4 ಜಿಲ್ಲೆ, 50ಕ್ಕೂ ಹೆಚ್ಚು ಗ್ರಾಮ, 14 ಗಂಟೆ ಅಲೆದಾಡಿಸಿದ್ರು.. ಪೊಲೀಸರು ದೌರ್ಜನ್ಯ ಎಸಗಿದ್ರು: ನೋವು ಹೇಳಿಕೊಂಡ ಸಿ.ಟಿ.ರವಿ

Public TV
2 Min Read
c.t.ravi davanagere

– ಕಾಂಗ್ರೆಸ್ ಸರ್ಕಾರದಿಂದ ನನ್ನ ಮೇಲೆ ಬಲ ಪ್ರಯೋಗ: ಎಂಎಲ್‌ಸಿ
– ಸರ್ಕಾರಕ್ಕೆ ಹೈಕೋರ್ಟ್ ಕಪಾಳಮೋಕ್ಷ ನೀಡಿದೆ: ವಿಜಯೇಂದ್ರ

ದಾವಣಗೆರೆ: ನಾಲ್ಕು ಜಿಲ್ಲೆ, 50ಕ್ಕೂ ಹೆಚ್ಚು ಗ್ರಾಮಗಳು, 14 ಗಂಟೆಗೂ ಹೆಚ್ಚು ಸಮಯ ಅಲೆದಾಡಿಸಿದರು. ಪೊಲೀಸರು ದೌರ್ಜನ್ಯ ಎಸಗಿದರು ಎಂದು ಎಂಎಲ್‌ಸಿ ಸಿ.ಟಿ.ರವಿ (C.T.Ravi) ನೋವು ತೋಡಿಕೊಂಡರು.

ದಾವಣಗೆರೆಯಲ್ಲಿ (Davanagere) ಪೊಲೀಸರಿಂದ ಬಿಡುಗಡೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆಧಾರವಿಲ್ಲದ ಮತ್ತು ಪೊಲೀಸ್ ಠಾಣೆಯ ಪರಿಧಿಗೆ ಬಾರದ ಮೊಕದ್ದಮೆಯಲ್ಲಿ ನನಗೆ ಯಾವುದೇ ನೋಟಿಸ್ ಕೊಡದೆ ನನ್ನನ್ನು ಬಂಧಿಸಿ ಅಮಾನವೀಯವಾಗಿ ವರ್ತಿಸಿದ್ದಾರೆ. ನನ್ನನ್ನು ಮಾನಸಿಕವಾಗಿ ಕುಗ್ಗಿಸುವ ಮತ್ತು ದೈಹಿಕವಾಗಿ ದೌರ್ಜನ್ಯ ಎಸಗುವ ಪ್ರಯತ್ನವನ್ನು ಪೊಲೀಸ್ ಬಲ ಉಪಯೋಗಿಸಿಕೊಂಡು ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ದಾವಣಗೆರೆಯಲ್ಲಿ ಸಿ.ಟಿ.ರವಿ ಬಿಡುಗಡೆ – ಬಿಜೆಪಿ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ

bjp press meet

ಸಂಕಷ್ಟದ ಸಂದರ್ಭದಲ್ಲಿ ಪಕ್ಷದ ಎಲ್ಲಾ ಮುಖಂಡರು, ಸಾಮಾನ್ಯ ಕಾರ್ಯಕರ್ತರು ಬೆಂಬಲ ನೀಡಿ ಆತ್ಮಸ್ಥೈರ್ಯ ತುಂಬಿದ್ದಾರೆ. ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಬೆಳಗಾವಿಯಲ್ಲಿ ನಾನು ಸತ್ಯಮೇವ ಜಯತೆ ಅಂತಾ ಹೇಳಿದ್ದೆ. ಈಗ ಹೈಕೋರ್ಟ್ ಅದೇಶದಿಂದ ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.

ನಿನ್ನೆ ಕಾಂಗ್ರೆಸ್ ಸರ್ಕಾರ ನನ್ನ ಮೇಲೆ ಬಲಪ್ರಯೋಗ ಮಾಡಿದೆ. ಈ ರೀತಿ ಬಲಪ್ರಯೋಗ 35 ವರ್ಷದ ಹಿಂದೆ ಅನುಭವಿಸಿ ಬಂದಿದ್ದೇನೆ. ಇದರಿಂದ ನಾನು ಹಿಗ್ಗುವುದಿಲ್ಲ, ಇನಷ್ಟೂ ಹೋರಾಟ ಮಾಡುವ ಶಕ್ತಿ ನೀಡುತ್ತೆ ಎಂದು ತಿಳಿಸಿದರು. ಇದನ್ನೂ ಓದಿ: ಸಿ.ಟಿ.ರವಿಗೆ ಬಿಗ್‌ ರಿಲೀಫ್‌ – ತಕ್ಷಣವೇ ಬಿಡುಗಡೆ ಮಾಡುವಂತೆ ಹೈಕೋರ್ಟ್‌ ಆದೇಶ

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (Vijayendra) ಮಾತನಾಡಿ, ರಕ್ತ ಸುರಿಯುತ್ತಿದ್ದರೂ ಸಿ.ಟಿ.ರವಿ ಅವರನ್ನು ಲೆಕ್ಕಿಸದೇ ಕರೆದುಕೊಂಡು ಹೋದರು. ಮಾನವೀಯತೆ ಮರೆತು ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ಬೆಂಗಳೂರಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿ 500 ಕಿಮೀ ಸುತ್ತಿಸಿದ್ದಾರೆ. ಪ್ರತಿ ಅರ್ಧ ಗಂಟೆಗೆ ಪೊಲೀಸರಿಗೆ ಮೇಲಾಧಿಕಾರಿಗಳಿಂದ ಪೋನ್ ಕರೆ ಬರುತ್ತಿತ್ತು. ಇದು ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಿದ್ದಾರೆ. ಸಿಟಿ ರವಿಯವರಿಗೆ ಜಾಮೀನು ಸಿಕ್ಕಿದೆ ಎನ್ನುವದು ಅಷ್ಟೇ ಅಲ್ಲ. ಸರ್ಕಾರಕ್ಕೆ ಹೈಕೋರ್ಟ್ ಕಪಾಳಮೋಕ್ಷ ನೀಡಿದೆ. ಒಂದು ನೋಟಿಸ್ ನೀಡದೆ ಶಾಸಕರನ್ನು ಬಂಧನ ಮಾಡಿದ್ದು ಸರಿಯಲ್ಲ. ರಾಜ್ಯದ ಜನರು ಮಾತನಾಡುತ್ತಿದ್ದಾರೆ ಅವರ ಬಗ್ಗೆ. ಡಿಕೆಶಿ ಹೇಳುತ್ತಾರೆ ಬೆಳಗಾವಿಯಿಂದ ಸಿಟಿ ರವಿಯವರನ್ನು ಬಿಟ್ಟಿದ್ದೇ ಹೆಚ್ಚು ಎನ್ನುವ ದಾಟಿಯಲ್ಲಿ ಮಾತನಾಡಿದ್ದಾರೆ. ನಿಮ್ಮ ಗೂಂಡಾ ವರ್ತನೆ ಇಲ್ಲಿ ನಡೆಯೋದಿಲ್ಲ. ಬಿಜೆಪಿ ಕಾರ್ಯಕರ್ತರು ಕೈಗೆ ಬಳೆ ಹಾಕಿಕೊಂಡಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

Share This Article