ಬೆಳಗಾವಿ: ಕಾಂಗ್ರೆಸ್ (Congress) ಪಕ್ಷ ಎಂತಹ ನಿರ್ಲಜ್ಜ ಪಕ್ಷವೆಂದರೆ ಪ್ರಧಾನಿ ನರೇಂದ್ರ ಮೋದಿಯವರನ್ನು (Narendra Modi) ಸಾವಿನ ಕೂಪಕ್ಕೆ ತಳ್ಳೋ ಆಹ್ವಾನ ನೀಡಿತ್ತು ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ಹೇಳಿದರು.
ಬೆಳಗಾವಿಯ (Belagavi) ಹಿಂಡಲಗಾದಲ್ಲಿ ಬಿಜೆಪಿ (BJP) ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಿ ಮೋದಿ ವಿಷ ಸರ್ಪ, ವಿಷ ಸರ್ಪ ನೆಕ್ಕಿದ್ರೆ ಸತ್ತು ಹೋಗ್ತಾರೆ ಎಂಬ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ಕಾಂಗ್ರೆಸ್ ಪಕ್ಷ ನರೇಂದ್ರ ಮೋದಿಯವರ ಶತಾಯುಷಿ ತಾಯಿ ಬಗ್ಗೆ ಅವಹೇಳನ ಮಾಡಿದ್ದ ಪಕ್ಷ. ನರೇಂದ್ರ ಮೋದಿಯವರ ಸ್ವರ್ಗೀಯ ತಂದೆಯವರ ಅಪಮಾನ ಮಾಡಿದ ನಿರ್ಲಜ್ಜ ಪಕ್ಷ ಕಾಂಗ್ರೆಸ್ ಎಂದರು.
ನಾನು ಮಲ್ಲಿಕಾರ್ಜುನ ಖರ್ಗೆ ಸಾಹೇಬರಿಗೆ ಹೇಳಬಯಸುತ್ತೇನೆ. ನೀವು ಇಂದು ರಾಜಕೀಯ ಪಕ್ಷವೊಂದರ ಅಧ್ಯಕ್ಷರಾಗಿದ್ದೀರಿ. ಆ ರಾಜಕೀಯ ಪಕ್ಷದ ಇತಿಹಾಸ ಹೇಗಿದೆ ಎಂದರೆ ದಲಿತ ನಾಯಕನಾದರೆ ರಾಹುಲ್ ಗಾಂಧಿ ತಮ್ಮ ಚಪ್ಪಲಿ ಅವರಿಂದ ತೆಗೆಸುತ್ತಾರೆ. ದೇಶದಲ್ಲಿ ಮೊದಲ ಬಾರಿ ಆದಿವಾಸಿ ಮಹಿಳೆಗೆ ರಾಷ್ಟ್ರಪತಿ ಅಭ್ಯರ್ಥಿ ಮಾಡಿದರೆ ಅವರ ಬಗ್ಗೆ ಅವಹೇಳನ ಹೇಳಿಕೆ ನೀಡುವಂತ ಪಕ್ಷ ಕಾಂಗ್ರೆಸ್ ಎಂದು ಕಟುವಾಗಿ ಟೀಕಿಸಿದರು.
ನಿಮ್ಮ ಪಕ್ಷ ಹಿಂದೂ ಸಮಾಜಕ್ಕೆ ಅಪಮಾನ ಮಾಡುವವರನ್ನು ಸ್ಟಾರ್ ಪ್ರಚಾರಕ ಮಾಡಿದೆ. ಕಾಂಗ್ರೆಸ್ ಪಕ್ಷ ಎಸ್‌ಡಿಪಿಐ ಬೆಂಬಲ ಕೇಳುತ್ತದೆ. ಪಿಎಫ್‌ಐ ಗೂಂಡಾಗಳನ್ನು ಬಿಡುಗಡೆ ಮಾಡುವ ಮಾತುಗಳನ್ನಾಡುತ್ತದೆ. ಇಂದು ಕಾಂಗ್ರೆಸ್ ನಾಯಕರು ಮತ್ತೊಮ್ಮೆ ನರೇಂದ್ರ ಮೋದಿಗೆ ಬೈಯ್ಯುತ್ತಿದ್ದಾರೆ ಎಂದು ಕಿಡಿಕಾರಿದರು.
