಾಗಾಗಿ ದೆಹಲಿಯ ಪ್ರಬುದ್ಧ ಮತದಾರರು ಅರ್ಥಮಾಡಿಕೊಂಡಿದ್ದಾರೆ. ತಾತ್ಕಾಲಿಕ ಗ್ಯಾರಂಟಿಗಿಂತ ನರೇಂದ್ರ ಮೋದಿ ಅವರ ದೃಢ ನಾಯಕತ್ವ ಹೊಂದಿರುವ ಬಿಜೆಪಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬುದನ್ನು ಜನ ಅರ್ಥಮಾಡಿಕೊಂಡಿದ್ದಾರೆ. ಇದರಿಂದ ಬಿಜೆಪಿಗೆ ಗೆಲುವು ಸಿಕ್ಕಿದೆ ಎಂದು ದೆಹಲಿ ಜನತೆಗೆ ಧನ್ಯವಾದ ಅರ್ಪಿಸಿದರು. ಇದನ್ನೂ ಓದಿ: ದೆಹಲಿ ಸಿಎಂ ಅತಿಶಿಗೆ ಗೆಲುವು – ಕಲ್ಕಾಜಿ ಕ್ಷೇತ್ರ ಉಳಿಸಿಕೊಂಡ ಆಪ್ ನಾಯಕಿ
ಮುಂದುವರಿದು… ಬಿಜೆಪಿಗೆ 27 ವರ್ಷಗಳ ನಂತರ ಅಭೂತಪೂರ್ವ ಗೆಲುವು ಸಿಕ್ಕಿದೆ. ದೆಹಲಿ ಜನತೆಗೆ, ಮತದಾರರಿಗೆ, ವರಿಷ್ಠ ನಾಯಕರಿಗೆ, ದೆಹಲಿ ಬಿಜೆಪಿಗೆ ಅಭಿನಂದನೆ ಸಲ್ಲಿಸುತ್ತೇನೆ. ಆಪ್ ಪಕ್ಷ ಭ್ರಷ್ಟಾಚಾರ ವಿರುದ್ಧ ಆಂದೋಲನ ಮಾಡಿ ಅಧಿಕಾರಕ್ಕೆ ಬಂದಿತ್ತು. ಆದರೀಗ ಕೇಜ್ರಿವಾಲ್, ಆಪ್ ಮುಖವಾಡ ಕಳಚಿ ಬಿದ್ದಿದೆ, ಆಪ್ ನಾಯಕರ ಬಣ್ಣವೂ ಬಯಲಾಗಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹೆಂಡತಿ ತವರಿಗೆ ಹೋಗಿದ್ದಕ್ಕೆ ಖುಷಿಯಾಗಿದೆ – ಪೋಸ್ಟರ್ ಹಾಕಿ, ಬಿಸ್ಕತ್ ಹಂಚಿ ಸಂಭ್ರಮಿಸಿದ ಗಂಡ!