– ಈ ಬಾರಿ ಅತಿ ಕಡಿಮೆ ಕ್ಷೇತ್ರದಲ್ಲಿ ಸ್ಪರ್ಧೆ
– 2019 ರಲ್ಲಿ 52 ಸ್ಥಾನ ಗೆದ್ದಿದ್ದ ಕಾಂಗ್ರೆಸ್
ಸತತ ಎರಡು ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದರಿಂದ ಕಾಂಗ್ರೆಸ್ (Congress) ಹಿನ್ನಡೆ 2014ರಿಂದ ಆರಂಭವಾಯಿತು ಎಂದು ನೀವು ಎಣಿಸಿಕೊಂಡಿದ್ದರೆ ನಿಮ್ಮ ಊಹೆ ತಪ್ಪಾದಿತು. ಕಾಂಗ್ರೆಸ್‌ಗೆ 1996 ರಿಂದ ಹಿನ್ನಡೆ ಆರಂಭವಾಗಿತ್ತು.
ಹೌದು. ಕಾಂಗ್ರೆಸ್ 1991-92ರ ಚುನಾವಣೆಯಲ್ಲಿ 500 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 244 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಚುನಾವಣೆಯ ನಂತರ ನಡೆದ ಯಾವುದೇ ಚುನಾವಣೆಯಲ್ಲಿ ಕಾಂಗ್ರೆಸ್ 240ರ ಗಡಿಯನ್ನು ದಾಟಿಲ್ಲ.
Advertisement
Advertisement
1991ರಲ್ಲಿ ಬಾಬ್ರಿ ಮಸೀದಿ ಧ್ವಂಸವಾದ (Babri Mosque Demolition) ನಂತರ ದೇಶದ ರಾಜಕೀಯ ಇತಿಹಾಸವೇ ಬದಲಾಗತೊಡಗಿತು. ಎಲ್‌ಕೆ ಅಡ್ವಾಣಿ (LK Adavani) ಅವರು ರಥಯಾತ್ರೆ ನಡೆಸಿ ಬಿಜೆಪಿಯನ್ನು ಬಲ ಪಡಿಸಿದರು. ಪಿವಿ ನರಸಿಂಹ ರಾವ್ (PV Narasimha Rao) ಸರ್ಕಾರದಲ್ಲಿ ಬಹಳಷ್ಟು ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದ ಕಾರಣ 1996ರ ಚುನಾವಣೆಯಲ್ಲಿ ಕಾಂಗ್ರೆಸ್ 529 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 140 ಸ್ಥಾನಗಳನ್ನು ಗೆದ್ದುಕೊಂಡಿತು. ಬಿಜೆಪಿ ಬರೋಬ್ಬರಿ 161 ಸ್ಥಾನಗಳನ್ನು ಗೆದ್ದುಕೊಂಡಿತು.
Advertisement
ಈ ಚುನಾವಣೆಯ ನಂತರ ದೇಶದ ಹಲವು ಭಾಗಗಳಲ್ಲಿ ಪ್ರಾದೇಶಿಕ ಪಕ್ಷಗಳು (Regional Parties) ಬಲಿಷ್ಠವಾಗತೊಡಗಿ ಕಾಂಗ್ರೆಸ್ ಮತವನ್ನು ತನ್ನ ಬುಟ್ಟಿಗೆ ಹಾಕಿದವು. ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳು ನಾವು ಬಡವರ ಕಲ್ಯಾಣ ಮಾಡುತ್ತೇವೆ ಎಂದು ಭರವಸೆ ನೀಡುತ್ತಿದ್ದರಿಂದ ಬಡವರು ಈ ಪಕ್ಷಗಳ ಕೈಯನ್ನು ಬಲಪಡಿಸಿದರು. ಪರಿಣಾಮ ಕಾಂಗ್ರೆಸ್ ಮತಗಳು ಚದುರಿ ಹೋದವು. ಇದನ್ನೂ ಓದಿ: ಕಾಂಗ್ರೆಸ್ Vs ಬಿಜೆಪಿ – ಗ್ರಾಮೀಣ, ನಗರದ ಜನತೆ ಈ ಬಾರಿ ಯಾರ ಪರ? 2019 ರಲ್ಲಿ ಏನಾಗಿತ್ತು?
