ವಿಜಯಪುರ: ಇನ್ನೂ 6 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಬೀಳುತ್ತೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basangouda Patil Yatnal) ಭವಿಷ್ಯ ನುಡಿದಿದ್ದಾರೆ.
ಚುನಾವಣೆಯಲ್ಲಿ ಶ್ರಮಿಸಿದ ಕಾರ್ಯಕರ್ತರಿಗೆ ವಿಜಯಪುರದಲ್ಲಿ (Vijayapura) ಏರ್ಪಡಿಸಿದ್ದ ಔತಣಕೂಟ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 6 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಬೀಳುತ್ತೆ. ಅಲ್ಲಿಯವರೆಗೆ ಸಮಾಧಾನದಿಂದ ಇರಬೇಕು ಅಂತಾ ಹೇಳಿದ್ದಾರೆ. ಇದನ್ನೂ ಓದಿ: ಕಾಂಬೋಡಿಯಾ ಪ್ರವಾಸ ಮುಗಿಸಿ ಹೆಚ್‍ಡಿಕೆ ವಾಪಸ್- ವಿದೇಶದಲ್ಲೇ ಇರಿ ಎಂದ ಸಚಿವರಿಗೆ ಟಾಂಗ್
ಕಾಂಗ್ರೆಸ್ ಶಾಸಕರಿಗೆ (Congress MLA) ಅನುದಾನ ಇಲ್ಲ ಅಂತ ಅವರೇ ಹೇಳುತ್ತಿದ್ದಾರೆ. ಅದಕ್ಕೆ ನೀವು ಕೆಲ ದಿನಗಳವರೆಗೆ ರೆಸ್ಟ್ ಮಾಡಿ. 6-7 ತಿಂಗಳು ಕಷ್ಟ ಇದೆ. ನಂತರ ನಮ್ಮ ಸರ್ಕಾರ ಬರುತ್ತೆ ಮತ್ತೆ ಅನುದಾನ ಸಿಗುತ್ತೆ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.
ಸದ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ದಿನಕ್ಕೊಂದು ಭ್ರಷ್ಟಾಚಾರ ಆರೋಪ ಕೇಳಿ ಬರುತ್ತಿದೆ. ಪೊಲೀಸ್ ವರ್ಗಾವಣೆಯಲ್ಲಿ ವೈಎಸ್‌ಟಿ ಟ್ಯಾಕ್ಸ್ ಅಂತ ಮಾಜಿ ಸಿಎಂ ಕುಮಾರಸ್ವಾಮಿ ಬಾಂಬ್ ಸಿಡಿಸಿದ್ದರು. ಬೆನ್ನಲ್ಲೇ ಎಟಿಎಂ ಸರ್ಕಾರ, 15% ಸರ್ಕಾರ ಆಯ್ತು. ಇದೀಗ, ಬಿಬಿಎಂಪಿ ಗುತ್ತಿಗೆದಾರರ ಬಿಲ್ ಬಾಕಿ ವಿಚಾರವಾಗಿ ಡಿಕೆಶಿ ಟ್ಯಾಕ್ಸ್ ಅಂತ ಮಾಜಿ ಡಿಸಿಎಂ ಅಶ್ವಥ್ ನಾರಾಯಣ ಹೊಸ ಬಾಂಬ್ ಹಾಕಿದ್ದಾರೆ. ಅಲ್ಲದೆ, ಡಿಕೆಶಿಯನ್ನು ಮಂತ್ರಿ ಮಂಡಲದಿಂದ ವಜಾ ಮಾಡಬೇಕು. ಡಿಕೆಶಿ ಟ್ಯಾಕ್ಸ್ ಅನ್ನೋದನ್ನು ಕ್ಯಾಂಪೇನ್ ಮಾಡ್ತೇವೆ. ಲೋಕಯುಕ್ತಾ ತನಿಖೆಗೆ ವಹಿಸಬೇಕು ಎಂದು ರಾಜ್ಯಪಾಲರಿಗೆ ಆಗ್ರಹಿಸುತ್ತೇವೆ ಅಂದಿದ್ದಾರೆ. ಇದನ್ನೂ ಓದಿ: ವಾಹನ ಅಡ್ಡಗಟ್ಟಿ ಗಲಾಟೆ ಮಾಡಿದ್ರೆ ರೌಡಿಶೀಟ್ ಓಪನ್ – ಪೊಲೀಸ್ ಕಮಿಷನರ್ ಎಚ್ಚರಿಕೆ
ಮತ್ತೊಂದು ಕಡೆ ಆಲೂಗೆಡ್ಡೆ ಹಾಕಿದರೆ ಆ ಕಡೆಯಿಂದ ಚಿನ್ನ ಬರುತ್ತಾ ಅಂತ ವ್ಯಂಗ್ಯವಾಡಿದ್ದಾರೆ. ವ್ಯವಸ್ಥೆಯನ್ನೇ ನಿರ್ನಾಮ ಮಾಡ್ತಿದ್ದಾರೆ. ಡಿಕೆಶಿ ಬೆಂಗಳೂರು ಅಭಿವೃದ್ಧಿ ಸಚಿವರಲ್ಲ, ಬೆಂಗಳೂರು ನಿರ್ನಾಮ ಸಚಿವರು. ಸಾಮಾಜಿಕ ಮೌಲ್ಯ, ನೈತಿಕತೆ ಬಗ್ಗೆ ಮಾತನಾಡೋ ಹಾಗೆ ಕೂಡ ಇಲ್ಲ. ಡಿಕೆಶಿ ತೃಪ್ತರಾಗಲ್ಲ; ಇನ್ನೂ ಬೇಕು ಬೇಕು ಎಂಬ ಭಾವ ಅವರದ್ದು ಅಂತ ಅಶ್ವಥ್ ನಾರಾಯಣ ಕಿಡಿಕಾರಿದ್ದಾರೆ.
Web Stories