ಬೆಂಗಳೂರು: ಸಂಘಪರಿವಾರದ ಸಂಸ್ಥೆಗೆ ಬಿಜೆಪಿ ಅವಧಿಯಲ್ಲಿ ಮಂಜೂರು ಮಾಡಿದ್ದ ಭೂಮಿ ವಾಪಸ್ ಪಡೆಯಲು ಕಾಂಗ್ರೆಸ್ ಸರ್ಕಾರ (Congress Government) ಕ್ರಮ ತೆಗೆದುಕೊಂಡಿದೆ.
ಜನಸೇವಾ ಟ್ರಸ್ಟ್‌ಗೆ (Janaseva Trust) ಬೆಂಗಳೂರಿನ ತಾವರೆಕೆರೆ ಹೋಬಳಿಯಲ್ಲಿ ಬಿಜೆಪಿ ಸರ್ಕಾರ (BJP Government) 35 ಎಕರೆ 33 ಗುಂಟೆ ಗೋಮಾಳ ಜಮೀನು ನೀಡಿತ್ತು. ಗೋಮಾಳವು ಜಾನುವಾರುಗಳ ಮೇವಿಗಾಗಿ ಮೀಸಲಿರಿಸಿದ ಸರ್ಕಾರಿ ಭೂಮಿಯಾಗಿದೆ. ಈ ಕಾರಣಕ್ಕೆ ಆ ಭೂಮಿಯನ್ನು ವಾಪಸ್ ಪಡೆದಿದ್ದೇವೆ ಎಂದು ಸಚಿವ ಕೃಷ್ಣಬೈರೇಗೌಡ (Krishna Byre Gowda) ತಿಳಿಸಿದರು.
ಸರ್ಕಾರದ ಈ ನಡೆಗೆ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಸಿಎಂ ಬೊಮ್ಮಾಯಿ, ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಜನಸೇವಾ ಟ್ರಸ್ಟ್ ತನ್ನದೇ ಆದ ರೀತಿಯಲ್ಲಿ ಸೇವೆ ಮಾಡುತ್ತಿದೆ. ಈ ಬಗ್ಗೆ ನಮ್ಮ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಿ ಮುಂದಿನ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಸಿದ್ದರಾಮಯ್ಯ (Siddaramaiah) ಅವರ ಕಾಲದಲ್ಲಿ ಭ್ರಷ್ಟಾಚಾರ ನಡೆದಿರದಿದ್ದರೆ ನ್ಯಾಯಾಂಗ ಆಯೋಗ ರಚನೆ ಆಗಿದ್ದು ಯಾಕೆ? ಭ್ರಷ್ಟಾಚಾರ ಮುಚ್ಚಿ ಹಾಕಲು ಎಸಿಬಿ ಸೃಷ್ಟಿ ಮಾಡಿದ್ದರು. ಇದು ಇಡಿ ಜಗತ್ತಿಗೆ ತಿಳಿದಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಆರ್‌ಎಸ್‌ಎಸ್ ಸಂಸ್ಥೆಗಳಿಗೆ ಸರ್ಕಾರ ಮಂಜೂರು ಮಾಡಿದ್ದ ಭೂಮಿ ವಾಪಸ್ ಪಡೆಯುತ್ತೇವೆ: ದಿನೇಶ್ ಗುಂಡೂರಾವ್
ಸಣ್ಣ ನೀರಾವರಿ, ದೊಡ್ಡ ನೀರಾವರಿ ಎಲ್ಲದರಲ್ಲೂ ಭ್ರಷ್ಟಾಚಾರ ನಡೆದಿದೆ. ಅವರಿಗೆ ಭಯ ಇಲ್ಲದಿದ್ದರೆ 2013 ರಿಂದ ಎಲ್ಲ ಪ್ರಕರಣಗಳನ್ನು ತನಿಖೆ ನಡೆಸಲಿ. ಅವರಿಗೆ ಭ್ರಷ್ಟಾಚಾರದ ಪ್ರಕರಣದಲ್ಲಿ ಸಿಲುಕಿಕೊಳ್ಳುವ ಭಯ ಇದೆ. ಯಡಿಯೂರಪ್ಪ ಅವರು ತಮ್ಮ ಕಾಲದ ಅವಧಿಯ ಅಕ್ರಮ ಗಣಿಗಾರಿಕೆಯ ಪ್ರಕರಣಗಳನ್ನು ತನಿಖೆಗೆ ನೀಡಿದ್ದರು ಎಂದು ಹೇಳಿದರು.
`ಸಂಘ’ಕ್ಕೆ ಮಂಜೂರಾದ ಭೂಮಿಯ ಲೆಕ್ಕ
* ದೇವನಹಳ್ಳಿಯಲ್ಲಿ ಚಾಣಕ್ಯ ಖಾಸಗಿ ವಿವಿಗೆ 116.16 ಎಕರೆ ಭೂಮಿ
* ಕೆಐಎಡಿಬಿಗೆ ಸೇರಿದ 250 ಕೋಟಿ ಮೌಲ್ಯದ ಭೂಮಿ ಕೇವಲ 50.17 ಕೋಟಿ ರೂ.ಗೆ ಮಾರಾಟ
* ಹೆಸರಘಟ್ಟದ ಹುರುಳಿಚಿಕ್ಕನಹಳ್ಳಿಯಲ್ಲಿ ರಾಷ್ಟ್ರೋತ್ಥಾನ ಪರಿಷತ್‍ಗೆ 9 ಎಕರೆ ಗೋಮಾಳ ಭೂಮಿ
* ತಾವರೆಕೆರೆಯ ಕುರುಬರಹಳ್ಳಿಯಲ್ಲಿ 35.33 ಎಕರೆ ಗೋಮಾಳ ಭೂಮಿ
* ಆರ್‍ಎಸ್‍ಎಸ್ ಅಂಗಸಂಸ್ಥೆ ಜನಸೇವಾ ಟ್ರಸ್ಟ್‍ಗೆ 35.33 ಎಕರೆ ಪರಭಾರೆ
* ಹೊಸಪೇಟೆಯಲ್ಲಿ ರಾಷ್ಟ್ರೋತ್ಥಾನ ಪರಿಷತ್‍ಗೆ 5 ಎಕರೆ ಜಮೀನು ಮಂಜೂರು
* ಬಳ್ಳಾರಿಯಲ್ಲಿ ರಾಷ್ಟ್ರೋತ್ಥಾನ ಪರಿಷತ್‍ಗೆ ರಿಯಾಯಿತಿ ದರದಲ್ಲಿ ಸಿಎ ನಿವೇಶನ
Web Stories