– ಕಾಂಗ್ರೆಸ್ ಮನೆ ಹಾಳು ಮಾಡೋ ಸರ್ಕಾರ
ಬೆಂಗಳೂರು: ಹಾಲಿನ ದರ ಏರಿಕೆ (Milk Price Hike) ಸಮರ್ಥನೆ ಮಾಡಿಕೊಂಡ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ವಿಪಕ್ಷ ನಾಯಕ ಆರ್ ಅಶೋಕ್ (R Ashok) ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
Advertisement
ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಹಾಲನ್ನು ಇವತ್ತು ಈ ಸರ್ಕಾರ ಹಾಲಾಹಲ ಮಾಡಿದೆ. ಒಂದು ವರ್ಷದ ಹಿಂದೆ 3 ರೂ. ಈಗ 2 ರೂ. ಏರಿಕೆ ಆಗಿದೆ. ಮೊದಲು ಏರಿಕೆ ಮಾಡಿದಾಗ 80% ಹಣ ರೈತರಿಗೆ ಕೊಡುತ್ತೇವೆ ಎಂದಿದ್ದರು. 10 ಪೈಸೆ ಹಣ ರೈತರಿಗೆ ಇವರು ಕೊಟ್ಟಿಲ್ಲ. ನಿಮ್ಮ ಯೋಗ್ಯತೆಗೆ 10 ಪೈಸೆ ರೈತರಿಗೆ ಕೊಡಲಿಲ್ಲ. 50 ಎಂಎಲ್‌ಗೆ 2 ರೂ. ಜಾಸ್ತಿ ಮಾಡಿದ್ದೀನಿ ಅಂತೀರಾ. ಅಪ್ಪಾ ಬುದ್ಧಿವಂತ ಅರ್ಥಶಾಸ್ತ್ರಜ್ಞ ದೇಶಕ್ಕೆ ಅರ್ಥ ಹೇಳಿ ಕೊಡೋಕೆ ಹೋಗಿದ್ದೀಯಾ ಅಲ್ಲವಾ. 50 ಎಂಎಲ್ ಕಡಿಮೆ ಕೊಟ್ಟು, 2 ರೂಪಾಯಿ ಕಡಿಮೆ ತಗೋ ಎಂದು ಕಿಡಿಕಾರಿದರು. ಇದನ್ನೂ ಓದಿ: ಸ್ವಾಮೀಜಿ ಸ್ಥಾನ ಬಿಟ್ಟು ಕೊಡುತ್ತಾರಾದ್ರೆ, ನಾನು ಖಾವಿ ಬಟ್ಟೆ ಹಾಕ್ತೀನಿ: ಕೆಎನ್ ರಾಜಣ್ಣ
Advertisement
Advertisement
ನಿನ್ನ ಜಾಸ್ತಿ ಹಾಲು ಕೇಳಿದ್ದು ಯಾರಪ್ಪ? ಸಿದ್ದರಾಮಯ್ಯ ಧರ್ಮದರ್ಶನ ಮಾಡೋ ಜಾಗದಲ್ಲಿ ಯಾರಾದ್ರು ಬಂದು ಕೇಳಿದ್ರಾ? ಅರ್ಜಿ ಕೊಟ್ಟು 50 ಎಂಎಲ್ ಜಾಸ್ತಿ ಕೊಡು ಅಂತ ಕೇಳಿದ್ರಾ? ನೀನು ಒಬ್ಬ ಸಿಎಂ ಆಗಿ ಮಳೆಗಾಲ ಬಂದಾಗ ಹಾಲು ಉತ್ಪಾದನೆ ಜಾಸ್ತಿ ಆಗುತ್ತದೆ. ಹೆಚ್ಚುವರಿ ಹಾಲನ್ನು ಏನು ಮಾಡಬೇಕು ಅಂತ ದಾರಿ ಕಂಡುಕೊಳ್ಳಬೇಕಿತ್ತು. ಸಹಾಯ ಮಾಡೋ ಜ್ಞಾನ ಸಿದ್ದರಾಮಯ್ಯಗೆ ಇಲ್ಲ. ದುಡ್ಡು ಒಡೆಯೋ ಜ್ಞಾನ ಇದೆ. ಇದಕ್ಕೇನಾ ನಿಮ್ಮನ್ನು ಅರ್ಥಶಾಸ್ತ್ರಜ್ಞ ಅನ್ನೋದು. ಇದಾ ಅರ್ಥಶಾಸ್ತ್ರ ಅಂದರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರ್ನಾಟಕ ಮುಂದಾಗುತ್ತಿದ್ದಂತೆ ಹೊಸೂರಿನಲ್ಲಿ ಏರ್ಪೋರ್ಟ್ ಘೋಷಿಸಿದ ಸ್ಟಾಲಿನ್
Advertisement
ಹೊಟೇಲ್ ಹೋದಾಗ ಎರಡು ಇಡ್ಲಿ ಕೇಳಿದಾಗ ಹೊಟೇಲ್ ಅವನು 3 ಇಡ್ಲಿ ತೆಗೆದುಕೊಳ್ಳಬೇಕು, ಹಣ ಜಾಸ್ತಿ ಕೊಡಬೇಕು ಅಂದರೆ ಏನು ಅರ್ಥ? ಬೇಕಾಗಿರೋದು ಎರಡು ಇಡ್ಲಿ. ಹಸಿವಿಗೆ ಬೇಕಾಗಿರೋ ಇಡ್ಲಿ ಬಿಟ್ಟು 3 ಇಡ್ಲಿ ಹೆಚ್ಚಾಗಿ ಕೊಟ್ಟು 10 ರೂ. ಜಾಸ್ತಿ ಕೊಡು ಅಂದರೆ ನಾವು ಕೊಡ್ತೀವಾ? ಹೊಟೇಲ್ ಅವನಿಗೆ ಕಪಾಳಕ್ಕೆ ಹೊಡೆಯುತ್ತೇವೆ. ಈ ಸರ್ಕಾರಕ್ಕೆ ಜನರು ಕಪಾಳಕ್ಕೆ ಹೊಡೆಯಬೇಕು. ನಾವು ಸರ್ಕಾರದ ಕಪಾಳಕ್ಕೆ ಹೊಡೆಯಲು ಆಗೊಲ್ಲ. ಜನರು ಕಪಾಳಕ್ಕೆ ಹೊಡೆಯಬೇಕು. ನಾನು ಹೆಚ್ಚು ಹಾಲು ಕೇಳಿದ್ನಾ ಯಾಕೆ ಕೊಟ್ಟೆ ಅಂತ ಕಪಾಳಕ್ಕೆ ಹೊಡೆದು ಕೇಳಬೇಕು. 15 ಬಜೆಟ್ ಮಂಡನೆ ಮಾಡಿರೋ ಸಿಎಂ ಇವರು. ನನಗೂ ಅದಕ್ಕೂ ಸಂಬಂಧವಿಲ್ಲ ಅಂತಾ ಸಿಎಂ ಹೇಳುತ್ತಾರೆ. ಸರ್ಕಾರಕ್ಕೆ ಬೆಲೆ ಏರಿಕೆ ಬರೋದಿಲ್ಲ ಅಂತಾರೆ. ಡಿಸಿಎಂ ಮಾತೆತ್ತಿದರೆ ನೋಡೇ ಇಲ್ಲ. ಈ ಊರಿನವನೇ ಅಲ್ಲ ಅಂತಾರೆ. ಇವರು ಮಾಡಿದ ಎಲ್ಲಾ ಬೆಲೆ ಏರಿಕೆಗೂ ಸಮರ್ಥನೆ ಮಾಡಿಕೊಳ್ಳುತ್ತಿದ್ದೀರಾ. ಪೆಟ್ರೋಲ್, ವಿದ್ಯುತ್ ಬೆಲೆ, ಸ್ಟಾಂಪ್ ಡ್ಯೂಟಿ ಜಾಸ್ತಿ ಆದರೂ ಸಮರ್ಥನೆ ಕೊಟ್ಟರು. ಮದ್ಯದ ಬೆಲೆ ಜಾಸ್ತಿ ಮಾಡಿದ್ದೀರಿ. ಸಿರಿವಂತರ ಎಣ್ಣೆಗೆ ರೇಟ್ ಕಡಿಮೆ ಮಾಡಿ, ಬಡವರಿಗೆ ರೇಟ್ ಜಾಸ್ತಿ ಮಾಡಿದ್ದೀರಿ. ಮತ್ತೆ ಎಣ್ಣೆ ರೇಟ್ ಜಾಸ್ತಿ ಮಾಡೋಕೆ ಮುಂದಾಗಿದ್ದಾರೆ. ಇದು ಮನೆ ಹಾಳು ಸರ್ಕಾರ. ಇನ್ನೆರೆಡು ದಿನ ಇವರೇ ಇದ್ದರೆ ಕರ್ನಾಟಕವನ್ನು ದೋಚಿ ದರೋಡೆ ಮಾಡುತ್ತಾರೆ. ಆಲಿಬಾಬಾ ಮತ್ತು 40 ಕಳ್ಳರ ರೀತಿ ಎಲ್ಲಾ ಹೊಡೆದುಕೊಂಡು ಹೋಗುತ್ತಾರೆ. ಎಲ್ಲಾ ಹಣವನ್ನ ಡೆಲ್ಲಿ ಎಟಿಎಂ ಆಗಿ ಕಳುಹಿಸಿಕೊಡುತ್ತಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಿಎಂ ಸ್ಥಾನ ಹೈಕಮಾಂಡ್ ತೀರ್ಮಾನ ಮಾಡುತ್ತೆ ಸ್ವಾಮೀಜಿಯವರಲ್ಲ: ಸಿದ್ದರಾಮಯ್ಯ
ಜನರಿಗೆ ನಾನು ಕೈ ಮುಗಿದು ಕ್ಷಮೆ ಕೇಳುತ್ತೇನೆ. ದಯವಿಟ್ಟು ಜನರು ತಯಾರಾಗಿರಿ. ಇನ್ನು ಮುಂದೆ ಏನಿದ್ದರೂ ಬೆಲೆ ಏರಿಕೆ ಮಾತ್ರ. ಎಲ್ಲಾ ಬೆಲೆ ಏರುತ್ತವೆ. ಜನರು ತಯಾರಾಗಿರಿ. ನಾವು ಈಗಾಗಲೇ ಈ ಭ್ರಷ್ಟ, ದುಷ್ಟ ಸರ್ಕಾರದ ವಿರುದ್ಧ ಹೋರಾಟ ಮಾಡಿ ಒಂದು ವಿಕೆಟ್ ಬೀಳಿಸಿದ್ದೇವೆ. ಎರಡನೇ ವಿಕೆಟ್ ನಮಗೆ ಸಿದ್ದರಾಮಯ್ಯ ಅವರೇ. ಆ ವಿಕೆಟ್ ಅನ್ನು ಈ ಅಧಿವೇಶನದಲ್ಲಿ ಬೀಳಿಸುತ್ತೇವೆ. ಹಾಲಿನ ದರ ಏರಿಕೆ ವಿಚಾರವಾಗಿ ಹೋರಾಟ ಮಾಡುತ್ತೇವೆ. ನಮ್ಮ ಅಧ್ಯಕ್ಷರು, ನಾಯಕರ ಜೊತೆ ಮಾತಾಡಿದ್ದೇನೆ. 3 ಅಥವಾ 4ನೇ ತಾರೀಕು ಸಿಎಂ ಮನೆಗೆ ಮುತ್ತಿಗೆ ಹಾಕೋ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಡಿಕೆ ಬ್ರದರ್ಸ್ ಪೈಕಿ ಯಾರೇ ನಿಂತ್ರು ಸೋಲಿಸ್ತೀವಿ: ಆರ್.ಅಶೋಕ್