ಬೆಂಗಳೂರು: ಕಾಂಗ್ರೆಸ್ಸಿಗರು (Congress) ಈಗ ವಸೂಲಿ ದಂಧೆಯಲ್ಲಿ 100% ಮುಳುಗಿ ಹೋಗಿದ್ದಾರೆ ಎಂದು ಶಿಕಾರಿಪುರದ ಶಾಸಕ, ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಕಿಡಿಕಾರಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಈ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ಕಾಲು ವರ್ಷವೂ ಕಳೆದಿಲ್ಲ ಆಗಲೇ ಕಂಟ್ರಾಕ್ಟ್ ಕಮೀಷನ್, ವರ್ಗಾವಣೆ ವ್ಯಾಪಾರದ ಹೊಲಸು ಮೈಗೆಲ್ಲಾ ಮೆತ್ತಿಸಿಕೊಳ್ಳುತ್ತಿದೆ. ಬಿಜೆಪಿ ಸರ್ಕಾರದ ಮೇಲೆ ಪರ್ಸೆಂಟೇಜ್ ಆರೋಪ ಹೊರಿಸುತ್ತಿದ್ದ ಕಾಂಗ್ರೆಸ್ಸಿಗರು ಇದೀಗ ವಸೂಲಿ ದಂಧೆಯಲ್ಲಿ 100% ಮುಳುಗಿ ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಈ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ಕಾಲು ವರ್ಷವೂ ಕಳೆದಿಲ್ಲ ಆಗಲೇ ಕಂಟ್ರಾಕ್ಟ್ ಕಮೀಷನ್, ವರ್ಗಾವಣೆ ವ್ಯಾಪಾರದ ಹೊಲಸು ಮೈಗೆಲ್ಲಾ ಮೆತ್ತಿಸಿಕೊಳ್ಳುತ್ತಿದೆ, ಬಿಜೆಪಿ ಸರ್ಕಾರದ ಮೇಲೆ ಪರ್ಸೆಂಟೇಜ್ ಆರೋಪ ಹೊರಿಸುತ್ತಿದ್ದ ಕಾಂಗ್ರೆಸ್ಸಿಗರು ಇದೀಗ ವಸೂಲಿ ದಂಧೆಯಲ್ಲಿ 1೦೦% ಮುಳುಗಿ ಹೋಗಿದ್ದಾರೆ.
— Vijayendra Yeddyurappa (@BYVijayendra) August 9, 2023
Advertisement
ಬಿಜೆಪಿ ಕರ್ನಾಟಕ (BJP Karnataka) ಟ್ವೀಟ್ ಮಾಡಿ, ಕಲುಷಿತ ನೀರು ಸೇವಿಸಿ ಸಾರ್ವಜನಿಕರು ಸತ್ತರೆ ನಮ್ಮನ್ನು ಕೇಳಬೇಡಿ. ಆತ್ಮಹತ್ಯೆಯಿಂದ ರೈತರು ಸತ್ತರೆ ಚಿಂತಿಸಬೇಡಿ. ಭ್ರಷ್ಟಾಚಾರ ಮಾಡಿ ಕಮಿಷನ್ ಪಡೆಯಲು ನಾವ್ ರೆಡಿ, ನಾವ್ ರೆಡಿ. ಇದು #ATMSarkara ದ ನಿತ್ಯಗೀತೆ ಎಂದು ಬರೆದು ಟೀಕಿಸಿದೆ. ಇದನ್ನೂ ಓದಿ: ರಿಲಯನ್ಸ್ ಹಿಂದಿಕ್ಕಿ ಲಾಭಾಂಶದಲ್ಲಿ ದೇಶದಲ್ಲಿ ನಂ.1 ಕಂಪನಿಯಾಗಿ ಹೊರಹೊಮ್ಮಿದ ಎಸ್ಬಿಐ
Advertisement
#ATMSarkara ದ ನಿತ್ಯಗೀತೆ.
ಕಲುಷಿತ ನೀರು ಸೇವಿಸಿ ಸಾರ್ವಜನಿಕರು ಸತ್ತರೆ ನಮ್ಮನ್ನು ಕೇಳಬೇಡಿ.
ಆತ್ಮಹತ್ಯೆಯಿಂದ ರೈತರು ಸತ್ತರೆ ಚಿಂತಿಸಬೇಡಿ.
ಭ್ರಷ್ಟಾಚಾರ ಮಾಡಿ ಕಮಿಷನ್ ಪಡೆಯಲು ನಾವ್ ರೆಡಿ, ನಾವ್ ರೆಡಿ. pic.twitter.com/3A2nFOhbko
— BJP Karnataka (@BJP4Karnataka) August 9, 2023
Advertisement
ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು 40% ಕಮಿಷನ್ ಆರೋಪ ಮಾಡಿದ್ದರು. ಈಗ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ 100% ಕಮಿಷನ್ ಆರೋಪ ಮಾಡಲು ಆರಂಭಿಸಿದ್ದಾರೆ.
Web Stories