ಕಾಂಗ್ರೆಸ್ 10 ಪರ್ಸೆಂಟ್ ಕೆಲಸ ಮಾಡಿದ್ರೆ ವೋಟ್ ಕೇಳೋ ಅವಶ್ಯತೆ ಇರ್ತಿರಲಿಲ್ಲ : ಶಾ ಗುಡುಗು

Public TV
2 Min Read
Amit Shah 2 2

– 2024ಕ್ಕೆ ಮತ್ತೆ ಮೋದಿ ಸರ್ಕಾರ ಅಧಿಕಾರಕ್ಕೆ ತನ್ನಿ ಎಂದ ಕೇಂದ್ರ ಸಚಿವ

ಬಾಗಲಕೋಟೆ: ಬಿಜೆಪಿ ಸರ್ಕಾರ (BJP Government) ಮಾಡಿದ ಕೆಲಸಗಳಲ್ಲಿ ಕಾಂಗ್ರೆಸ್ (Congress) ಕೇವಲ 10 ಪರ್ಸೆಂಟ್ ಮಾಡಿದ್ದರೆ, ವೋಟ್ ಕೇಳುವ ಅವಶ್ಯಕತೆ ಇರುತ್ತಿರಲಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಗುಡುಗಿದ್ದಾರೆ.

Amit Shah Programme 1

ಬಾಗಲಕೋಟೆ (Bagalkot) ಜಿಲ್ಲೆಯ ಎಂ.ವಿ ಪಟ್ಟಣದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಕಳೆದ 4 ವರ್ಷಗಳಲ್ಲಿ ಅನೇಕ ಕೆಲಸಗಳನ್ನ ಮಾಡಿದೆ. ನೇಕಾರರಿಗೆ 2 ರಿಂದ 5 ಲಕ್ಷವರೆಗೆ ಶೇ.3 ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸಿದೆ, 4 ಲಕ್ಷ ಕುಟುಂಬಗಳಿಗೆ ಮನೆ ನೀಡಿದೆ, 46 ಲಕ್ಷ ರೈತರಿಗೆ (Farmers) ಕಿಸಾನ್ ಸಮ್ಮಾನ್ ಪರಿಹಾರ ನೀಡಿದೆ. ನಾವು ಮಾಡಿದ ಕೆಲಸಗಳಲ್ಲಿ ಕಾಂಗ್ರೆಸ್ 10 ಪರ್ಸೆಂಟ್ ಮಾಡಿದ್ದರೂ ವೋಟ್ ಕೇಳಲು ಬರುವ ಅವಶ್ಯಕತೆ ಇರುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಸಿದ್ದರಾಮಯ್ಯ (Siddaramaiah), ಡಿ.ಕೆ ಶಿವಕುಮಾರ್ (DK Shivakumar) ಮುಖ್ಯಮಂತ್ರಿಯಾಗಲು ಗುದ್ದಾಡುತ್ತಿದ್ದಾರೆ. ಆದ್ರೆ ಮುಖ್ಯಮಂತ್ರಿ ಆಗಲು ನಿಮ್ಮ ನಂಬರೇ ಬಂದಿಲ್ಲ, ಯಾಕೆ ಕಿತ್ತಾಡ್ತೀರಾ? ಎಂದು ಶಾ ಕುಟುಕಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಮೀಸಲಾತಿ ರದ್ದು ಆದೇಶಕ್ಕೆ ತಡೆ – ಮೇ 9 ರವರೆಗೆ ಜಾರಿ ಬೇಡವೆಂದು ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ನಿರ್ದೇಶನ

Amit Shah 6

ಕಾಂಗ್ರೆಸ್ ಸರ್ಕಾರ ಬಂದ್ರೆ, ರಿವರ್ಸ್ ಗೇರ್ ಸರ್ಕಾರ ಆಗುತ್ತೆ. ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ್ರೆ, ಪೂರ್ಣ ಭ್ರಷ್ಟಾಚಾರ ನಡೆಯುತ್ತೆ. ಹಾಗಾಗಿ ಈ ಬಾರಿಯ ಡಬಲ್ ಇಂಜಿನ್ ಸರ್ಕಾರಕ್ಕೆ ಮತ ನೀಡಿ, 2024 ರಲ್ಲಿ ಮತ್ತೆ ಮೋದಿ ನೇತೃತ್ವದ ಸರ್ಕಾರ ತನ್ನಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಪ್ರಜಾಪ್ರಭುತ್ವದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ – ಬಿಜೆಪಿ ವಿರುದ್ಧ ಖರ್ಗೆ ವಾಗ್ದಾಳಿ

ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣದ ಹಿಂದೆ ಬಿದ್ದಿದೆ. ನಾವು ಎಸ್ಸಿ, ಲಿಂಗಾಯತ ಹಾಗೂ ಒಕ್ಕಲಿಗರಿಗೆ ಮೀಸಲಾತಿ (Reservation) ಕಲ್ಪಿಸಿದ್ದೇವೆ. ಕಾಂಗ್ರೆಸ್‌ನವರು ಅಧಿಕಾರಕ್ಕೆ ಬಂದ್ರೆ ಮೀಸಲಾತಿ ರದ್ದು ಮಾಡ್ತೀವಿ ಅಂತಾರೆ. ಹೆಚ್ಚಿಸಿರುವ 4 ಪರ್ಸೆಂಟ್‌ನಲ್ಲಿ ಲಿಂಗಾಯತರ ಮೀಸಲಾತಿ ಕಡಿಮೆ ಮಾಡ್ತೀರಾ, ಒಕ್ಕಲಿಗರ ಮೀಸಲಾತಿ ಕಡಿಮೆ ಮಾಡ್ತಿರಾ? ಹೇಳಿ ಎಂದು ಪ್ರಶ್ನಿಸಿದ್ದಾರೆ.

Amit Shah 1 5

ಮೋದಿಯವರು ಪಿಎಫ್‌ಐ ಬ್ಯಾನ್ ಮಾಡಿದರು, ಕಾಶ್ಮೀರವನ್ನ ಭಾರತದ ಸ್ವತ್ತಾಗಿ ಮಾಡಿದರು. ಆಗ ಕಾಶ್ಮೀರದಲ್ಲಿ ರಕ್ತದ ಹೊಳೆ ಹರಿಯುತ್ತೆ ಎಂದು ಕಾಂಗ್ರೆಸ್, ಮಮತಾ ಬ್ಯಾನರ್ಜಿ ಸೇರಿದಂತೆ ಕೆಲ ಎಡ ಪಂಥೀಯ ನಾಯಕರು ಕಾವ್ ಕಾವ್ ಅಂತಾ ಕೂಗಾಡಿದರು ಎಂದು ಕುಟುಕಿದರು.

Share This Article