-ಸ್ವಾತಂತ್ರ್ಯ ಪೂರ್ವ ಚಳುವಳಿಯಲ್ಲಿ RSS ಭಾಗಿಯಾಗಿಲ್ಲ
ಬೆಂಗಳೂರು: ನಗರದಲ್ಲಿರುವ ರಸ್ತೆಗುಂಡಿಗಳಿಂದ (Patholes) ಕಾಂಗ್ರೆಸ್‌ಗೆ (Congress) ಕೆಟ್ಟ ಹೆಸರು ಬಂದಿದೆ ಎಂದು ಸಚಿವ ರಾಮಲಿಂಗಾರೆಡ್ಡಿ (Ramalinga Reddy) ತಿಳಿಸಿದರು.
ಬೆಂಗಳೂರು (Bengaluru) ರಸ್ತೆಗುಂಡಿಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಗುಂಡಿಗಳು ಇಲ್ಲದಂತೆ ನೋಡಿಕೊಳ್ಳುವ ಜವಾಬ್ದಾರಿ ಪಾಲಿಕೆಯದ್ದು ಮತ್ತು ರಾಜ್ಯ ಸರ್ಕಾರದ್ದು. ಬಿಜೆಪಿ ಸರ್ಕಾರ ಇದ್ದಾಗ ಗುಂಡಿಗಳ ಬಗ್ಗೆ ಹೈಕೋರ್ಟ್ ಮಾನಿಟರ್ ಮಾಡಿತ್ತು. ಎರಡು ವರ್ಷ ಹೈಕೋರ್ಟ್ (High Court) ಮಾನಿಟರ್ ಮಾಡಿದೆ. ಮುಖ್ಯ ಆಯುಕ್ತರನ್ನ ಕರೆಸಿ ಚೀಫ್ ಜಸ್ಟೀಸ್ ಮಾನಿಟರ್ ಮಾಡ್ತಿದ್ದರು. ಅದನ್ನ ನೋಡಿ ನಾವು ಗುಂಡಿ ಬೀಳದಂತೆ ನೋಡಿಕೊಳ್ಳಬೇಕಿತ್ತು. ರಸ್ತೆ ಗುಂಡಿಗಳಿಂದ ಬಿಜೆಪಿಗೂ ಹಿಂದೆ ಕೆಟ್ಟ ಹೆಸರು ಬಂದಿತ್ತು. ಈಗ ನಮಗೂ ಟೀಕೆ ಟಿಪ್ಪಣಿಗಳು ಬರುತ್ತಿವೆ ಎಂದರು.ಇದನ್ನೂ ಓದಿ: ದುಷ್ಟ, ಕೆಡುಕಿನ ಮೇಲೆ ಒಳ್ಳೆಯದರ ವಿಜಯ: ಭಾರತೀಯರಿಗೆ ವಿಜಯದಶಮಿ ಶುಭಾಶಯ ತಿಳಿಸಿದ ಮೋದಿ
ರಸ್ತೆಗುಂಡಿಗಳು ಬೀಳದ ಹಾಗೇ ನೋಡೋ ಜವಾಬ್ದಾರಿ ನಮ್ಮದಾಗಿತ್ತು. ಸಿಎಂ, ಡಿಸಿಎಂ ಅಕ್ಟೋಬರ್ ಒಳಗೆ ಎಲ್ಲಾ ಗುಂಡಿ ಮುಚ್ಚಬೇಕು ಎಂದು ಸೂಚನೆ ಕೊಟ್ಟಿದ್ದಾರೆ. ಅದರಂತೆ ಮುಚ್ಚುವ ಕೆಲಸ ಆಗುತ್ತದೆ ಎಂದು ಹೇಳಿದರು.
ಇದೇ ವೇಳೆ ಆರ್‌ಎಸ್‌ಎಸ್‌ಗೆ (RSS) 100 ವರ್ಷ ಪೂರೈಕೆ ಬಗ್ಗೆ ಮಾತನಾಡಿ, ಆರ್‌ಎಸ್‌ಎಸ್ ದೊಡ್ಡ ಸಂಘಟನೆ ದೊಡ್ಡ ಮಾತಿಲ್ಲ. ಆದರೆ ಆರ್‌ಎಸ್‌ಎಸ್ ಅವರು ಸ್ವಾತಂತ್ರ‍್ಯ ಪೂರ್ವ ಚಳುವಳಿಯಲ್ಲಿ ಭಾಗಿಯಾಗೇ ಇಲ್ಲ. ಶಾಲಾ ಮಕ್ಕಳು ಸ್ವಾತಂತ್ರ‍್ಯ ಪೂರ್ವ ಚಳುವಳಿಯಲ್ಲಿ ಭಾಗಿಯಾಗಿದ್ದರು. ಇಷ್ಡು ದೊಡ್ಡ ಸಂಘಟನೆ ಚಳುವಳಿಯಲ್ಲಿ ಭಾಗಿಯಾಗದೇ ಇರೋದು ದುರಾದೃಷ್ಟ ಎಂದರು.
100 ರೂಪಾಯಿ ನಾಣ್ಯ ಬಿಡುಗಡೆಗೆ ರಾಮಲಿಂಗಾರೆಡ್ಡಿ ವಿರೋಧ ವ್ಯಕ್ತಪಡಿಸಿದರು. ಆರ್‌ಎಸ್‌ಎಸ್ ಅವರು ಭಗವತ್ ಧ್ವಜಕ್ಕೆ ಗೌರವ ಕೊಟ್ಟು, ರಾಷ್ಟ್ರಧ್ವಜಕ್ಕೆ ಗೌರವ ಕೊಟ್ಟಿರಲಿಲ್ಲ. ಸ್ವಾತಂತ್ರ‍್ಯ ಬಂದು 52 ವರ್ಷಗಳ ಕಾಲ ನಾಗಪುರ ಮತ್ತು ಆರ್‌ಎಸ್‌ಎಸ್ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸಿರಲಿಲ್ಲ. ಅದಾದ ಮೇಲೆ ಜನರ ಒತ್ತಾಯಕ್ಕೆ ಮಣಿದು, ಟೀಕೆ ಟಿಪ್ಪಣಿಗಳು ಬಂದ ಮೇಲೆ ರಾಷ್ಟ್ರಧ್ವಜ ಹಾರಿಸಿದರು. ಈಗ ಸ್ವಾತಂತ್ರ‍್ಯ ದಿನ, ಗಣರಾಜ್ಯ ದಿನ ಆಚರಿಸುತ್ತಾರೆ. ಇದರಿಂದ ಆರ್‌ಎಸ್‌ಎಸ್ ಅವರ ರಾಷ್ಟ್ರಪ್ರೇಮ 52 ವರ್ಷಕ್ಕಿಂತ ಮುಂಚೆ ಹೇಗಿತ್ತು ಅಂತ ಗೊತ್ತಾಗುತ್ತದೆ ಅಂತ ಕಿಡಿಕಾರಿದರು.ಇದನ್ನೂ ಓದಿ:ವಿಜಯದಶಮಿ ದಿನವೇ ಬೆಂಗ್ಳೂರಲ್ಲಿ ಅಗ್ನಿ ಅವಘಡ – ಸುಟ್ಟು ಕರಕಲಾದ 19 ಇವಿ ಬೈಕ್‌ಗಳು