– ಬೈರತಿ ಸುರೇಶ್ ಬಂಧನಕ್ಕೆ ಸ್ನೇಹಮಯಿ ಕೃಷ್ಣ ಆಗ್ರಹ
ಮೈಸೂರು: ಮುಡಾ ಸೈಟು (MUDA Site) ವಿಚಾರದಲ್ಲಿ ಕಾನೂನು ಪ್ರಕಾರವಾಗಿಯೇ ಸಿದ್ದರಾಮಯ್ಯನವರಿಗೆ 120 ಕೋಟಿ ರೂ. ಪರಿಹಾರ ಕೊಡಬೇಕಿತ್ತು ಎಂದು ಸಿಎಂ ಪರ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ (MK Somashekar) ಬ್ಯಾಟ್ ಬೀಸಿದ್ದಾರೆ.
ಮೈಸೂರಿನ ಕನಕಭವನದಲ್ಲಿ ನಡೆದ ಕನಕದಾಸ ಜಯಂತ್ಯುತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಿದ್ದರಾಮಯ್ಯ (Siddaramaiah) ಅವರ ಪ್ರಕರಣ ಏನೇನೂ ಅಲ್ಲ. ಆದ್ರೂ ಎಲ್ಲರೂ ಇದನ್ನ ದೊಡ್ಡದು ಮಾಡಿ ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಮುಡಾ ಮಾಜಿ ಆಯುಕ್ತ ನಟೇಶ್ ಅವರು, ಕಾನೂನು ಪ್ರಕಾರವಾಗಿ ಸೈಟು ನೀಡಿರುವುದಾಗಿ ಹೇಳಿದ್ದಾರೆ. ಸಿದ್ದರಾಮಯ್ಯನವರಗೆ ಕಾನೂನು ಪ್ರಕಾರ ಪರಿಹಾರ ಕೊಟ್ಟಿದ್ದರೂ 120 ಕೋಟಿ ರೂ. ಕೊಡಬೇಕಿತ್ತು. ಅದಕ್ಕೆ ಅರ್ಧ ಅಂದ್ರೆ 60 ಕೋಟಿ ರೂ. ಆದರೂ ಕೊಡಬೇಕಿತ್ತು. ಅಂತಹದ್ದರಲ್ಲಿ, ಇಷ್ಟೆಲ್ಲ ರಾದ್ಧಾಂತ ಮಾಡಿದ್ದಾರೆ ಎಂದು ಎಂ.ಕೆ ಸೋಮಶೇಖರ್ ಸಿಎಂ ಪರ ಬ್ಯಾಟ್ ಬೀಸಿದರು.
ಮತ್ತೊಂದು ಮಹತ್ವದ ದಾಖಲೆ ರಿಲೀಸ್:
ಮುಡಾ ಅವ್ಯವಹಾರ ಆರೋಪ ಸಂಬಂಧ ಮತ್ತೊಂದು ಮಹತ್ವದ ದಾಖಲೆಯನ್ನು ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ (Snehamayi Krishna) ಬಿಡುಗಡೆ ಮಾಡಿದ್ದಾರೆ. ಈ ಹಿಂದೆಯೇ 50:50 ಅಕ್ರಮದ ಬಗ್ಗೆ ತನಿಖೆಗೆ ಮೈಸೂರು ಲೋಕಾಯುಕ್ತ ಮುಂದಾಗಿತ್ತು. ತನಿಖೆ ನಡೆಸಲು ಸರ್ಚ್ ವಾರೆಂಟ್ ಕೂಡ ಮೈಸೂರು ಲೋಕಾಯುಕ್ತ ಪಡೆದಿತ್ತು. ಆದ್ರೆ, ಕೊನೆ ಕ್ಷಣದಲ್ಲಿ ಮುಡಾ ಸರ್ಚ್ ವಾರೆಂಟ್ ವಾಪಸ್ಸು ಪಡೆಯಲಾಗಿತ್ತು. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ರಿಲೀಸ್ ಮಾಡಿದ್ದಾರೆ. ಅಲ್ಲದೇ ಲೋಕಾಯುಕ್ತ ಉದ್ದೇಶಪೂರ್ವಕವಾಗಿ ಸರ್ಚ್ ವಾರೆಂಟ್ ಹಿಂಪಡೆದಿದೆ ಎಂದು ಆರೋಪಿಸಿದ್ದಾರೆ.
ಅಷ್ಟೇ ಅಲ್ಲ, ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಅಕ್ರಮವಾಗಿ ಕಡತ ವಶಕ್ಕೆ ಪಡೆದಿದ್ದಾರೆ. ಇದ್ರಲ್ಲಿ ಲೋಕಾಯುಕ್ತ ಅಧಿಕಾರಿಗಳು ಸಚಿವ ಭೈರತಿ ಸುರೇಶ್ ಜೊತೆ ಶಾಮೀಲಾಗಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ಸಚಿವ ಬೈರತಿ ಸುರೇಶ್ ಬಂಧನಕ್ಕೆ ಆಗ್ರಹಿಸಿದ್ದಾರೆ. ಇನ್ನೂ ಪ್ರಾಸಿಕ್ಯೂಷನ್‌ಗೆ ಅನುಮತಿ ಪ್ರಶ್ನಿಸಿ ಸಿಎಂ ಮತ್ತು ಎ4 ದೇವರಾಜು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ಶನಿವಾರ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ.