Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಗುಜರಾತ್ ರೀತಿ ಕಾಂಗ್ರೆಸ್ ಸರ್ಕಾರ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಎದೆಗಾರಿಕೆ ತೋರಿಸಲಿ: ಅರವಿಂದ ಲಿಂಬಾವಳಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಗುಜರಾತ್ ರೀತಿ ಕಾಂಗ್ರೆಸ್ ಸರ್ಕಾರ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಎದೆಗಾರಿಕೆ ತೋರಿಸಲಿ: ಅರವಿಂದ ಲಿಂಬಾವಳಿ

Bengaluru City

ಗುಜರಾತ್ ರೀತಿ ಕಾಂಗ್ರೆಸ್ ಸರ್ಕಾರ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಎದೆಗಾರಿಕೆ ತೋರಿಸಲಿ: ಅರವಿಂದ ಲಿಂಬಾವಳಿ

Public TV
Last updated: July 13, 2025 7:13 pm
Public TV
Share
2 Min Read
Arvind Limbavali
SHARE

ಬೆಂಗಳೂರು: ವಕ್ಫ್ ವಿರೋಧಿ ಹೋರಾಟ ಬಳಿಕ ಅಕ್ರಮ ಬಾಂಗ್ಲಾ ನಿವಾಸಿಗಳ (Illegal Bangladeshi Residents) ವಿರುದ್ಧ ಹೋರಾಟಕ್ಕೆ ಬಿಜೆಪಿ (BJP) ಭಿನ್ನಮತೀಯ ನಾಯಕರು ಮುಂದಾಗಿದ್ದಾರೆ.

ಮಹಾದೇವಪುರ (Mahadevapura) ವಿಧಾನಸಭೆ ಕ್ಷೇತ್ರದಲ್ಲಿಂದು ಬಿಜೆಪಿ ರೆಬೆಲ್‌ಗಳ ಟೀಮ್ ಅಕ್ರಮ ವಲಸಿಗರ ವಿರುದ್ಧ ಬೃಹತ್ ಜನಜಾಗೃತಿ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಮಾಜಿ ಸಂಸದ ಜಿ ಎಂ ಸಿದ್ದೇಶ್ವರ್, ಮಾಜಿ ಸಚಿವ ಅರವಿಂದ ಲಿಂಬಾವಳಿ, ಶಾಸಕಿ ಮಂಜುಳಾ ಲಿಂಬಾವಳಿ, ಶಾಸಕ ರಮೇಶ್ ಜಾರಕಿಹೊಳಿ, ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಮಾಜಿ ಸಂಸದರಾದ ಬಿ ವಿ ನಾಯಕ್, ಪ್ರತಾಪ್ ಸಿಂಹ, ಶಾಸಕ ಬಿ ಪಿ ಹರೀಶ್ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಗಡೀಪಾರು ಸಂಬಂಧ ರಾಜ್ಯ ಸರ್ಕಾರ (Karnataka Government) ನಿರ್ಲಕ್ಷ್ಯ ವಹಿಸಿದೆ. ಅಪರಾಧ, ಭಯೋತ್ಪಾದನಾ ಚಟುವಟಿಕೆಗಳಲ್ಲಿ ಅಕ್ರಮ ವಲಸಿಗರು ಭಾಗವಹಿಸಿ ದೇಶದ ಭದ್ರತೆಗೆ ಸವಾಲಾಗಿದ್ದಾರೆ. ಗುಜರಾತ್ ಮಾದರಿಯಲ್ಲಿ ರಾಜ್ಯ ಸರ್ಕಾರವು ಅಕ್ರಮ ವಲಸಿಗರ ಗಡೀಪಾರಿಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಅಕ್ರಮ ಮುಸ್ಲಿಂ ವಲಸಿಗರು ಭಯೋತ್ಪಾದನೆ, ಜನೋತ್ಪಾದನೆಯಲ್ಲಿ ತೊಡಗಿದ್ದಾರೆ: ಪ್ರತಾಪ್‌ ಸಿಂಹ

BJP Rebles 2

ಇನ್ನು ಇದೇವೇಳೆ ಮಹಾದೇವಪುರ ಕ್ಷೇತ್ರದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ನಿವಾಸಿಗಳ ಕುರಿತು ಕುರು ಸಾಕ್ಷ್ಯಚಿತ್ರ ಪ್ರದರ್ಶನ ಪ್ರಸಾರ ಮಾಡಿದ್ದಲ್ಲದೇ ಕಿರು ಪುಸ್ತಕ ಬಿಡುಗಡೆಗೊಳಿಸಲಾಯ್ತು. ಅಲ್ರಮ ವಲಸಿಗರ ವಿರುದ್ಧದ ಈ ಜನಜಾಗೃತಿ ಅಭಿಯಾಮವನ್ನು ಇಡೀ ರಾಜ್ಯಕ್ಕೆ ವಿಸ್ತರಿಸುವುದಾಗಿ ಬಿಜೆಪಿ ಭಿನ್ನ ನಾಯಕರು ನಿರ್ಧಾರ ಪ್ರಕಟಿಸಿದರು.

