– ಯಾಸೀರ್ ಖಾನ್ ಮೇಲೆ 17 ಕೇಸ್ ಇದೆ
ಹಾವೇರಿ: ಕಾಂಗ್ರೆಸ್ ರೌಡಿಶೀಟರ್‌ಗೆ ಟಿಕೆಟ್ ನೀಡಿದೆ ಎಂದು ಶಿಗ್ಗಾಂವಿ ಕಾಂಗ್ರೆಸ್ ಟಿಕೆಟ್ ವಂಚಿತ ಅಜ್ಜಂಫೀರ್ ಖಾದ್ರಿ ( Syed Azeempeer Khadri ) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಕ್ಷೇತರವಾಗಿ ಸ್ಪರ್ಧೆ ಮಾಡುವ ಕುರಿತು ಖಾದ್ರಿ ಚಿಂತನೆ ನಡೆಸಿದ್ದು, ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ಕೈಗೊಳ್ಳಲು ಖಾದ್ರಿ ಮುಂದಾಗಿದ್ದಾರೆ. ಶಿಗ್ಗಾವಿ ತಾಲೂಕು ಹುಲಗೂರು ಗ್ರಾಮದ ತಮ್ಮ ನಿವಾಸದಲ್ಲಿ ಇಂದು ಬೆಳಿಗ್ಗೆ ಬೆಂಬಲಿಗರ ಸಭೆ ನಡೆಸಿದರು. ಇದನ್ನೂ ಓದಿ: ಬೆಂಗಳೂರು| ಬೀಳುವ ಹಂತದಲ್ಲಿದ್ದ 6 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಆರಂಭ
ನಾನು ನಿಷ್ಟಾವಂತ ಕಾರ್ಯಕರ್ತ. ಇನ್ನೂ ಅವಕಾಶ ಇದೆ, ನನಗೆ ಟಿಕೆಟ್ ಕೊಡಲಿ. ಯಾಸೀರ್ ಖಾನ್ ಪಠಾಣ್ (Yasir Ahmed Khan Pathan) ಒಬ್ಬ ರೌಡಿಶೀಟರ್, ಅವನು ಬಿಜೆಪಿ ಏಜೆಂಟ್ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಜಾತಿ ನಿಂದನೆ ಕೇಸ್‌ನಲ್ಲಿ 98 ಮಂದಿಗೆ ಜೀವಾವಧಿ – ತೀರ್ಪು ಪ್ರಕಟವಾಗುತ್ತಿದ್ದಂತೆ ಅಸ್ವಸ್ಥಗೊಂಡಿದ್ದ ದೋಷಿ ಸಾವು
ಈ ಬಗ್ಗೆ ಖಾದ್ರಿ ಗುರುವಾರ ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಕಳೆದ 23 ವರ್ಷದಿಂದ ನಾನು ಕಾಂಗ್ರೆಸ್ ಕಟ್ಟಿದ್ದೇನೆ. ಒಮ್ಮೆ ಶಾಸಕನಾಗಿದ್ದೇನೆ, ಮೂರು ಬಾರಿ ಬಸವರಾಜ ಬೊಮ್ಮಾಯಿ ವಿರುದ್ಧ ಅತ್ಯಂತ ಕಡಿಮೆ ಅಂತರದಿಂದ ಸೋತಿದ್ದೇನೆ. ಬೊಮ್ಮಾಯಿ ವಿರುದ್ಧ ಆಗ ಯಾರೂ ಟಿಕೆಟ್ ಪಡೆಯಲು ತಯಾರು ಇರಲಿಲ್ಲ. ಅಂಥ ಸಂದರ್ಭದಲ್ಲಿ ನಾನು ನಿಂತಿದ್ದೇನೆ. ನಾನು ಸ್ಪರ್ಧೆ ಮಾಡಿದಾಗ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್‌ನ ಯಾವ ಮುಖಂಡರು ಪ್ರಚಾರಕ್ಕೆ ಬರಲಿಲ್ಲ. ‘ಹೇ ಬೊಮ್ಮಾಯಿ ನಿಂತಿದ್ದಾರೆ ಹೇಗೆ ಪ್ರಚಾರ ಮಾಡಲಿ’ ಅನ್ನುತ್ತಿದ್ದರು. ಆ ಸಮಯದಲ್ಲಿ ಕೈ ಮುಗಿದು ಕೇಳಿದರೂ ಯಾರೂ ಪ್ರಚಾರಕ್ಕೆ ಬರಲಿಲ್ಲ. ಲಿಂಗಾಯತ ನಾಯಕರು, ಕುರುಬ, ನಾಯಕ ಸಮುದಾಯದ ಯಾವೊಬ್ಬ ನಾಯಕರೂ ಬಂದಿರಲಿಲ್ಲ. ಅವರೆಲ್ಲರು ಬಂದು ಪ್ರಚಾರ ಮಾಡಿದರೆ ನಾನು ಗೆದ್ದು ಬೊಮ್ಮಾಯಿ ಸೋಲುತಿದ್ದರು ಎಂದರು. ಇದನ್ನೂ ಓದಿ: ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಆರೋಪ – ಮಗ, ಸೊಸೆ ಅರೆಸ್ಟ್
ನಾನು ಒಬ್ಬ ಅಲ್ಪಸಂಖ್ಯಾತ ಅನ್ನುವ ಕಾರಣಕ್ಕೆ ಬೇರೆ ಸಮುದಾಯದ ಯಾರೂ ಬಂದು ಪ್ರಚಾರ ಮಾಡಲಿಲ್ಲ. ಹೊಂದಾಣಿಕೆಯ ರಾಜಕಾರಣ ಮಾಡಿ ಬೊಮ್ಮಾಯಿಯನ್ನು ಗೆಲ್ಲಿಸಿದ್ದಾರೆ. ಈಗ ಹಾನಗಲ್ಲಿನ ಪಠಾಣ್‌ಗೆ ಟಕೆಟ್ ಕೊಟ್ಟಿದ್ದಾರೆ. ಅವನೊಬ್ಬ ರೌಡಿಶೀಟರ್, ಅವನ ಮೇಲೆ 17 ಕೇಸ್ ಇದೆ. ಕ್ಷೇತ್ರದ ಜನರು ಸ್ಥಳೀಯ ಅಭ್ಯರ್ಥಿಯನ್ನು ಬಯಸುತ್ತಾರೆ. ನಾನು ಸ್ಥಳೀಯನಾಗಿದ್ದೇನೆ, ಮುಂದಿನ ದಿನದಲ್ಲಿ ಪಿತೂರಿಯ ಎಲ್ಲಾ ವಿಚಾರ ಬಹಿರಂಗವಾಗಲಿದೆ ಎಂದು ಹರಿಹಾಯ್ದರು. ಇದನ್ನೂ ಓದಿ: ಮಹಾರಾಷ್ಟ್ರ ಚುನಾವಣೆ| ಬಾಬಾ ಸಿದ್ದಿಕಿ ಪುತ್ರ ಎನ್‌ಸಿಪಿಗೆ ಸೇರ್ಪಡೆ
ನಾನು ಸಿದ್ದರಾಮಯ್ಯರ (CM Siddaramaiah) ಅಭಿಮಾನಿಯಾಗಿದ್ದೇನೆ. ಅವರ ವಿರುದ್ಧ ಮಾತನಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಟಿಕೆಟ್ ಕೈ ತಪ್ಪಿರುವ ಹಿಂದೆ ಕಾಣದ ಕೈಗಳ ಪಿತೂರಿ ನಡೆದಿದೆ, ಒಳ ಒಪ್ಪಂದ ಆಗಿದೆ ಎಂದು ಜನ ಮಾತಾಡಿಕೊಳ್ಳುತ್ತಾರೆ. ಗೂಂಡಾಗಿರಿ ಮಾಡಿದವನಿಗೆ ಟಿಕೆಟ್ ಕೊಟ್ಟಿದ್ದಾರೆ. ಸೋಲುವವರಿಗೆ ಟಿಕೆಟ್ ಕೊಟ್ಟಿದ್ದಾರೆ. ನಾನು ಪಕ್ಷೇತರವಾಗಿ ನಿಲ್ಲಲ್ಲು ಕಾರ್ಯಕರ್ತರ ಒತ್ತಡ ಹೆಚ್ಚಾಗಿದೆ. ನನ್ನ ಕಾರ್ಯಕರ್ತರು ವಿಷ ಕುಡಿಯಲು ಹೋಗಿದ್ದಾರೆ ಎಂದರು. ಇದನ್ನೂ ಓದಿ: ಬೀದರ್| ನೀರಿನ ತೊಟ್ಟಿಗೆ ಬಿದ್ದು ಬಾಲಕಿ ದುರ್ಮರಣ