Advertisement
2009ರ ಚುನಾವಣೆಯಲ್ಲಿ ಕಾಂಗ್ರೆಸ್ 440 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 206 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಚುನಾವಣೆಯ ನಂತರ ಕಾಂಗ್ರೆಸ್ ಪಕ್ಷ ಹಲವು ರಾಜ್ಯಗಳಲ್ಲಿ ತನ್ನ ನೆಲೆಯನ್ನು ಕಳೆದುಕೊಂಡಿತ್ತು. ವಿಶೇಷವಾಗಿ ಹಿಂದಿ ಭಾಷೀಕರು ಹೆಚ್ಚಿರುವ ರಾಜ್ಯಗಳಲ್ಲಿ ಹಲವು ಕಾಂಗ್ರೆಸ್ ನಾಯಕರು ಕಮಲದ ಕೈ ಹಿಡಿದ ಪರಿಣಾಮ ದೇಶದೆಲ್ಲೆಡೆ ಬಿಜೆಪಿ ಬಲ ಹೆಚ್ಚಾಯಿತು. ಇದರೊಂದಿಗೆ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಪ್ರಾದೇಶಿಕ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡಿತು. ಈ ಕಾರಣದಿಂದಾಗಿ ಕಾಂಗ್ರೆಸ್ ಆ ರಾಜ್ಯಗಳಲ್ಲೂ ದುರ್ಬಲವಾಯಿತು.
ಯಾವ ವರ್ಷ ಎಷ್ಟು ಸ್ಥಾನ ಗೆದ್ದಿದೆ?
1996- 140
1998 – 141
1999 – 114
2004 – 145
2009 – 206
2014 – 45
2019 – 52
ಮೋದಿ ಅವಧಿಯಲ್ಲಿ ಕಳಪೆ ಸಾಧನೆ:
ಯುಪಿಎ (UPA) ಎರಡನೇ ಅವಧಿಯಲ್ಲಿ ವಿಪರೀತ ಭ್ರಷ್ಟಾಚಾರದ ಆರೋಪಗಳು ಸರ್ಕಾರದ ಮೇಲೆ ಬಂದಿತ್ತು. ಇದರ ಪರಿಣಾಮ 2014ರಲ್ಲಿ ಕಾಂಗ್ರೆಸ್ ಸಾಧನೆ ಕಳಪೆಯಾಗಿತ್ತು. 464 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 44 ಸ್ಥಾನ ಮಾತ್ರ ಗೆದ್ದಿತ್ತು. 2019 ರ ಚುನಾವಣೆಯಲ್ಲಿ ಕಾಂಗ್ರೆಸ್ 421 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 52 ಸ್ಥಾನ ಗೆದ್ದುಕೊಂಡಿತ್ತು. ಇದನ್ನೂ ಓದಿ: ಬಿಜೆಪಿಗೆ ವೋಟ್ ಹಾಕಿ.. ದೀದಿ ಗೂಂಡಾಗಳನ್ನು ತಲೆಕೆಳಗಾಗಿ ನೇತು ಹಾಕ್ತೀವಿ: ಅಮಿತ್ ಶಾ
ಈ ಬಾರಿ ಅತಿ ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧೆ:
ಮೋದಿ (PM NarendraModi) ಹ್ಯಾಟ್ರಿಕ್ ಜಯವನ್ನು ತಡೆಯಲು ಕಾಂಗ್ರೆಸ್ ಈ ಬಾರಿ INDIA ಒಕ್ಕೂಟದ ಪಕ್ಷಗಳಿಗೆ ಹೆಚ್ಚಿನ ಸ್ಥಾನವನ್ನು ಬಿಟ್ಟುಕೊಟ್ಟಿದೆ. ಒಟ್ಟು 543 ಕ್ಷೇತ್ರಗಳ ಪೈಕಿ 330 ಕಡೆ ಮಾತ್ರ ಅಭ್ಯರ್ಥಿಯನ್ನು ಹಾಕಿದೆ. 1951 ರಿಂದ ನಡೆದ ಚುನಾವಣೆಯಲ್ಲಿ 2004ರ ಚುನಾವಣೆಯಲ್ಲಿ 417 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಿತ್ತು. ಇಲ್ಲಿಯವರೆಗೆ 400ಕ್ಕಿಂತ ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧಿಸಿರಲಿಲ್ಲ. ಆದರೆ ಈ ಬಾರಿ ಕೇವಲ 330 ಕಡೆ ಮಾತ್ರ ಅಭ್ಯರ್ಥಿಯನ್ನು ಹಾಕಿದೆ.
ಯಾವ ರಾಜ್ಯದಲ್ಲಿ ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧೆ?
ಕರ್ನಾಟಕ, ತೆಲಂಗಾಣ, ಪಂಜಾಬ್, ಜಾರ್ಖಂಡ್, ಒಡಿಶಾ, ಛತ್ತೀಸ್‌ಗಢದ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದರೆ ದೊಡ್ಡ ರಾಜ್ಯಗಳಾದ ಉತ್ತರ ಪ್ರದೇಶ, ಬಿಹಾರ, ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳದಲ್ಲಿ ಮೈತ್ರಿ ಮಾಡಿಕೊಂಡು ಕಣಕ್ಕೆ ಇಳಿದಿದೆ.