ಇದೇವೇಳೆ ಕಾರ್ಯಕ್ರಮದಲ್ಲಿ ಮಾತಾಡಿದ ಮಾಜಿ ಸಚಿವ ಅರವಿಂದ ಲಿಂಬಾವಳಿ (Aravind Limbavali), ಅಕ್ರಮ ವಲಸಿಗರ ವಿಚಾರದಲ್ಲಿ ಗುಜರಾತ್ ಮಾದರಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಎದೆಗಾರಿಕೆ ತೋರಬೇಕು ಎಂದು ಬಿಜೆಪಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಆಗ್ರಹಿಸಿದರು.

ಅಕ್ರಮ ವಲಸಿಗರ ವಿಚಾರದಲ್ಲಿ ಸಿದ್ದರಾಮಯ್ಯ ರಾಜಕಾರಣ ಮಾಡಬಾರದು. ವಲಸಿಗರ ವಿಚಾರದಲ್ಲಿ ರಾಜ್ಯ ಸರ್ಕಾರ ಸಾಫ್ಟ್ ಆಗಿದೆ. ಗುಜರಾತ್‌ನಲ್ಲಿ ಇತ್ತೀಚೆಗೆ ಎರಡು ಸಾವಿರಕ್ಕೂ ಹೆಚ್ಚು ಅಕ್ರಮ ವಲಸಿಗರ ಗಡೀಪಾರು ಮಾಡಲಾಯ್ತು.‌ ರಾಜ್ಯ ಸರ್ಕಾರವೂ ಆ ಕೆಲಸ ಮಾಡಲಿ. ಅಕ್ರಮ ವಲಸಿಗರಿಗೆ ಯಾವುದೋ ಒತ್ತಡದ ಕಾರಣಕ್ಕೆ ಅವಕಾಶ ಕೊಟ್ರೆ ಕರ್ನಾಟಕ ಪಶ್ಚಿಮ ಬಂಗಾಳ ಆಗುತ್ತೆ. ಯಾರ್ಯಾರು ಅಕ್ರಮವಾಗಿ ಬಂದಿದ್ದಾರೋ ಅವರನ್ನು ವಾಪಸ್ ಕಳಿಸಿ ಎಂದು ಒತ್ತಾಯಿಸಿದರು.

 

ಅಕ್ರಮ ವಲಸಿಗರಿಗೆ ಫೇಕ್ ಆಧಾರ್ ಕಾರ್ಡ್ ಮಾಡಿಕೊಡುವ ಜಾಲ ಬೆಂಗಳೂರಿನಲ್ಲಿ ಇದೆ. ಅದಕ್ಕಾಗಿ ಏಜೆನ್ಸಿಗಳೂ ಇವೆ. ಪೊಲೀಸರು ವಲಸಿಗರ ಮೊಬೈಲ್ ಪರಿಶೀಲಿಸಿದ್ರೆ ಅವರ ಜಾತಕವೇ ಗೊತ್ತಾಗುತ್ತೆ. ಈ ಕೆಲಸ ಸರ್ಕಾರ, ಪೊಲೀಸ್ ಬದ್ಧತೆಯಿಂದ ಮಾಡಬೇಕು. ಅಕ್ರಮ ವಲಸಿಗರನ್ನು ಕೆಲಸಕ್ಕೆ ಯಾರೂ ಸೇರಿಸಿಕೊಳ್ಳದಂತೆ ಕರೆ ನೀಡಿದರು. ಇದನ್ನೂ ಓದಿ: ಇನ್ಮುಂದೆ ಸರ್ಕಾರಿ ಬಸ್ಸಿನಲ್ಲಿ ಪ್ರಾಣಿಗಳ ಜೊತೆ ಟಯರ್‌, ಫ್ರಿಡ್ಜ್‌, ವಾಷಿಂಗ್‌ ಮೆಷಿನ್‌ ಸಾಗಿಸಬಹುದು! –ಯಾವುದಕ್ಕೆ ಎಷ್ಟು ದರ?

ಇನ್ನು ಇದೇವೇಳೆ ಪೊಲೀಸ್ ಒಬ್ಬರು ಮೊಬೈಲ್‌ನಲ್ಲಿ ತಮ್ಮ ಭಾಷಣ ರೆಕಾರ್ಡ್ ಮಾಡಿಕೊಳ್ಳುತ್ತಿರುವುದನ್ನು ಗಮನಿಸಿ ಗರಂ ಆದ ಲಿಂಬಾವಳಿ,ಇಲ್ಲಿ ಬಂದು ರೆಕಾರ್ಡ್ ಮಾಡೋದೇಕೆ? ನಾವು ದೇಶಭಕ್ತರು. ಅಕ್ರಮ ವಲಸಿಗರನ್ನು ಹೋಗಿ ರೆಕಾರ್ಡ್ ಮಾಡಲು ತಾಕತ್ ಇದೆಯಾ ಕಿಡಿಕಾರಿದರು.

