ಬೀದರ್: ಕಳೆದ ಬಾರಿ ಸರ್ಕಾರ ಬೆಳಗಾವಿಯಿಂದ (Belagavi) ಬಿದ್ದಿತ್ತು. ಈ ಬಾರಿ ದುಬೈನಿಂದ ಸರ್ಕಾರ ಬೀಳುತ್ತೆ. ಈಗಾಗಲೇ ದುಬೈಗೆ 5 ಜನ ಹೋಗಿದಾರಂತೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ (R.Ashok) ಹೊಸ ಬಾಂಬ್ ಸಿಡಿಸಿದ್ದಾರೆ.
ಕಾಂಗ್ರೆಸ್‌ನವರು (Congress) ಬಿಜೆಪಿ (BJP) ವಿರುದ್ದ 40% ಆರೋಪ ಮಾಡಿದ್ದರು. ಆದರೆ ಈ ಕಾಂಗ್ರೆಸ್ ಸರ್ಕಾರ 60% ಸರ್ಕಾರ. ಒಂದು ಕಡೆ 50 ಕೋಟಿ ರೂ., ಒಂದು ಕಡೆ 54 ಕೋಟಿ ರೂ. ಸಿಕ್ತು. ಹಲೋ ಅಪ್ಪಾ ಅಂತಾ ವೀಡಿಯೋ ಬಂತಲ್ಲಾ ಇದಕ್ಕಿಂತ ದಾಖಲೆ ಬೇಕಾ? ಇದು 60% ಸರ್ಕಾರ ಅನ್ನೋಕೆ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಮತ್ತೆ ನಳಿನ್ ಕುಮಾರ್ ಕಟೀಲ್ ಗೆಲ್ಲಿಸಿ ಕೊಡಿ: ವಿಜಯೇಂದ್ರ
Advertisement
Advertisement
ಪಂಚರಾಜ್ಯ ಚುನಾವಣೆ ಅನೌನ್ಸ್ ಆದ ಮೇಲೆ ಎರಡೇ ದಿನದಲ್ಲಿ ಅನುದಾನ ಬಿಡುಗಡೆ ಮಾಡಿದರು. ಬಿಡುಗಡೆ ಮಾಡಿದ 3 ದಿನಕ್ಕೆ 104 ಕೋಟಿ ರೂ. ಸಿಕ್ತು. ಹೀಗಾಗಿ ಕರ್ನಾಟಕವನ್ನ ಕಾಂಗ್ರೆಸ್‌ನವರು ಎಟಿಎಂ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.
Advertisement
ಜಾತಿ ಗಣತಿ ಕುರಿತು ಮಾತನಾಡಿ, ಒಂದೇ ಕ್ಯಾಬಿನೆಟ್‌ನಲ್ಲಿದ್ದು ಜಾತಿ ಗಣತಿ ಬಗ್ಗೆ ಡಬಲ್ ಸ್ಟ್ಯಾಂಡ್ ತಗೊತೀರಲ್ಲಾ ನಿಮ್ಮಗೆ ನಾಚಿಗೆ ಅಗಲ್ವ? ಜಾತಿ ಗಣತಿ ಆಧಾರದಲ್ಲಿ ಯಾರು ಪವರ್‌ಫುಲ್. ಅದು ಸಿಎಂ ಇಲ್ಲಾ ಡಿಸಿಎಂ ಎನ್ನುವುದನ್ನ ಹೇಳಬೇಕು. ಜಾತಿ ಜನಗಣತಿ ವರದಿ ಅವೈಜ್ಞಾನಿಕವಾಗಿದೆ. ಸರಿಯಾಗಿ ಮಾಡಿಲ್ಲ. ನಾನೊಬ್ಬನೇ ಅಲ್ಲ, ಇಡೀ ಬಿಜೆಪಿ ಪಕ್ಷವೇ ಅದನ್ನ ವಿರೋಧ ಮಾಡುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇದು ಅವಿವೇಕತನ, ಹೊಣೆಗೇಡಿತನದ ಸರ್ಕಾರ – ವಿಜಯೇಂದ್ರ ವಾಗ್ದಾಳಿ
Advertisement
ಹೀಗಿದ್ದರೂ ಸಿದ್ದರಾಮಯ್ಯ ಅವರು ವರದಿ ಮಾಡ್ತೀವಿ ಅಂದಿದ್ದು ಕ್ಯಾಬಿನೆಟ್‌ನಲ್ಲೇ ನೀವು ತೀರ್ಮಾನ ತೆಗೆದುಕೊಳ್ಳಬೇಕಿತ್ತು. ವರದಿಯಲ್ಲಿ ಏನು ನ್ಯೂನತೆ ಇದೆಯೋ ಅದನ್ನ ಸರಿಪಡಿಸಿಕೊಳ್ಳಬೇಕೇ ಹೊರೆತು ಯಾವುದೋ ಒಂದು ಜಾತಿ ಪರವಾಗಿ ಮಾಡುವುದಲ್ಲ. ಡಿಕೆಶಿ ವರದಿ ನೋಡದೇ ಸಹಿ ಹೇಗೆ ಮಾಡಿದರು. ಡಿಕೆಶಿ ಅತಿ ಬುದ್ದಿವಂತ ಅಂತಾರಲ್ಲ, ಎಲ್ಲಾ ನೋಡಿರುತ್ತಾರೆ. ವರದಿ ನೋಡದೆಯೇ ವೀರಶೈವರು, ಒಕ್ಕಲಿಗರು, ಸ್ವಾಮೀಜಿಗಳು ಯಾಕೇ ವಿರೋಧ ಮಾಡ್ತಾರೆ ಎಂದು ಪ್ರಶ್ನಿಸಿದ್ದಾರೆ.