ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಒಂದೊಂದು ರಾಜ್ಯಕ್ಕೂ ಹೋದಾಗ ಆ ರಾಜ್ಯದ ಬಗ್ಗೆ ತಿಳಿದುಕೊಂಡಿರುತ್ತಾರೆ. ಎರಡು ತಿಂಗಳಿಂದ ರಾಜ್ಯದ ಬಗ್ಗೆ ಮೋದಿ ತಿಳಿದಿದ್ದಾರೆ. ಕರ್ನಾಟಕದ ಬಗ್ಗೆ ತಿಳಿದುಕೊಂಡೇ ಅವರು ಮಾತಾಡಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿದ್ದಾರೆ.
ನನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡುತ್ತಿದ್ದ ವೇಳೆ ಉಡುಪಿಯಲ್ಲಿ ಮೋದಿ ಹೊಗಳಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾನು ಕನ್ನಡಿಗ, ರೈತರ ಮಗ ಅನ್ನೋದನ್ನ ಅವರು ತಿಳಿದುಕೊಂಡಿದ್ದಾರೆ. ಆದ್ರೆ ಕಾಂಗ್ರೆಸ್ ಅವರು ನನ್ನ ಬಗ್ಗೆ ಮಾತಾಡಿದ್ದಾರೆ. ರಾಹುಲ್ ಗಾಂಧಿ ಬೆಳೆಯುತ್ತಿರುವವರು. ಈಗಷ್ಟೇ ಪಕ್ಷದ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದಾರೆ. ಈ ಬಗ್ಗೆ ನಾನು ಮಾತನಾಡುವುದಿಲ್ಲ. ಆದ್ರೆ ಸಿಎಂ ಸಿದ್ದರಾಮಯ್ಯ ಸಿಎಂ ಆದಾಗ ನನ್ನ ಫೋಟೋವನ್ನ ವಿಧಾನಸೌಧದಿಂದ ತೆಗೆದು ಹಾಕಿದ್ರು. ಇದು ಒಬ್ಬ ಮಾಜಿ ಪ್ರಧಾನಿಗೆ ಕೊಡೋ ಗೌರವನಾ ಎಂದು ಗರಂ ಆಗಿ ಪ್ರಶ್ನಿಸಿದರು. ಇದನ್ನೂ ಓದಿ: ಕೃಷ್ಣನೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರಿಗೆ `ನಮೋ’- ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಸುಳಿವು ಕೊಟ್ರಾ ಪ್ರಧಾನಿ?
Advertisement
Advertisement
ಮೋದಿಯವರು ಸರಿಯಾಗಿ ಮಾತಾಡಿದ್ದಾರೆ. ಸಿಎಂ ವರ್ತನೆ ಬಗ್ಗೆ ಮೋದಿ ತಿಳಿದುಕೊಂಡಿದ್ದಾರೆ. ಹೀಗಾಗಿ ನಿನ್ನೆ ಅವರು ಮಾತಾಡಿದ್ದಾರೆ ಅಷ್ಟೇ ಮೋದಿ ಬದಲಾಗಿಲ್ಲ. ನಾನೂ ಬದಲಾಗಿಲ್ಲ. ಕನ್ನಡಿಗ ಪ್ರಧಾನಿ ಆದ್ರೆ ಗೌರವ ಕೊಡುವ ಸಂಸ್ಕೃತಿ ಕಾಂಗ್ರೆಸ್ ಗೆ ಇಲ್ಲ. ಆದ್ರೆ ಮೋದಿ ಗೌರವ ನೀಡಿದ್ದಾರೆ. ಇದರಲ್ಲಿ ಯಾವ ಬೇರೆ ಉದ್ದೇಶ ಇಲ್ಲ, ವಿಶೇಷ ಇಲ್ಲ ಅಂತ ಅವರು ಹೇಳಿದ್ರು. ಇದನ್ನೂ ಓದಿ: ವೃದ್ಧಾಶ್ರಮಕ್ಕೆ ಕಳಿಸೋ ಮಾತಾಡಿದ್ದ ಮೋದಿಗೆ ಎಚ್‍ಡಿಡಿ ಮೇಲೇಕೆ ಸಡನ್ ಲವ್- ಸಿಎಂ ಪ್ರಶ್ನೆ
Advertisement
ಈ ಚುನಾವಣೆ ಕರ್ನಾಟಕದಲ್ಲಿ ಎರಡು ರಾಷ್ಟ್ರಯ ಪಕ್ಷ, ಒಂದು ಪ್ರಾದೇಶಿಕ ಪಕ್ಷದ ನಡುವೆ ನಡೆಯುತ್ತಿದೆ. ಹಿಂದಿನ ಅನೇಕರು ಪ್ರಾದೇಶಿಕ ಪಕ್ಷ ಉಳಿಸಲು ಕಷ್ಟ ಪಟ್ರು. ಆದ್ರೆ ಅದು ಆಗಲಿಲ್ಲ. ಆದ್ರೆ ನಾನೂ ಕಷ್ಟ ಪಟ್ಟು ಪ್ರಾದೇಶಿಕ ಪಕ್ಷ ಉಳಿಸಿದ್ದೇನೆ ಅಂತ ಹೇಳಿದ್ರು.
Advertisement