ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election) ಕಳೆಯುವವರೆಗೆ ಗ್ಯಾರಂಟಿ ಘೋಷಣೆಯಲ್ಲಿ (Congress Guarantee) ಯಾವುದೇ ಬದಲಾವಣೆ ಇರಕೂಡದು ಎಂದು ಸೋನಿಯಾ ಗಾಂಧಿ (Sonia Gandhi), ರಾಹುಲ್ ಗಾಂಧಿ (Rahul Gandhi) ಕಾಂಗ್ರೆಸ್ ನಾಯಕರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ಚುನಾವಣೆಯಲ್ಲಿ (Karnataka Election) 5 ಗ್ಯಾರಂಟಿ ಯೋಜನೆಗಳೇ ಕಾಂಗ್ರೆಸ್ ಕೈ ಹಿಡಿದ ಹಿನ್ನೆಲೆಯಲ್ಲಿ ಈ ಭರವಸೆಗಳನ್ನು ಜಾರಿ ಮಾಡಲು ಸರ್ಕಾರ ಮುಂದಾಗಿದೆ. ಮೊದಲ ಕ್ಯಾಬಿನೆಟ್‌ನಲ್ಲಿ (Cabinet Meeting) ಈ ಯೋಜನೆ ಜಾರಿಗೆ ತಾತ್ವಿಕ ಒಪ್ಪಿಗೆ ನೀಡಿದ್ದು ಮುಂದಿನ ಕ್ಯಾಬಿನೆಟ್ ಬಳಿಕ ಆದೇಶ ಜಾರಿ ಮಾಡಲಾಗುವುದು ಎಂದು ಸಿದ್ದರಾಮಯ್ಯ (CM Siddaramaiah) ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಪ್ರಮುಖ 6 ಖಾತೆಗಾಗಿ ಸಚಿವರ ಮಧ್ಯೆ ಪೈಪೋಟಿ
Advertisement
Advertisement
ಸಂಪೂರ್ಣ 5 ವರ್ಷದ ಅವಧಿಗೆ ಈ ಘೋಷಣೆ ಮಾಡಲಾಗಿದ್ದು ಲೋಕಸಭಾ ಚುನಾವಣೆ ಕಳೆಯುವವರೆಗೆ ಗ್ಯಾರಂಟಿ ಘೋಷಣೆಯಲ್ಲಿ ಯಾವುದೇ ಬದಲಾವಣೆ ಇರಕೂಡದು ಮತ್ತು ಗೊಂದಲ ಆಗಬಾರದು ಎಂದು ಕಾಂಗ್ರೆಸ್ ಹೈಕಮಾಂಡ್ ಸಂದೇಶ ರವಾನಿಸಿದೆ.
Advertisement
Advertisement
ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಹೆಚ್ಚಿನ ಸ್ಥಾನದ ನಿರೀಕ್ಷೆಯಲ್ಲಿ ಕಾಂಗ್ರೆಸ್ ಪಾಳಯ ಇದೆ. ಈ ಕಾರಣಕ್ಕೆ ಗ್ಯಾರಂಟಿ ಯೋಜನೆ ಜಾರಿ ಸಂಬಂಧ ಯಾವುದೇ ಗೊಂದಲ ಆಗದೇ ಎಚ್ಚರಿಕೆಯಿಂದ ಜಾರಿ ಮಾಡಿ ಎಂಬ ಸಂದೇಶವನ್ನು ಹೈಕಮಾಂಡ್ ಕಳುಹಿಸಿದೆ.