ಇದು ಬಿಜೆಪಿ ಅಸಮಧಾನಿತರ ಹೋರಾಟ ಅಂತ ಮಾಧ್ಯಮಗಳು ಬರೆಯುತ್ತವೆ. ನಾವು ಅಸಮಾಧಾನಿತ ಹೋರಾಟವಲ್ಲ. ನಮ್ಮದು ದೇಶ ಉಳಿಸುವ ಹೋರಾಟ ಎಂದು ಲಿಂಬಾವಳಿ ಸ್ಪಷ್ಟಪಡಿಸಿದರು.

TAGGED:aravind limbavalibjpMahadevapuraಅಕ್ರಮ ಬಾಂಗ್ಲಾ ವಲಸಿಗರುಅರವಿಂದ ಲಿಂಬಾವಳಿಬಿಜೆಪಿಮಹಾದೇವಪುರ
Share This Article
Facebook Whatsapp Whatsapp Telegram

Cinema news

Alpha Trailor Srimurali
ಅಲ್ಫಾ ಟ್ರೈಲರ್ ಮೆಚ್ಚಿ ಪ್ರಶಂಸಿಸಿದ ನಟ ಶ್ರೀಮುರಳಿ
Cinema Latest Top Stories
CHANDRACHUD
ಅಸಂವಿಧಾನಿಕ ಪದಬಳಕೆ ಆರೋಪ – ಚಕ್ರವರ್ತಿ ಚಂದ್ರಚೂಡ್ ವಿರುದ್ಧ ಎಫ್ಐಆರ್
Bengaluru City Cinema Crime Karnataka Latest Sandalwood Top Stories
santosh kumar sukhibhava movie
‘ಸುಖೀಭವ’ ಚಿತ್ರ ನಿರ್ಮಾಣಕ್ಕೆ ಉದ್ಯಮಿ ಸಂತೋಷ್ ಕುಮಾರ್ ಸಾಥ್
Cinema Latest Sandalwood Top Stories
Bengaluru International Film Festival
ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ – ಲಾಸ್ಟ್‌ ಲ್ಯಾಂಡ್‌, ಸಬರ್ ಬೊಂದಾ, ವನ್ಯಾ ಚಿತ್ರಕ್ಕೆ ಪ್ರಶಸ್ತಿ ಗರಿ
Bengaluru City Cinema Karnataka Latest Sandalwood States Top Stories

You Might Also Like

two people die after drinking spirit one in critical condition two detained in koppal
Crime

ಸ್ಪಿರಿಟ್ ಕುಡಿದು ಇಬ್ಬರು ಸಾವು, ಓರ್ವನ ಸ್ಥಿತಿ ಚಿಂತಾಜನಕ – ಇಬ್ಬರು ವಶಕ್ಕೆ

Public TV
By Public TV
5 hours ago
Sri Lanka
Cricket

T20 World Cup: ಐರ್ಲೆಂಡ್‌ ವಿರುದ್ಧ ಶ್ರೀಲಂಕಾಗೆ 20 ರನ್‌ಗಳ ಗೆಲುವು

Public TV
By Public TV
5 hours ago
Narges Mohammadi
Latest

ನೊಬೆಲ್‌ ಶಾಂತಿ ಪ್ರಶಸ್ತಿ ವಿಜೇತೆಗೆ 6 ವರ್ಷ ಜೈಲು ಶಿಕ್ಷೆ ವಿಧಿಸಿದ ಇರಾನ್‌

Public TV
By Public TV
6 hours ago
Banavar Car Accident
Crime

ಬಾಣಾವರ | ಮೂರು ಕಾರುಗಳ‌ ನಡುವೆ ಸರಣಿ‌‌ ಅಪಘಾತ – ಇಬ್ಬರ ಸಾವು‌, ಐವರಿಗೆ ಗಾಯ

Public TV
By Public TV
6 hours ago
Nagalakshmi Choudhary
Davanagere

ʻಕೈʼ ಮುಖಂಡನ ಪುತ್ರರಿಂದ ಪೊಲೀಸರ ಮೇಲೆ ಹಲ್ಲೆ ಕೇಸ್ – ಕಾನೂನು ಎಲ್ಲರಿಗೂ ಒಂದೇ, ಶಿಕ್ಷೆ ಆಗುತ್ತೆ: ನಾಗಲಕ್ಷ್ಮೀ ಚೌಧರಿ

Public TV
By Public TV
7 hours ago
bidar bike accident three died
Bidar

ಬೀದರ್| ರಸ್ತೆ ಪಕ್ಕದ ಬ್ರಿಡ್ಜ್‌ಗೆ ಬೈಕ್ ಡಿಕ್ಕಿ – ಒಂದೇ ಕುಟುಂಬದ ಮೂವರು ದುರ್ಮರಣ

Public TV
By Public TV
8 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?