ಕೊಪ್ಪಳ: ಇಲ್ಲಿನ ಕನಕಗಿರಿ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ (Congress) ಸಮಾವೇಶಕ್ಕೆ ಆಗಮಿಸಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi) ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಿವರಾಜ ತಂಗಡಗಿ (Shivaraj Tangadagi) ಪರ ಭರ್ಜರಿ ಪ್ರಚಾರ ನಡೆಸಿದರು. ಈ ವೇಳೆ ಪ್ರಚಾರಕ್ಕೆ ಆಗಮಿಸಿದ್ದ ಪ್ರಿಯಾಂಕಾ ಗಾಂಧಿಗೆ, ಶಿವರಾಜ ತಂಗಡಗಿ ಕುಟುಂಬದಿಂದ ಮಲ್ಲಿಗೆ ಹೂವು, ಸೀರೆ ನೀಡಿ ಸ್ವಾಗತಿಸಿದರು.
ಬಳಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ಇದು ಸತ್ಯದ ಕ್ಷೇತ್ರ, ಇಲ್ಲಿನ ಜನ ಸತ್ಯವನ್ನೇ ನುಡಿಯುತ್ತಾರೆ. ನಮ್ಮ ಸ್ವಾತಂತ್ರ್ಯ ಹೋರಾಟ ಕೂಡಾ ಸತ್ಯದ ಹಾದಿಯಲ್ಲೇ ನಡೆದಿತ್ತು. ಮಹಾತ್ಮಾ ಗಾಂಧಿ, ನೆಹರೂ ಸತ್ಯದ ಹಾದಿಯಲ್ಲಿ ನಡೆಯುತ್ತಿದ್ದರು. ನಾವೂ ಅವರ ಆದರ್ಶದ ಹಾದಿಯಲ್ಲೇ ನಡೆಯುತ್ತಿದ್ದೇವೆ. ಕರ್ನಾಟಕ ಇಡೀ ದೇಶದಲ್ಲೇ ಪ್ರಸಿದ್ಧವಾದ ದೇಶ. ಒಂದು ಸಮಯದಲ್ಲಿ ಈ ರಾಜ್ಯ, ಐಟಿ (IT), ತಂತ್ರಜ್ಞಾನ, ಶಿಕ್ಷಣ ಸೇರಿದಂತೆ ಎಲ್ಲ ವಿಭಾಗದಲ್ಲೂ ಮುಂದಿತ್ತು. ಕಳೆದ ಬಾರಿ ನೀವು ಮತಹಾಕಿ ಒಂದು ಸರ್ಕಾವರನ್ನ ತಂದ್ರಿ. ಆದ್ರೆ ಬಿಜೆಪಿ ತನ್ನ ಹಂಬಲದಿಂದ ಸರ್ಕಾರವನ್ನ ಬಿಳಿಸಿದ್ರು. ಆಪರೇಷನ್ ಕಮಲ ಮಾಡಿ ಬಿಜೆಪಿ ಸರ್ಕಾರ (BJP Government) ರಚನೆ ಮಾಡಿದ್ರು ಎಂದು ಕಿಡಿ ಕಾರಿದರು.
