ಬೆಂಗಳೂರು: ನೋಟು ನಿಷೇಧ ಬಳಿಕ ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರಕ್ಕೆ ಮತ್ತೊಂದು ಶಾಕ್ ನೀಡಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸಜ್ಜಾಗಿದ್ದು, ಮತ್ತೊಂದು ಆದಾಯ ತೆರಿಗೆ ಇಲಾಖೆ ದಾಳಿಯಾಗುವ ಸಾಧ್ಯತೆ ಇದೆ.
ಮೂಲಗಳ ಪ್ರಕಾರ ಬೆಂಗಳೂರಿಗೆ ಬಂದಿರುವ ಐಟಿ ಅಧಿಕಾರಿಗಳ ತಂಡ ಅಗತ್ಯ ಮಾಹಿತಿ ಕಲೆ ಹಾಕುವಲ್ಲಿ ಬ್ಯುಸಿಯಾಗಿದೆ. ಅದರಲ್ಲೂ ಇಂಧನ ಸಚಿವ ಡಿಕೆ ಶಿವಕುಮಾರ್ ಅವರೇ ತಮ್ಮ ದೂರವಾಣಿ ಸಂಭಾಷಣೆಯನ್ನ ಕದ್ದಾಲಿಕೆ ಮಾಡಲಾಗ್ತಿದೆ ಅಂತಾ ಆರೋಪಿಸಿದ್ದಾರೆ.
Advertisement
ಗೋವಿಂದರಾಜು ಡೈರಿಯಲ್ಲಿ ಹೆಸರು ಕೇಳಿಬಂದಿರುವ ಸಚಿವರನ್ನು ಕರೆಸಿ ಐಟಿ ಇಲಾಖೆ ವಿಚಾರಣೆ ಮಾಡಿದೆಯಾದರೂ ಅದ್ರಿಂದ ತೃಪ್ತಿಯಾಗಿಲ್ಲ. ಡಿಕೆಶಿ ಮಾತ್ರವಲ್ಲದೇ ಲಕ್ಷ್ಮೀ ಹೆಬ್ಬಾಳ್ಕರ್, ಬೆಂಗಳೂರು ಅಭಿವೃದ್ಧಿ ಸಚಿವ ಕೆಜೆ ಜಾರ್ಜ್, ಎಂಬಿ ಪಾಟೀಲ್, ಹೆಚ್ ಸಿ ಮಹದೇವಪ್ಪ, ಗೋವಿಂದರಾಜು ದೂರವಾಣಿ ಕದ್ದಾಲಿಕೆಯಾಗ್ತಿದೆ. ತಮ್ಮ ಟಿಂಬರ್ ವ್ಯವಹಾರ, ಉಕ್ಕಿನ ಸೇತುವೆ ಸೇರಿದಂತೆ ವಿವಿಧ ಯೋಜನೆಗಳ ಬಗ್ಗೆ ಬಿಬಿಎಂಪಿ, ಬಿಡಿಎ ಅಧಿಕಾರಿಗಳು ಮತ್ತು ಗುತ್ತಿಗೆದಾರರೊಂದಿಗೆ ಜಾರ್ಜ್ ನಡೆಸುತ್ತಿರುವ ಮಾತುಕತೆಯನ್ನು ಕದ್ದಾಲಿಕೆ ಮಾಡಲಾಗ್ತಿದೆಯಂತೆ.
Advertisement
ದೂರವಾಣಿ ಕದ್ದಾಲಿಕೆ ಭೀತಿಯಿಂದಾಗಿ ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಅಧಿಕಾರಿಗಳೊಂದಿಗೆ ನೇರ ಸಭೆಯನ್ನಷ್ಟೇ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇತ್ತ ಮಹದೇವಪ್ಪ ದೂರವಾಣಿ ಕರೆಗಳನ್ನು ಸ್ವೀಕರಿಸುವುದು ಬಿಟ್ಟು ತಿಂಗಳಾಗಿದೆ ಎಂದು ಹೇಳಲಾಗಿದೆ.