– ನಾನು ಬಿಜೆಪಿ ನಿಷ್ಠಾವಂತ ಕಾರ್ಯಕರ್ತ ಎಂದ ಸಂಸದ ತ್ಸೆರಿಂಗ್
ಲಡಾಖ್: ಇಲ್ಲಿನ ಲೋಕಸಭಾ ಕ್ಷೇತ್ರದಿಂದ (Ladakh Constituency) ಬಿಜೆಪಿ ಹಾಲಿ ಸಂಸದನಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದು, ಪಕ್ಷದ ಅಧಿಕೃತ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆ ಬಿಜೆಪಿ ಸಂಸದ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ (Jamyang Tsering Namgyal )ಸ್ಪಷ್ಟನೆ ನೀಡಿದ್ದಾರೆ.
I want to clarify that I never said these words. I strongly condemn those spreading false statements by misusing my name. As a loyal BJP Karyakarta, I’ve always admired our most dynamic leader Sh. Narendra Modi Ji and all our leadership. https://t.co/IPxsFIXCTr
— Jamyang Tsering Namgyal (Modi Ka Parivar) (@jtnladakh) April 25, 2024
Advertisement
ʻತ್ಸೆರಿಂಗ್ ನಮ್ಗ್ಯಾಲ್ʼ (Tsering Namgyal) ಅಭ್ಯರ್ಥಿಯ ಹೆಸರು ಈ ಗೊಂದಲಕ್ಕೆ ಕಾರಣವಾಗಿದೆ. ಇಲ್ಲಿನ ಬಿಜೆಪಿ ಸಂಸದರ ಹೆಸರೂ ಸಹ ಇದೇ ಆಗಿದ್ದರಿಂದ ಗೊಂದಲ ಉಂಟಾಗಿದೆ. ಈ ಬಗ್ಗೆ ಸಂಸದ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ತಮ್ಮ ಸೋಶಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ರಾಯ್‌ಬರೇಲಿಯಿಂದ ರಾಹುಲ್, ಅಮೇಠಿಯಿಂದ ಕಿಶೋರಿ ಲಾಲ್ ಶರ್ಮಾ ಕಣಕ್ಕೆ
Advertisement
ʻನಾನು ಆ ರೀತಿಯ ಪದಗಳನ್ನು ಎಂದಿಗೂ ಹೇಳಿಲ್ಲ. ನನ್ನ ಹೆಸರಿನಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿರುವವರನ್ನು ತೀವ್ರವಾಗಿ ಖಂಡಿಸುತ್ತೇನೆ. ನಾನು ಬಿಜೆಪಿಯ ಪ್ರಾಮಾಣಿಕ ಕಾರ್ಯಕರ್ತ, ಅತ್ಯಂತ ಕ್ರಿಯಾಶೀಲ ನಾಯಕ ನರೇಂದ್ರ ಮೋದಿ (PM Modi) ಅವರೇ ಎಂದಿಗೂ ನಮ್ಮ ನಾಯಕʼ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಯಾವುದೇ ಲಸಿಕೆಯ ಮೊದಲ ಆದ್ಯತೆ ಸುರಕ್ಷತೆ: ಕೋವ್ಯಾಕ್ಸಿನ್ ಅಭಿವೃದ್ಧಿಪಡಿಸಿದ ಭಾರತ್ ಬಯೋಟೆಕ್ ಹೇಳಿಕೆ
Advertisement
Advertisement
ಕಾಂಗ್ರೆಸ್ ಟಿಕೆಟ್ ನೀಡಿದ್ದ ತ್ಸೆರಿಂಗ್ ಯಾರು?
ಲೇಹ್ ಮೂಲದ ತ್ಸೆರಿಂಗ್ ನಮ್ಗ್ಯಾಲ್ ಲಡಾಖ್ ಸ್ವಾಯತ್ತ ಹಿಲ್ ಡೆವಲಪ್‌ಮೆಂಟ್ ಕೌನ್ಸಿಲ್ (LAHDC)ನಲ್ಲಿ ವಿರೋಧ ಪಕ್ಷದ ನಾಯಕನಾಗಿ ಸೇವೆ ಸಲ್ಲಿಸುತ್ತಿದ್ದರು. ಇದೀಗ ಕಾರ್ಗಿಲ್ ಜಿಲ್ಲೆಯಲ್ಲಿ ಶಿಯಾ ಮುಸ್ಲಿಂ ಪಂಗಡದ ಪ್ರಭಾವಿ ಹಾಜಿ ಹನೀಫಾ ಜಾನ್ ವಿರುದ್ಧ ಕಣಕ್ಕಿಳಿದಿದ್ದಾರೆ. ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಬ್ರಿಜ್‌ಭೂಷಣ್‌ಗೆ ಟಿಕೆಟ್ ಇಲ್ಲ – ಪುತ್ರನಿಗೆ ಬಿಜೆಪಿ ಮಣೆ