– ಕಾಂಗ್ರೆಸ್‌ನಂತೆ ಹಗರಣಗಳಲ್ಲೇ ಮುಳುಗೇಳುವ ಕೆಲಸ ಬಿಜೆಪಿ ಮಾಡಿಲ್ಲವೆಂದು ವಾಗ್ದಾಳಿ
ಬೆಂಗಳೂರು: ಹರಿಯಾಣದಲ್ಲಿ (Haryana) ಬಿಜೆಪಿ (BJP) ಗೆಲುವು ನಮಗೆ ಸ್ಪಷ್ಟವಾಗಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ 28 ರಿಂದ 32 ಸ್ಥಾನಗಳು ಬರಲಿದೆ ಎಂದು ನಮ್ಮ ಸಮೀಕ್ಷೆ ಹೇಳಿತ್ತು. ಆದ್ರೆ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu-Kashmir) ಕಾಂಗ್ರೆಸ್ ಫಾರ್ಮುಲಾ ಸಕ್ಸಸ್ ಆಗಿದೆ ಅನ್ನಿಸುತ್ತಿದೆ ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ (C T Ravi) ಹೇಳಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹರಿಯಾಣದಲ್ಲಿ ಬಿಜೆಪಿಗೆ ಆರಂಭಿಕ ಹಿನ್ನಡೆಯಾದರೂ ಬಳಿಕ ಮುನ್ನಡೆ ಕಾಯ್ದುಕೊಂಡಿದೆ. ಇನ್ನೂ ಫಲಿತಾಂಶ ಇದೆ ನೋಡೋಣ. ಕರ್ನಾಟಕದಲ್ಲಿ ಕಾಂಗ್ರೆಸ್ ಹಗರಣಗಳಲ್ಲೇ ಮುಳುಗೆದ್ದಿದೆ, ಆದ್ರೆ ಹರಿಯಾಣದಲ್ಲಿ ಹಗರಣದಲ್ಲೇ ಮುಳುಗೇಳುವ ಕೆಲಸ ಬಿಜೆಪಿ ಮಾಡಿಲ್ಲ. ಇನ್ನೂ 12 ಗಂಟೆ ಬಳಿಕ ಸ್ಪಷ್ಟತೆ ಸಿಗಲಿದೆ ಎಂದರು. ಇದನ್ನೂ ಓದಿ: ಸಿಎಂ ಆಪ್ತ ಮಹದೇವಪ್ಪರನ್ನ ಭೇಟಿಯಾದ ಸತೀಶ್ ಜಾರಕಿಹೊಳಿ – ರಾಜ್ಯ ರಾಜಕಾರಣದಲ್ಲಿ ಸಂಚಲನ
ಇದು ಭಾರತದ ಜಯ
ಫಲಿತಾಂಶ ಏನೇ ಬಂದರೂ ಚುನಾವಣಾ ಆಯೋಗ ದೂರೋದು, ಇವಿಎಂ ದೂರೋದು, ಜನ ಸರಿಯಿಲ್ಲ ಅಂತ ಇದುವರೆಗೆ ನಾವು ಮಾಡಿಲ್ಲ. ಕಾಂಗ್ರೆಸ್‌ನವರು ಅವರ ಪರ ಬಂದರೆ ಜನಾದೇಶ. ಇಲ್ಲದಿದ್ದರೇ ಇವಿಎಂ ದೋಷ. ಜನ ಸರಿಯಿಲ್ಲ ಅಂತಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಬಾರಿ ದೊಡ್ಡ ಪ್ರಮಾಣದಲ್ಲಿ ಮತ ಚಲಾವಣೆ ಆಗಿದೆ. ಆ ಮೂಲಕ ಅಲ್ಲಿನ ಜನ ನಾವು ಭಾರತದ ಜೊತೆಗೆ, ಪ್ರಜಾಪ್ರಭುತ್ವದ ಜೊತೆ ಇದ್ದೇವೆ ಎಂದು ತೋರಿಸಿದ್ದಾರೆ. ಹಾಗಾಗಿಯೇ ಇದು ಪ್ರಜಾಪ್ರಭುತ್ವದ ಜಯ. ಜನ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟು ಭಯೋತ್ಪಾದನೆಯ ವಿರುದ್ಧ ಮತ ಚಲಾಯಿಸಿದ್ದಾರೆ. ಇದು ಭಾರತದ ಜಯ ಎಂದು ಹೇಳಿದರು. ಇದನ್ನೂ ಓದಿ: Haryana Result | ಬಿಜೆಪಿಗೆ ಹ್ಯಾಟ್ರಿಕ್ ಗೆಲುವು ಖಚಿತ – ಸಿಎಂ ನಯಾಬ್ ಸಿಂಗ್ ಸೈನಿ ವಿಶ್ವಾಸ
ನಮ್ಮ ಸರ್ಕಾರ ಜನವಿರೋಧಿ ಕಾರ್ಯಗಳನ್ನು ಮಾಡಿರಲಿಲ್ಲ. ನಮ್ಮ ಸರ್ಕಾರ ಮತ್ತು ಪಕ್ಷದ ವಿರುದ್ಧ ಅಪಪ್ರಚಾರ ನಡೆಯಿತು. ಕರ್ನಾಟಕದಲ್ಲಿ ಕಾಂಗ್ರೆಸ್ ಹಗರಣದಲ್ಲೇ ಮುಳುಗೆದ್ದಿದೆ. ಕೆಲವೊಮ್ಮೆ ಅಪಪ್ರಚಾರವೇ ಗೆಲ್ಲುತ್ತದೆ. ಕಾಂಗ್ರೆಸ್ ಅಪಪ್ರಚಾರದಲ್ಲಿ ಎತ್ತಿದ ʻಕೈʼ. ಕರ್ನಾಟಕದಲ್ಲಿ ಅವರು ಅದನ್ನೇ ಮಾಡಿದ್ದಾರೆ. ಜಮ್ಮುವಿನಲ್ಲೂ ಅದನ್ನೇ ಮಾಡುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: Haryana Results| ಮುಖ್ಯಮಂತ್ರಿ ಸ್ಥಾನಕ್ಕೆ ನಾನು ಸ್ಪರ್ಧಿ: ಕೈ ಸಂಸದೆ ಸೆಲ್ಜಾ
ನಾವು ಜನಹಿತ ಹಾಗೂ ರಾಷ್ಟ್ರಹಿತವನ್ನು ಗಮನದಲ್ಲಿ ಇಟ್ಟುಕೊಂಡು, ಸೈದಾಂತಿಕ ನಿಲುವುಗಳಲ್ಲೂ ಸ್ಪಷ್ಟತೆ ಇಟ್ಟುಕೊಂಡು, ಜನರ ಮುಂದೆ ಪ್ರಣಾಳಿಕೆಯನ್ನು ಇಟ್ಟೆವು. ನಮ್ಮ ಸರ್ಕಾರ ಒಳ್ಳೆಯ ಕೆಲಸ ಮಾಡಿದೆ. ಹಾಗಾಗಿ ಉತ್ತಮ ಫಲಿತಾಂಶವೇ ಸಿಗುತ್ತೆ ಎಂಬ ನಂಬಿಕೆ ಇದೆ ಎಂದರು. ಇದನ್ನೂ ಓದಿ: ರಾಜ, ರಾಜಕಾರಣಿಯಾಗಿ ಮೈಸೂರು ದಸರಾದಲ್ಲಿ ಭಾಗಿ – ಪರಂಪರೆ ಮುಂದುವರಿಸಿದ ಯದುವೀರ್