ಬೆಂಗಳೂರು: ವಿಧಾನಸಭೆ ಅಧಿವೇಶನದಲ್ಲಿ ಇವತ್ತು ಕಾಂಗ್ರೆಸ್ ಧರಣಿ ಮುಂದುವರಿಸಿದ್ದು, ಅಹೋರಾತ್ರಿ ಧರಣಿಯನ್ನು ಕೈಗೊಂಡಿದ್ದಾರೆ. ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಸದಸ್ಯರು ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿದ ಹಿನ್ನೆಲೆ ಕಲಾಪವನ್ನ ನಾಳೆಗೆ ಮುಂದೂಡಲಾಯಿತು. ಆದರೂ ಕಾಂಗ್ರೆಸ್ ಶಾಸಕರು ಅಹೋರಾತ್ರಿ ಧರಣಿ ನಡೆಸಲು ತೀರ್ಮಾನಿಸಿ ವಿಧಾನಸಭೆಯಲ್ಲೇ ಬಿಡುಬಿಟ್ಟಿದ್ದಾರೆ.
Advertisement
ಇಂದು ಬೆಳಗ್ಗೆ ಕಲಾಪ ಆರಂಭವಾದಾಗ ಮಾಜಿ ಸದಸ್ಯ ಮಳ್ಳೂರು ಆನಂದ್ ರಾವ್ ನಿಧನಕ್ಕೆ ಸಂತಾಪ ಸೂಚಿಸಲಾಯ್ತು. ಬಳಿಕ ಪ್ರಶ್ನೋತ್ತರ ಕಲಾಪ ಪ್ರಾರಂಭವಾಗುತ್ತಿದಂತೆಯೇ ಕಾಂಗ್ರೆಸ್ ಸದಸ್ಯರು ಬಾವಿಗಿಳಿದು ಆಕ್ರೋಶ ವ್ಯಕ್ತಪಡಿಸಿದ್ರು. ಈಶ್ವರಪ್ಪ ಅವರು ರಾಜೀನಾಮೆ ನೀಡಬೇಕು ಎಂದು ಘೋಷಣೆ ಕೂಗಿದರು. ಇದನ್ನೂ ಓದಿ: ಮಲೆಮಹದೇಶ್ವರ ಜಾತ್ರಾಮಹೋತ್ಸವ – ಪೂರ್ವಸಿದ್ಧತೆಗಳ ಕುರಿತಂತೆ ಸಭೆ ನಡೆಸಿದ ಸೋಮಣ್ಣ
Advertisement
Advertisement
ಪ್ರತಿಭಟನೆ ನಡುವೆಯೂ ಈಶ್ವರಪ್ಪ ಅವರು ಏನೂ ಮಾತನಾಡದೆ ಸುಮ್ಮನೆ ಕುಳಿತಿದ್ದರು. ಇದೇ ವೇಳೆ ಗಲಾಟೆಯನ್ನು ನಿಲ್ಲಿಸಿ ಎಂದು ಸ್ಪೀಕರ್ ಮನವಿ ಮಾಡಿದ್ರೂ, ಕಾಂಗ್ರೆಸ್ ಸದಸ್ಯರು ಪ್ರತಿಭಟನೆಯನ್ನು ಮುಂದುವರೆಸಿದರು. ಆಗ ಸ್ಪೀಕರ್ ಕಲಾಪವನ್ನು ಮಧ್ಯಾಹ್ನ ಮೂರು ಗಂಟೆಗೆ ಮುಂದೂಡಿದರು.
Advertisement
ಭೋಜನದ ನಂತರ ಮಧ್ಯಾಹ್ನ ಕಲಾಪ ಆರಂಭವಾದಗಲೂ ಕಾಂಗ್ರೆಸ್ ಪ್ರತಿಭಟನೆ ಮುಂದುವರಿಯಿತು. ಆಗ ಮತ್ತೆ ಕಲಾಪವನ್ನು ನಾಳೆ ಬೆಳಗ್ಗೆ 11ಕ್ಕೆ ಮುಂದೂಡಲಾಯಿತು. ಆದ್ರೆ ಕಾಂಗ್ರೆಸ್ ಸದಸ್ಯರು ಮಾತ್ರ ಪ್ರತಿಭಟನೆ ಕೈ ಬಿಡದೇ ಅಹೋರಾತ್ರಿ ಧರಣಿಯನ್ನು ಮುಂದುವರಿಸಿದ್ದಾರೆ. ಇದನ್ನೂ ಓದಿ: ಮದುವೆಗೂ ಮುನ್ನ ಬಿಂದಾಸ್ ಆಗಿ ಡ್ಯಾನ್ಸ್ ಮಾಡಿದ ವಧು – ವೀಡಿಯೋ ವೈರಲ್
ಕೈ ಶಾಸಕರ ಅಹೋರಾತ್ರಿ ಧರಣಿಗೆ ಊಟದ ವ್ಯವಸ್ಥೆ ಹಾಗೂ ರಾತ್ರಿ ಮಲಗಲು ಹಾಸಿಗೆ ವ್ಯವಸ್ಥೆ ಮಾಡಲು ಸ್ಪೀಕರ್ ಸೂಚನೆ ಕೊಟ್ಟಿದ್ದಾರೆ.