ಇಂದಿರಾ ಗಾಂಧಿಯನ್ನ ಇವತ್ತಿಗೂ ನೀವ್ಯಾಕೆ ನೆನೆಸುತ್ತಿರಿ ಅಂದ್ರೆ ಅವರು ಬಡವರಿಗೆ ನೀಡಿದ `ಉಳುವವನೇ ಭೂಮಿ ಒಡೆಯ’ ಅನ್ನೋ ಮಹಾನ್ ಯೋಜನೆ ಜಾರಿಗೆ ತಂದಿದ್ದರಿಂದ. ಆದ್ರೆ ರಾಜ್ಯ ಬಿಜೆಪಿ ಸರ್ಕಾರ 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಪ್ರಸಿದ್ಧಿ ಪಡೆದಿದೆ. ಇಡೀ ದೇಶದಲ್ಲೇ ಬಿಜೆಪಿ ಸರ್ಕಾರ ಕೆಟ್ಟ ಹೆಸರು ಪಡೆದುಕೊಂಡಿದೆ. ಆದರೂ ಬಿಜೆಪಿ ಸರ್ಕಾರಕ್ಕೆ ನಾಚಿಕೆಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಚುನಾವಣಾ ಪ್ರಚಾರದ ವೇಳೆ ರಸ್ತೆ ಬದಿ ಅಂಗಡಿಯಲ್ಲಿ ಟೀ ಕುಡಿದ ಕಿಚ್ಚ ಸುದೀಪ್
ಇವತ್ತು ದಿನಬಳಕೆ ವಸ್ತುಗಳು ಗಗನಕ್ಕೇರಿವೆ. ದಿನ ಬೆಳಗಾದ್ರೆ ಊಟ ಮಾಡೋಕೂ ಯೋಚನೆ ಮಾಡಬೇಕಾಗಿದೆ. ಬೆಲೆ ಏರಿಕೆ ಸಾಮಾನ್ಯ ಜನರಿಗೆ ಸಂಕಷ್ಟ ತಂದಿದೆ. ಆದ್ರೆ ನಿಮ್ಮನಾಳೋ ಸರ್ಕಾರದ ಸಚಿವರು, ಶಾಸಕರು ಬಿಂದಾಸ್ ಆಗಿದ್ದಾರೆ. ಈ ಸರ್ಕಾರ ನಿಮ್ಮ 1.50 ಲಕ್ಷ ಕೋಟಿ ಲೂಟಿ ಮಾಡಿದೆ. ಆ ಹಣದಿಂದ 100 ಏಮ್ಸ್ ಆಸ್ಪತ್ರೆಗಳನ್ನ ಕಟ್ಟಿಸಬಹುದಿತ್ತು. 30 ಲಕ್ಷ ಬಡ ಜನರಿಗೆ ಮನೆ ನಿರ್ಮಿಸಬಹುದಿತ್ತು ತಿಳಿಸಿದರು. ಇದನ್ನೂ ಓದಿ: ಹೆಣ್ಣು ಸಿಗದ ಯುವಕರಿಗೆ ಮದುವೆ ಭಾಗ್ಯ – ಹುಬ್ಬೇರಿಸಿ ನೋಡುವಂತೆ ಪ್ರಣಾಳಿಕೆ ಘೋಷಿಸಿದ ಅಭ್ಯರ್ಥಿಗಳು
ಮಹಾಭಾರತದಲ್ಲಿ ಅರ್ಜನನ ಗುರಿ ಹೇಗಿತ್ತೋ ನಿಮ್ಮ ಗುರಿ ಕೂಡಾ ಇರಬೇಕು. ಅವರಿವರು ಏನ್ ಹೇಳ್ತಾರೆ ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಬಾರದು. ನಿಮ್ಮ ಗುರಿ ನಿಮ್ಮ ಭವಿಷ್ಯದ ಕಡೆ ಇರಬೇಕು. ನಿಮ್ಮ ಗುರಿ ನಿಮ್ಮ ಮಕ್ಕಳ ಭವ್ಯ ಭವಿಷ್ಯದ ಕಡೆ ಇರಬೇಕು. ನಿಮ್ಮ ಭವಿಷ್ಯ ಯಾರು ರೂಪಿಸುತ್ತಾರೋ ಅವರಿಗೆ ಮತ ನೀಡಿ. ಬಿಜೆಪಿ ಸರ್ಕಾರ ನಿಮಗೆ ಏನ್ ಮಾಡಿದೆ, ಕಾಂಗ್ರೆಸ್ ಏನ್ ಹೇಳಿದೆ ಇದನ್ನ ನೆನಪಿಸಿಕೊಳ್ಳಿ. ಕಾಂಗ್ರೆಸ್ ಪಕ್ಷವನ್ನು ಪೂರ್ಣಬಹುದೊಂದಿಗೆ ಗೆಲ್ಲಿಸಿ ಎಂದು ಮನವಿ ಮಾಡಿದರು.