Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಿ-ಖರಾಬು ಜಮೀನು ಪರಭಾರೆ – ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಎಸಿಬಿಗೆ ದೂರು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಿ-ಖರಾಬು ಜಮೀನು ಪರಭಾರೆ – ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಎಸಿಬಿಗೆ ದೂರು

Districts

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಿ-ಖರಾಬು ಜಮೀನು ಪರಭಾರೆ – ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಎಸಿಬಿಗೆ ದೂರು

Public TV
Last updated: February 23, 2020 8:28 am
Public TV
Share
2 Min Read
rmg college
SHARE

ರಾಮನಗರ: ಸರ್ಕಾರಿ ನಿಯಮಗಳ ಪ್ರಕಾರ ಬಿ-ಖರಾಬು ಜಮೀನು ಯಾವುದೇ ಖಾಸಗಿ ಸಂಘ, ಸಂಘಟನೆ, ಸಂಸ್ಥೆಗಳಿಗೆ ನೀಡುವಂತಿಲ್ಲ ಎಂಬುದನ್ನ ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ಕಾನೂನಿನ ನಿಯಮಗಳನ್ನ ಮೀರಿ ಬೆಂಗಳೂರಿನ ಮಹಾತ್ಮ ಗಾಂಧಿ ವಿದ್ಯಾಪೀಠ ಟ್ರಸ್ಟ್ ಗೆ 5 ಎಕ್ರೆ 7 ಗುಂಟೆ ಜಮೀನನ್ನ 2016ರಲ್ಲಿ ಪರಭಾರೆ ಮಾಡಿರುವುದು ಕನಕಪುರ ತಾಲೂಕಿನ ದೇವರ ಕಗ್ಗಲಹಳ್ಳಿ ಬೆಳಕಿಗೆ ಬಂದಿದೆ.

rmg college 1

ಕಾಂಗ್ರೆಸ್ ಸರ್ಕಾರವಿದ್ದಾಗ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಬಿ-ಖರಾಬು ಜಮೀನನ್ನು ನಿಯಮ ಕಾನೂನು ಉಲ್ಲಂಘನೆ ಮಾಡಿ ಪ್ರಭಾವಿಗಳ ಟ್ರಸ್ಟ್ ಗೆ ಮಂಜೂರು ಮಾಡಲಾಗಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿನ ಬಿ-ಖರಾಬು ಜಮೀನನ್ನ ಸರ್ಕಾರವು ಕಾನೂನುಗಳನ್ನು ಮೀರಿ ಟ್ರಸ್ಟ್ ಗೆ ಪರಭಾರೆ ಮಾಡಿದೆ. ಪ್ರಭಾವಿ ಉದ್ಯಮಿ ಹಾಗೂ ಶಿಕ್ಷಣ ತಜ್ಞರ ಒಡೆತನದ ಬೆಂಗಳೂರಿನ ಮಹಾತ್ಮ ಗಾಂಧಿ ವಿದ್ಯಾಪೀಠ ಟ್ರಸ್ಟ್ ಗೆ ಕೋಟ್ಯಾಂತರ ರೂಪಾಯಿ ಮೌಲ್ಯದ 5 ಎಕ್ರೆ 7 ಗುಂಟೆ ಜಮೀನನ್ನ ಕೇವಲ 5 ಕೋಟಿ ರೂಪಾಯಿಗೆ ಪರಭಾರೆ ಮಾಡಲಾಗಿದೆ.

rmg college 2

ಈ ಬಗ್ಗೆ ಈ ಹಿಂದೆಯೇ ರಾಜ್ಯಪಾಲರಿಗೆ ದೂರು ನೀಡಿದ್ದು, ಅಂದಿನ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರ ಅವಧಿಯಲ್ಲಿ ರಾಜ್ಯಪಾಲರು ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ ಜನವರಿಯಲ್ಲಿ ಭ್ರಷ್ಟಚಾರ ನಿಗ್ರಹ ದಳಕ್ಕೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ದೂರು ನೀಡಿದ್ದು, ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದರು.

rmg college 3

ಸಿದ್ದರಾಮಯ್ಯ ಸರ್ಕಾರದಲ್ಲಿ 2015ರಲ್ಲಿ ಹೇಮಚಂದ್ರ ಸಾಗರ್ ಎಂಬವರ ನೇತೃತ್ವದ ಮಹಾತ್ಮ ಗಾಂಧಿ ವಿದ್ಯಾಪೀಠ ಟ್ರಸ್ಟ್ ಗೆ 5 ಎಕ್ರೆ 7 ಗುಂಟೆ ಬಿ-ಖರಾಬು ಜಮೀನನ್ನ ಪರಭಾರೆ ಮಾಡಲಾಗಿದೆ. ಬಿ-ಖರಾಬು ಜಮೀನನ್ನ ಯಾವುದೇ ಸಂಘ, ಸಂಸ್ಥೆ, ಸಂಘಟನೆಗಳಿಗೆ ನೀಡಬಾರದು ಎಂಬ ಕಾನೂನಿದೆ. ಆದ್ರೆ ಈ ಕಾನೂನನ್ನ ಗಾಳಿಗೆ ತೂರಿ ಸಿದ್ದರಾಮಯ್ಯ ಸರ್ಕಾರ ಕೋಟ್ಯಾಂತರ ರೂಪಾಯಿ ಬೆಲೆಯ ಜಮೀನನ್ನ ಶೇ 25% ರಂತೆ ಕೇವಲ 5 ಕೋಟಿ ರೂಪಾಯಿಗೆ ಪರಭಾರೆ ಮಾಡಲಾಗಿದೆ.

