ಬೆಂಗಳೂರು: ಗ್ಯಾರಂಟಿ ಯೋಜನೆಗಳ (Congress Guarantee) ಫಲಾನುಭವಿಗಳ ಪರಿಷ್ಕರಣೆ ಆಗಬೇಕು ಎಂಬ ಶಾಸಕರು, ಸಚಿವರ ಕೂಗಿನ ನಡುವೆಯೇ ಗ್ಯಾರಂಟಿಗಳ ಸರ್ವೆ (Guarantee Survey) ಸರ್ಕಾರ ಮುಂದಾಗಿದೆ. ಖಾಸಗಿ ಕಂಪನಿ ಮೂಲಕ 4 ಗ್ಯಾರಂಟಿಗಳ ಸರ್ವೆಗೆ ಸರ್ಕಾರ ನಡೆಯುತ್ತಿರೋ ಸರ್ಕಾರ ಇದಕ್ಕಾಗಿ ಬರೋಬ್ಬರಿ 1 ಕೋಟಿ ರೂ. ಹಣ ಖರ್ಚು ಮಾಡುತ್ತಿದೆ.
ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಯೋಜನೆಗಳ ಸರ್ವೆಯನ್ನ ಸರ್ಕಾರ ಮಾಡಿಸುತ್ತಿದೆ. ರಾಜ್ಯದ ಎಲ್ಲಾ ವಿಧಾನಸಭೆ ಕ್ಷೇತ್ರಗಳಲ್ಲಿ ಪ್ರತಿ ತಿಂಗಳು ಒಂದರಂತೆ ಸಮೀಕ್ಷೆ ನಡೆಸಲು ಖಾಸಗಿ ಸಂಸ್ಥೆಗೆ ಅನುಮತಿಯನ್ನ ಸರ್ಕಾರ ಕೊಟ್ಟಿದೆ. M/s M2M MEDIA NETWORK LLP ಸಂಸ್ಥೆಗೆ ಸರ್ವೆ ಜವಾಬ್ದಾರಿ ಸರ್ಕಾರ ನೀಡಿದೆ. ಯಾವುದೇ ಟೆಂಡರ್ ಕರೆಯದೇ ಖಾಸಗಿ ಕಂಪನಿಗೆ 4G ಅಡಿ ವಿನಾಯ್ತಿ ನೀಡಿದೆ. ಈಗಾಗಲೇ ಸರ್ವೆ ಕಾರ್ಯ ನಡೆಯುತ್ತಿದ್ದು, ಗ್ಯಾರಂಟಿಗಳ ಸರ್ವೆ ಬಗ್ಗೆ ಖುದ್ದು ಸದನದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಉತ್ತರ ನೀಡುವ ಮೂಲಕ ಕೊಟ್ಡಿದ್ದಾರೆ. ಈಗಾಗಲೇ ಸರ್ವೆ ಕಾರ್ಯ ನಡೆಸುತ್ತಿದ್ದು, ವರದಿ ಬಂದ ಕೂಡಲೇ ಗ್ಯಾರಂಟಿ ಪರಿಷ್ಕರಣೆ ಮಾಡುತ್ತಾ ಸರ್ಕಾರ ಅನ್ನೋ ಅನುಮಾನ ಮೂಡಿದೆ.
Advertisement
Advertisement
ಈಗಾಗಲೇ ಸರ್ವೆ ಕಾರ್ಯಕ್ಕೆ 4 ಇಲಾಖೆಗಳಿಂದ ಖಾಸಗಿ ಕಂಪನಿಗೆ ಹಣ ಬಿಡುಗಡೆ ಮಾಡಲಾಗಿದೆ. ಸಾರಿಗೆ ಇಲಾಖೆಯಿಂದ 17.60 ಲಕ್ಷ ರೂ., ಇಂಧನ ಇಲಾಖೆಯಿಂದ 25 ಲಕ್ಷ ರೂ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 25 ಲಕ್ಷ ರೂ., ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಿಂದ 25 ಲಕ್ಷ ರೂ. ಹಣ ಖಾಸಗಿ ಕಂಪನಿಗೆ ಬಿಡುಗಡೆಯಾಗಿದೆ.