ಕೋಲ್ಕತ್ತಾ: ಜಾರ್ಖಂಡ್‍ನ ಮೂವರು ಕಾಂಗ್ರೆಸ್ ಶಾಸಕರ ವಾಹನದಲ್ಲಿ ಅಪಾರ ನಗದು ಪತ್ತೆಯಾದ ಘಟನೆ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ನಡೆದಿದೆ.
ಪೊಲೀಸರು ಶಾಸಕ ಕಾರಿನಲ್ಲಿ ಹಣವಿದೆ ಎಂವ ಸುಳುವಿನ ಆಧಾರದ ಮೇಲೆಗೆ ಶಾಸಕರಾದ ಇರ್ಫಾನ್ ಅನ್ಸಾರಿ, ರಾಜೇಶ್ ಕಚ್ಚಪ್, ನಮನ್ ಬಿಕ್ಸಲ್ ಕೊಂಗಾರಿ ಅವರು ಹೋಗುತ್ತಿದ್ದ ಕಾರನ್ನು ಪಂಚಲಾ ಪೊಲೀಸರು ರಾನಿಹಟಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡೆಹಿಡಿದಿದ್ದಾರೆ. ಈ ವೇಳೆ 48 ಲಕ್ಷ ರೂ. ನಗದು ಪತ್ತೆ ಆಗಿದೆ.
Advertisement
It won’t be reasonable to talk about it till probe is done, but looking at country’s situation… nabbed MLAs can better explain the matter. However, incident is saddening. We’ll submit a report to our high command; no one involved to be spared: Jharkhand Cong chief Rajesh Thakur pic.twitter.com/ileNCWBFV2
— ANI (@ANI) July 30, 2022
ಈ ಬಗ್ಗೆ ಮಾಹಿತಿ ನೀಡಿರುವ ಅಲ್ಲಿನ ಪೊಲೀಸ್ ಅಧಿಕಾರಿಗಳು, ಎಣಿಕೆ ಯಂತ್ರಗಳನ್ನು ತಂದು ನೋಟುಗಳನ್ನು ಎಣಿಸಲಾಗುವುದು. ಹಣದ ಮೂಲದ ಬಗ್ಗೆ ಶಾಸಕರನ್ನು ತನಿಖೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಪ್ರಕರಣದಲ್ಲಿ ಸಿಲುಕಿರುವ ಇರ್ಫಾನ್ ಅನ್ಸಾರಿ ಜಮ್ತಾರಾ ಶಾಸಕರಾಗಿದ್ದು, ರಾಜೇಶ್ ಕಚ್ಚಪ್ ರಾಂಚಿ ಜಿಲ್ಲೆಯ ಖಿಜ್ರಿಯ ಶಾಸಕರಾಗಿದ್ದಾರೆ ಹಾಗೂ ಬಿಕ್ಸಲ್ ಕೊಂಗಾರಿ ಸಿಮ್ಡೆಗಾ ಜಿಲ್ಲೆಯ ಕೊಲೆಬಿರಾ ಶಾಸಕರಾಗಿದ್ದಾರೆ. ಇದನ್ನೂ ಓದಿ: ನಾನು ಸಂದರ್ಶನ ಕೊಡಲು ಶುರು ಮಾಡಿದ್ರೆ ಭೂಕಂಪವಾಗುತ್ತೆ: ಉದ್ಧವ್‍ಗೆ ಶಿಂಧೆ ಟಾಂಗ್
Advertisement
Advertisement
ಈ ಮೂವರು ಶಾಸಕರ ಬಂಧನಕ್ಕೆ ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿಕಾರಿದ್ದು, ಬಿಜೆಪಿ ತಮ್ಮ ಶಾಸಕರನ್ನು ಸೇಳುವ ಮೂಲಕ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆ. ಈ ಮೂಲಕ ಆಪರೇಷನ್ ಕಮಲಕ್ಕೆ ಹೊಂಚು ಹಾಕುತ್ತಿದೆ ಎಂದು ಆರೋಪಿಸಿದೆ. ಇದನ್ನೂ ಓದಿ: ಮಳೆ ನಡುವೆ ಹುಚ್ಚಾಟ – ಹಳ್ಳ ದಾಟಲು ಜೆಸಿಬಿ ಬಳಸಿದ ಗ್ರಾಮಸ್ಥರು