ಖರ್ಗೆ ಸಾಹೇಬರು ವಯಸ್ಸಿನಲ್ಲಿ ನನಗಿಂತ ದೊಡ್ಡವರು. ನಿಮಗೆ ಈ ಅಭದ್ರತೆ ಶೋಭೆ ತರಲ್ಲ. ನಿಮಗೂ ಗೊತ್ತು, ನಮಗೂ ಗೊತ್ತು. ಮೇಡಮ್ ಆದೇಶ ಬಂದಿದ್ದಕ್ಕೆ ನರೇಂದ್ರ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಬೈದಿದ್ದಾರೆ. ನಾನು ಗಾಂಧಿ ಕುಟುಂಬಕ್ಕೆ ಹೇಳಬಯಸುತ್ತೇನೆ. ನೀವು ಮೋದಿ ಸಾವು ಬಯಸಿದರೆ ಕರ್ನಾಟಕದ ಮಹಿಳೆಯರು ಅವರ ದೀರ್ಘಾಯುಷ್ಯ ಪ್ರಾರ್ಥನೆ ಮಾಡುತ್ತಾರೆ. ಇಂದು ಮೋದಿ ಗೆಲ್ಲಿಸುವಂತೆ ಮಹಿಳೆಯರಿಗೆ ವಿಶೇಷ ಪ್ರಾರ್ಥನೆ ಮಾಡುತ್ತೇನೆ ಎಂದರು. ಇದನ್ನೂ ಓದಿ: ಮೋದಿ ವಿಷದ ಹಾವು ಇದ್ದಂತೆ: ಖರ್ಗೆ
ಕೋವಿಡ್ ವೇಳೆ ಕಾಂಗ್ರೆಸ್ ಸರ್ಕಾರ ಇದ್ದರೆ ಉಚಿತ ವ್ಯಾಕ್ಸಿನ್ ಸಿಗುತ್ತಿತ್ತಾ? ಒಂದು ಇಂಜೆಕ್ಷನ್ ಬೆಲೆ 600 ರೂ. ಮೂರು ಡೋಸ್ ವ್ಯಾಕ್ಸಿನ್‌ಗೆ 1,800 ರೂ. ಇದೆ. ಕಾಂಗ್ರೆಸ್ ಪಕ್ಷ ಮೋದಿ ಹಠಾವೋ ವ್ಯಾಕ್ಸಿನ್ ಹಠಾವೋ ವಿದೇಶದಿಂದ ವ್ಯಾಕ್ಸಿನ್ ತರಿಸಿ ಎನ್ನುತ್ತಿದ್ದರು. 160 ದೇಶಗಳಲ್ಲಿ ಭಾರತದ ವ್ಯಾಕ್ಸಿನ್ ಹೋಗಿದೆ ಎಂದು ಹೇಳಿದರು.
ವಿನಮ್ರತೆಯಿಂದ ನಾನು ಖರ್ಗೆಯವರಿಗೆ ಹೇಳಬಯಸುತ್ತೇನೆ. ಕರ್ನಾಟಕ ಚುನಾವಣೆ ಸೋಲುವವರಿದ್ದೀರಿ, ಅದಕ್ಕೆ ಹೀಗೆ ಹೇಳುತ್ತಿದ್ದೀರಿ. ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಜಗಳ ಎಲ್ಲರಿಗೂ ಗೊತ್ತು. ನಾವು ರಾಜ್ಯದ ಜನರ ಭವಿಷ್ಯಕ್ಕಾಗಿ ಹೋರಾಡುತ್ತಿದ್ದೇವೆ ಎಂದು ಸ್ಮೃತಿ ಇರಾನಿ ಹೇಳಿದರು. ಇದನ್ನೂ ಓದಿ: 130 ರಿಂದ 135 ಸೀಟ್ ಗೆದ್ದು ಸರ್ಕಾರ ರಚನೆ ಮಾಡೋದು ಸೂರ್ಯ ಚಂದ್ರ ಇರುವಷ್ಟೇ ಸತ್ಯ: ಬಿಎಸ್‌ವೈ