rmg college 4ಹೆದ್ದಾರಿ ಪಕ್ಕದಲ್ಲಿನ ಈ ಜಮೀನು ಸುಮಾರು 50 ಕೋಟಿ ರೂಪಾಯಿ ಮೌಲ್ಯವನ್ನ ಹೊಂದಿದ್ದು ಹರಾಜು ಪ್ರಕ್ರಿಯೆಯಾಗಲಿ, ಸರ್ಕಾರದಿಂದ ಹೆಚ್ಚಿನ ಹಣವನ್ನ ವಸೂಲಿ ಮಾಡಿ ಮಾರಾಟ ಮಾಡುವಂತಹ ಪ್ರಕ್ರಿಯೆ ನಡೆದಿಲ್ಲ. ಈ ಭಾಗದ ಜನರು ನಿವೇಶನಗಳಿಗಾಗಿ ಸಾಕಷ್ಟು ಮನವಿ ಸಲ್ಲಿಸಿದರೂ ಕ್ರಮ ಕೈಗೊಳ್ಳದೇ ನೇರವಾಗಿ ಭೂಮಿಯನ್ನ ಪರಭಾರೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳೇ ಶಾಮೀಲಾಗಿ ಭೂಮಿ ಪರಭಾರೆ ಮಾಡಿದ್ದಾರೆಂಬ ಆರೋಪ ಕೇಳಿಬರುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ದೂರು ನೀಡಲಾಗಿದೆ.

TAGGED:ACBB-Kharabu LandCongress GovernmentlandofficialsPublic TVramanagaraಅಧಿಕಾರಿಗಳುಎಸಿಬಿಕಾಂಗ್ರೆಸ್ ಸರ್ಕಾರಜಮೀನುಪಬ್ಲಿಕ್ ಟಿವಿಬಿ-ಖರಾಬು ಜಮೀನುರಾಮನಗರ
Share This Article
Facebook Whatsapp Whatsapp Telegram

Cinema news

Rajath Kishan and Dog Satish
ಶೌಚಾಲಯದಲ್ಲಿದ್ದ ವಿಡಿಯೋವೊಂದಕ್ಕೆ ಸುದೀಪ್ ಮೂವಿ ಹಾಡು – ಡಾಗ್ ಸತೀಶ್ ವಿರುದ್ಧ ರಜತ್ ದೂರು
Bengaluru City Cinema Karnataka Latest Main Post Sandalwood
Vijay Sangeetha Sornalingam
ನಟಿ ಜೊತೆ ವಿವಾಹೇತರ ಸಂಬಂಧ ಆರೋಪ; ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ ನಟ ವಿಜಯ್‌ ಪತ್ನಿ
Cinema Latest Main Post South cinema
The Kerala Story 2
‘ದಿ ಕೇರಳ ಸ್ಟೋರಿ 2’ ಸಿನಿಮಾಗೆ ಬಿಗ್‌ ರಿಲೀಫ್‌ – ರಿಲೀಸ್‌ಗಿದ್ದ ತಡೆಯಾಜ್ಞೆ ತೆರವುಗೊಳಿಸಿದ ಹೈಕೋರ್ಟ್‌
Cinema Court Latest Main Post South cinema
Rashmika Mandanna Vijay Deverakonda Wedding
Rashmika Mandanna-Vijay Deverakonda Wedding: ಮದುವೆಯ ಫೋಟೊ ಹಂಚಿಕೊಂಡ ರಶ್ಮಿಕಾ ಮಂದಣ್ಣ
Cinema Latest Main Post South cinema

You Might Also Like

Amir Nasirzadeh
Latest

ಇಸ್ರೇಲ್‌ ದಾಳಿಗೆ ಇರಾನ್ ರಕ್ಷಣಾ ಸಚಿವ ಅಮೀರ್ ಬಲಿ?

Public TV
By Public TV
5 hours ago
P.V.Sindhu stranded at Dubai airport
Latest

ದುಬೈ ಏರ್‌ಪೋರ್ಟ್‌ನಲ್ಲಿ ಸಿಲುಕಿದ ಬ್ಯಾಡ್ಮಿಂಟನ್‌ ತಾರೆ ಪಿ.ವಿ.ಸಿಂಧು

Public TV
By Public TV
5 hours ago
Whitefield Water Sump Death
Bengaluru City

ನೀರಿನ ಸಂಪ್ ಸ್ವಚ್ಛ ಮಾಡಲು ಇಳಿದ ಮೂವರು ದುರ್ಮರಣ

Public TV
By Public TV
5 hours ago
pakistan
Cricket

ಟಿ20 ವಿಶ್ವಕಪ್‌ನಿಂದ ಪಾಕ್‌ ಔಟ್‌ – ನ್ಯೂಜಿಲೆಂಡ್‌ ಸೆಮಿಗೆ

Public TV
By Public TV
6 hours ago
big bulletin 28 February 2026 part 1
Big Bulletin

ಬಿಗ್‌ ಬುಲೆಟಿನ್‌ 28 February 2026 ಭಾಗ-1

Public TV
By Public TV
6 hours ago
big bulletin 28 February 2026 part 2
Big Bulletin

ಬಿಗ್‌ ಬುಲೆಟಿನ್‌ 28 February 2026 ಭಾಗ-2

Public TV
By Public TV
6 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?