ಮೈಸೂರು: ಪ್ರಧಾನಿ ಮೋದಿಯನ್ನು ನೇರವಾಗಿ ಎದುರಿಸಲಾಗದೇ ಕಾಂಗ್ರೆಸ್ಸಿನ ಋಣ ತೀರಿಸಲು ರಾಜ್ಯದಲ್ಲಿ ಬಂದ್ ಮಾಡಿಸಿದ್ದಾರೆ ಎಂದು ಎಂದು ಸಂಸದ ಪ್ರತಾಪ ಸಿಂಹ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಭಾರತ್ ಬಂದ್ ಹಿನ್ನೆಲೆಯಲ್ಲಿ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ತಮ್ಮನ್ನು ಮುಖ್ಯಮಂತ್ರಿ ಮಾಡಿರುವ ರಾಹುಲ್ ಗಾಂಧಿಯ ಋಣ ತೀರಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಬಂದ್‍ಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಇವರಿಗೇನಾದರೂ ಯೋಗ್ಯತೆ ಇದ್ದರೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಬಾರದಿತ್ತು. ಸಾರಿಗೆ ಸಂಸ್ಥೆಗಳಿಗೆ ನಿರ್ದೇಶನ ನೀಡಬಾರದಿತ್ತು. ಅದನ್ನು ಬಿಟ್ಟು ಪ್ರಧಾನಿ ಮೋದಿಯವರನ್ನು ನೇರವಾಗಿ ಎದುರಿಸಲಾಗದೇ ಈ ರೀತಿ ಬಂದ್‍ಗೆ ಬೆಂಬಲ ಕೊಡುತ್ತಿದ್ದಾರೆ. ಮೋದಿ ಮೇಲಿನ ಭಯದ ಪುಕ್ಕಲುತನದಿಂದ ಬಂದ್ ಮಾಡಿಸುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ಈ ವೇಳೆ ವಸತಿ ಸಚಿವ ಯು ಟಿ.ಖಾದರ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಈ ಹಿಂದೆ ಬಂದ್ ಮಾಡಿದವರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು ಅಂತಾ ಖಾದರ್ ಹೇಳಿದ್ದರು. ಆದರೆ ಈಗ ಅವರು ಚಪ್ಪಲಿ ಎಲ್ಲಿ ಇಟ್ಟಿದ್ದಾರೆ? ಈಗ ಯಾರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು ಎಂದು ಪ್ರಶ್ನಿಸಿದರು.
Advertisement
ಬಂದ್‍ಗೆ ಬೆಂಬಲ ನೀಡಿದ ಮಾಜಿ ಪ್ರಧಾನಿ ದೇವೇಗೌಡರ ಹೇಳಿಕೆ ಪ್ರತಿಕ್ರಿಯಿಸಿ, ದೇವೆಗೌಡರೇ ನೀವು ದೇಶದ ಆಡಳಿತ ನಡೆಸಿದ್ದವರು, ಬಂದ್‍ಗೆ ಬೆಂಬಲ ಸೂಚಿಸುವ ಮುನ್ನ ಸ್ವಲ್ಪ ಯೋಚಿಸಬೇಕಿತ್ತು. ಮೊದಲು ನಿಮ್ಮ ಮಗ ಮುಖ್ಯಮಂತ್ರಿಗೆ ಪೆಟ್ರೋಲ್ ದರವನ್ನು ಹೇಗೆ ಕಡಿಮೆ ಮಾಡೋದು ಎನ್ನುವುದನ್ನು ಹೇಳಿ ಕೊಡಿ, ನಂತರ ಬಂದ್‍ಗೆ ಬೆಂಬಲ ನೀಡಿ ಎಂದು ಹೇಳಿದರು.
Advertisement
ಮೂರು ತೆರಿಗೆ ಲೂಟಿ ಮಾಡ್ತಿರೋದು ರಾಜ್ಯ ಸರ್ಕಾರಗಳು, ಪೆಟ್ರೋಲ್, ಮದ್ಯ ಹಾಗೂ ರಿಯಲ್ ಎಸ್ಟೇಟ್ ಮೂರರ ಮೇಲೆ ಅತಿ ಹೆಚ್ಚು ತೆರೆಗೆ ಹಾಕುತ್ತಿದ್ದಾರೆ. ಈ ಮೂರರ ಮೇಲೆ ತೆರಿಗೆ ಹಾಕಿ ಲೂಟಿ ಮಾಡಲಾಗುತ್ತದೆ ಎಂದು ಪ್ರತಾಪ್ ಸಿಂಹ ಗಂಭೀರ ಆರೋಪ ಮಾಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv