ಕಲಬುರಗಿ: ಕಾಂಗ್ರೆಸ್ (Congress) ಪಕ್ಷ ವೈಜ್ಞಾನಿಕ ನೆಲಗಟ್ಟಲ್ಲಿ ಅಚಲ ನಂಬಿಕೆ ಇಟ್ಟುಕೊಂಡಿದ್ದು, ನಾವು ಬಿಜೆಪಿಯವರ (BJP) ಹಾಗೆ ಮೂಢನಂಬಿಕೆ ಇಟ್ಟುಕೊಂಡಿಲ್ಲವೆಂದು ಕಾಂಗ್ರೆಸ್ ಎಮ್‍ಎಲ್‍ಸಿ ಬಿಕೆ ಹರಿಪ್ರಸಾದ್ (B.K Hariprasad) ಹೇಳಿದ್ದಾರೆ.
ಖಾಸಗಿ ಕಾರ್ಯಕ್ರಮದ ನಿಮ್ಮಿತ್ತ ಆಗಮಿಸಿದ್ದ ವೇಳೆ ಕಲಬುರಗಿ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮದೇ ಕಾಂಗ್ರೆಸ್ ಸರ್ಕಾರವಿದ್ದಾಗ ಬೆಂಗಳೂರಿನಲ್ಲಿ ಇಸ್ರೋ ಸಂಸ್ಥೆಗೆ ಸ್ಥಳ ನೀಡಿದ್ದು. ನಾವು ಬಿತ್ತಿರೋ ಬೀಜದ ಮರದ ಹಣ್ಣನ್ನು ಬಿಜೆಪಿಯವರು ತಿನ್ನುತ್ತಿದ್ದಾರೆಂದು ಗುಡುಗಿದರು. ಇನ್ನೂ ಚಂದ್ರಯಾನದಲ್ಲಿ ಕಾರ್ಯನಿರ್ವಹಿಸಿದ್ದ ಬಹುತೇಕ ವಿಜ್ಞಾನಿಗಳು ಹಿಂದುಳಿದ ವರ್ಗಕ್ಕೆ ಸೇರಿದವರೆಂದು ಹರಿಪ್ರಸಾದ್ ಹೇಳಿದರು.
Advertisement
Advertisement
ಬಿಜೆಪಿ ಬಂದಮೇಲೆ ಘೋಷಣೆಗಳಿಗೆ ಏನೂ ಕಮ್ಮಿಯಿಲ್ಲ: ಒನ್ ನೇಷನ್ ಒನ್ ಎಲೆಕ್ಷನ್ ನೀತಿ ಜಾರಿಗೆ ತರಲು ಹೊರಟಿರೋ ಪ್ರಧಾನಿ ನರೇಂದ್ರ ಮೋದಿ ಕ್ರಮವನ್ನ ಎಮ್‍ಎಲ್‍ಸಿ ಬಿಕೆ ಹರಿಪ್ರಸಾದ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಮೇಲೆ ಘೋಷಣೆಗಳಿಗೆ ಕಮ್ಮಿ ಇಲ್ಲ. ಬಿಜೆಪಿಯು ರಾಷ್ಟ್ರದಲ್ಲಿನ ವೈವಿಧ್ಯತೆಯನ್ನ ಹಾಳು ಮಾಡುತ್ತಿದ್ದು, ವಿವೇಕಾನಂದರ ಆಶಯದ ವಿರುದ್ಧ ಬಿಜೆಪಿ ನಿರ್ಧಾರ ಕೈಗೊಳ್ಳುತ್ತಿದೆಯೆಂದು ಕಿಡಿಕಾರಿದರು. ಇನ್ನೂ ಮುಂದೆ ಒನ್ ನೇಷನ್ ಒನ್ ಲೀಡರ್ ಅಂದ್ರು ಅನ್ನಬಹುದು, ದೇಶದಲ್ಲಿ ಇಡಿ ಮತ್ತು ಸಿಬಿಐ ಬಳಸದೇ ಚುನಾವಣೆ ನಡೆಸಬೇಕಾಗಿದೆ ಅಂತಾ ಬಿಕೆ ಹರಿಪ್ರಸಾದ್ ಅಭಿಪ್ರಾಯಪಟ್ಟರು. ಇದನ್ನೂ ಓದಿ: ಆದಿತ್ಯ ಎಲ್-1 ಯಶಸ್ವಿ ಉಡಾವಣೆ – ಇಸ್ರೋ ವಿಜ್ಞಾನಿಗಳಿಗೆ ಮೋದಿ ಅಭಿನಂದನೆ
Advertisement
Advertisement
ಇಂದಿನವರು ಇಂದಿರಾಗಾಂಧಿಯವರನ್ನ ನೋಡಿ ಕಲಿಬೇಕು: ಮಂತ್ರಿ ಸ್ಥಾನ ಸಿಗದೇ ನಾನೇನು ಮುನಿಸಿಕೊಂಡಿಲ್ಲ. ನಾನು ಪಕ್ಕಾ ಕಾಂಗ್ರೆಸ್‍ನವನು ಅಂತಾ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ. ನನ್ನ ಹೋರಾಟ ಮಂತ್ರಿ ಸ್ಥಾನ ಸಿಕ್ಕಿಲ್ಲ ಅಂತಾ ಅಲ್ಲ. ಸಣ್ಣ ಸಮುದಾಯಗಳಿಗೆ ಅವಕಾಶ ಸಿಗಬೇಕು ಅನ್ನೊದು ನನ್ನ ಹೋರಾಟ ಅಂತಾ ಹೇಳಿದರು. ಸಣ್ಣ ಸಮುದಾಯಗಳಿಗೆ ಪ್ರಾತಿನಿಧ್ಯ ಸಿಗಬೇಕು ಅನ್ನೋ ಸಲುವಾಗಿ ನಾನು ಬೀದಿಗಿಳಿದು ಹೋರಾಟ ಮಾಡಲು ಸಿದ್ಧವೆಂದು ಹರಿಪ್ರಸಾದ್ ಹೇಳಿದರು. ಜವಾನನಿಂದ ಹಿಡಿದು ದಿವಾನವರೆಗೆ ಒಂದೇ ಜಾತಿಯವರನ್ನ ಹಾಕಿಕೊಳ್ಳಲು ಆಗಲ್ಲ. ಎಲ್ಲಾ ವರ್ಗದವರಿಗೂ ಅವಕಾಶ ಕೊಡೊದು ಇಂದಿನವರು ಇಂದಿರಾಗಾಂಧಿಯವರನ್ನ ನೋಡಿ ಕಲಿಬೇಕು ಅಂತಾ ಹರಿಪ್ರಸಾದ್ ಹೇಳಿದರು.
ಸಿಎಂಗೆ ಶಾಸಕ ರಾಯರೆಡ್ಡಿ ಪತ್ರ ವಿಚಾರ: ಸಚಿವರ ವಿರುದ್ಧ ಸಿಎಂಗೆ ರಾಯರೆಡ್ಡಿ ಸೇರಿದಂತೆ ಅನೇಕ ಶಾಸಕರು ಪತ್ರ ಬರೆದಿದ್ದ ವಿಚಾರ ಅವರನ್ನೆ ಕೇಳಿ ಅಂತಾ ಬಿಕೆ ಹರಿಪ್ರಸಾದ್ ಹೇಳಿದರು.
Web Stories