ಬೆಂಗಳೂರು: ಸಚಿವ ಸ್ಥಾನ ಹಂಚಿಕೆಯಲ್ಲಿ ಕಾಂಗ್ರೆಸ್ ಶಾಸಕರಲ್ಲಿ ಭಿನ್ನಮತದ ಉಂಟಾಗಿದ್ದು, ಇದರ ಬೆನ್ನಲೇ ಮತ್ತೊಂದು ತಲೆನೋವು ಕಾಂಗ್ರೆಸ್ಸನ್ನು ಆವರಿಸಿಕೊಂಡಿದೆ.
ಸದ್ಯ ಕಾಂಗ್ರೆಸ್ಸಿನಲ್ಲಿ ದಲಿತ ಎಡಗೈ-ಬಲಗೈ ಗಲಾಟೆ ಸ್ಫೋಟಗೊಂಡಿದ್ದು, ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ದಲಿತ ಎಡಗೈ ಸಮುದಾಯದವರು ಕಾಂಗ್ರೆಸ್ಸಿಗೆ ಮತ ಹಾಕಿಲ್ಲವಂತೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ್ಯಾ.ಸದಾಶಿವ ಆಯೋಗ ಜಾರಿಗೆ ಮುಂದಾಗಿದ್ದರು. ಹೀಗಾಗಿ ದಲಿತ ಎಡಗೈ ಸಮುದಾಯದವರು ಕಾಂಗ್ರೆಸ್ಸನ್ನು ಕೈ ಬಿಟ್ಟು ಬಿಜೆಪಿಯನ್ನು ಬೆಂಬಲಿಸಿದ್ದರು ಎಂದು ಕಾಂಗ್ರೆಸ್ ಹೈಕಮಾಂಡ್‍ಗೆ ದಲಿತ ಬಲಗೈ ಮುಖಂಡರು ದೂರು ನೀಡಿದ್ದರು.
Advertisement
Advertisement
ದಲಿತ ಬಲಗೈ ದೂರು ಕೇಳಿ ಬಂದ ಬೆನ್ನಲ್ಲೆ ಮಾಜಿ ಸಚಿವ ಎಚ್.ಆಂಜನೇಯ, ಸಂಸದರಾದ ಕೆ.ಎಚ್.ಮುನಿಯಪ್ಪ ಹಾಗೂ ಬಿ.ಎನ್.ಚಂದ್ರಪ್ಪ ಅವರು ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಜೊತೆ ಮಾತುಕತೆಗೆ ಮುಂದಾಗಿದ್ದು, ಹೀಗೆ ಮಾತನಾಡಿದರೆ ನಮ್ಮ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುತ್ತದೆ. ದಲಿತ ಎಡಗೈ ಸಮುದಾಯದ ಪ್ರಾಬಲ್ಯ ಇರುವ ಕ್ಷೇತ್ರಗಳ ಮತ ಹಂಚಿಕೆಯನ್ನು ತರಿಸಿಕೊಂಡು ನೋಡಿ ಎಂದು ವೇಣುಗೋಪಾಲ್ ಅವರ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.