Connect with us

ಕಾಂಗ್ರೆಸ್‍ನಿಂದ ನೀನಾ-ನಾನಾ ಆಟ ಶುರು – ಬಿಜೆಪಿ, ಆರ್ ಎಸ್‍ಎಸ್‍ಗೆ ಟಾಂಗ್ ಕೊಡೋಕೆ ಟ್ರೈನಿಂಗ್

ಕಾಂಗ್ರೆಸ್‍ನಿಂದ ನೀನಾ-ನಾನಾ ಆಟ ಶುರು – ಬಿಜೆಪಿ, ಆರ್ ಎಸ್‍ಎಸ್‍ಗೆ ಟಾಂಗ್ ಕೊಡೋಕೆ ಟ್ರೈನಿಂಗ್

ಬೆಂಗಳೂರು: ಕರ್ನಾಟಕದಲ್ಲಿ ಚುನಾವಣೆಯ ಆಟ ಶುರುವಾಗಿದೆ. ಬಿಜೆಪಿ ವಿಸ್ತಾರಕರಿಗೆ ಬೈಕ್‍ಗಳು ಕೊಟ್ಟು ವಿಧಾನಸಭಾ ಕ್ಷೇತ್ರಗಳನ್ನು ಸುತ್ತಲು ಪ್ಲಾನ್ ಶುರುವಾದ ಬೆನ್ನಲ್ಲೇ, ಕಾಂಗ್ರೆಸ್ ಕೂಡ ನೀನಾ-ನಾನಾ ಆಟ ಶುರು ಮಾಡಿದೆ.

ಬಿಜೆಪಿ, ಆರ್ ಎಸ್‍ಎಸ್, ಹಿಂದೂ ಸಂಘಟನೆಗಳ ಮಾತಿಗೆ-ಮಾತು, ಏಟಿಗೆ-ಎದುರೇಟು ಕೊಡೋದಕ್ಕೆ ಟ್ರೈನಿಂಗ್ ಶುರುಮಾಡಿದೆ. ಪ್ರತಿ ವಿಧಾನ ಸಭಾ ಕ್ಷೇತ್ರ ಹಾಗು ಜಿಲ್ಲಾ ಮಟ್ಟದ ಬರೋಬ್ಬರಿ 320 ಯುವ ಕಾರ್ಯಕರ್ತರಿಗೆ ಈ ತರಬೇತಿ ಕೊಡಲಾಗುತ್ತಿದ್ದು, ಯಾವುದೇ ಕಾರಣಕ್ಕೂ ಬಿಜೆಪಿಯವರ ಮಾತು ಬೆಳೆಸದಂತೆ ನೋಡಿಕೊಳ್ಳಿ ಅನ್ನೋದು ಈ ತರಬೇತಿಯ ಪೂರ್ಣಪಾಠವಾಗಿದೆ.

ಇದಕ್ಕಾಗಿ ಡೆಲ್ಲಿಯಿಂದ 20 ಮಂದಿಯ ತಂಡ ಬೆಂಗಳೂರಿಗೆ ಆಗಮಿಸಿದೆ. ಜವಹಾರಲಾಲ್ ನೆಹರು ನಾಯಕತ್ವದ ತರಬೇತಿ ಕೇಂದ್ರದಿಂದ ಈ ಟ್ರೈನಿಂಗ್ ಕೊಡಲಾಗುತ್ತಿದೆ. ಅಲ್ಲದೇ ಅರಮನೆ ಮೈದಾನದಲ್ಲಿ ನಿತ್ಯವೂ ತರಬೇತಿ ಕೊಡಲಾಗುತ್ತಿದೆ ಎಂಬುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ದೊರೆತಿದೆ.

Advertisement
Advertisement