-ಬಿಜೆಪಿ, ಜೆಡಿಎಸ್ ಒಗ್ಗಟ್ಟಿನ ಮಂತ್ರ ಜಪಿಸಬೇಕು
-ಉಪಚುನಾವಣೆ ಹಿನ್ನೆಲೆಯಲ್ಲಿ ಡಿಸಿಎಂ ಧ್ವಜಾರೋಹಣ
ರಾಮನಗರ: ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರುವ ಮೂಲಕ ಮುಡಾ ಹಗರಣ ಮುಚ್ಚಿ ಹಾಕಲು ಕಾಂಗ್ರೆಸ್ ಷಡ್ಯಂತ್ರ ಮಾಡುತ್ತಿದೆ ಎಂದು ನಿಖಿಲ್ ಕುಮಾರಸ್ವಾಮಿ (Nikhil Kumaraswamy) ವಾಗ್ದಾಳಿ ನಡೆಸಿದ್ದಾರೆ.
Advertisement
ಕಾಂಗ್ರೆಸ್ (Congress) ರಾಜಭವನ ಚಲೋ ವಿಚಾರವಾಗಿ ಮಾತನಾಡಿ, ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ (Prosecution) ಅನುಮತಿ ಕೋರಿ ಕಾಂಗ್ರೆಸ್ ಮುಡಾ (MUDA) ಹಗರಣವನ್ನು ಮುಚ್ಚಿ ಹಾಕುವ ತಂತ್ರ ಮಾಡುತ್ತಿದ್ದಾರೆ. ಅದಕ್ಕಾಗಿಯೇ ಆ.31 ರಂದು ಕಾಂಗ್ರೆಸ್‌ನಿಂದ ರಾಜಭವನ ಚಲೋ ಹಮ್ಮಿಕೊಂಡಿದ್ದಾರೆ. ಇವರ ಹೋರಾಟದಲ್ಲಿ ಯಾವುದೇ ಹುರುಳಿಲ್ಲ. ಕುಮಾರಸ್ವಾಮಿ ಅವರು ವೆಂಕಟೇಶ್ವರ ಮೈನಿಂಗ್ ವಿಚಾರವಾಗಿ ಆರೋಪ ಮಾಡ್ತಿದ್ದಾರೆ. ಆದರೆ ಈ ವಿಚಾರ ಸುಪ್ರೀಂಕೋರ್ಟ್‌ನಲ್ಲಿದೆ. ಎಸ್‌ಐಟಿ (SIT), ಲೋಕಾಯುಕ್ತಗೆ ವರದಿ ಕೊಡುವಂತೆ ಕೋರ್ಟ್ ಸೂಚಿಸಿದ್ದರೂ ವರದಿ ಕೊಟ್ಟಿಲ್ಲ. ಈಗ ಹೆಚ್‌ಡಿಕೆ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳೋದು ಅನಗತ್ಯ ಎಂದು ಹೇಳಿದರು.ಇದನ್ನೂ ಓದಿ: MUDA Scam; ಸಿಎಂ ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್ – ಆ.31 ಕ್ಕೆ ವಿಚಾರಣೆ ಮುಂದೂಡಿಕೆ
Advertisement
Advertisement
ಜಿಲ್ಲೆಯ ಚನ್ನಪಟ್ಟಣ (Channapatna)ತಾಲೂಕಿನ ಕೋಡಂಬಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಐದು ವರ್ಷ ಕುಮಾರಸ್ವಾಮಿ ಅವರ ನಾಯಕತ್ವಕ್ಕೆ ಕ್ಷೇತ್ರದ ಜನ ಬೆಂಬಲ ಕೊಟ್ಟಿದ್ದಾರೆ. ಈಗ ಕೇಂದ್ರ ಸಚಿವರಾಗಿ ಕೆಲಸ ಮಾಡ್ತಿದ್ದಾರೆ. ಉಪಚುನಾವಣೆ ಎದುರಾಗಿರುವ ಹಿನ್ನೆಲೆ ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುತ್ತಿದ್ದೇವೆ. ಕ್ಷೇತ್ರವನ್ನು ಜೆಡಿಎಸ್‌ಗೆ ಉಳಿಸಿಕೊಳ್ಳುವಂತೆ ಅವರು ಒತ್ತಾಯಿಸುತ್ತಿದ್ದಾರೆ ಎಂದರು.
Advertisement
ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಕಣಕ್ಕಿಳಿಯುತ್ತಾರೆ. ಜೆಡಿಎಸ್ ಕೂಡಾ ಎನ್‌ಡಿಎ ಕೂಟದ ಒಂದು ಭಾಗ. ಹಾಗಾಗಿ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲ್ಲಬೇಕು. ಅದಕ್ಕಾಗಿ ಪಕ್ಷದ ಕಾರ್ಯಕರ್ತರು ಸಜ್ಜಾಗಬೇಕು. ಸಿಪಿವೈ ಪರ ಬಿಜೆಪಿ (BJP) ನಾಯಕರು ಕಣಕ್ಕಿಳಿಯಲಿದ್ದಾರೆ. ಬಿಜೆಪಿಯ ಕೆಲ ರಾಜ್ಯನಾಯಕರು ಅವರವರ ಅಭಿಪ್ರಾಯ ತಿಳಿಸಿದ್ದಾರೆ. ಅದನ್ನ ನಾವು ವಿರೋಧ ಮಾಡಲ್ಲ, ಸ್ವಾಗತ ಮಾಡುತ್ತೇವೆ. ಆದರೆ ಅಂತಿಮವಾಗಿ ಬಿಜೆಪಿ ವರಿಷ್ಠರು ಹಾಗೂ ಕುಮಾರಸ್ವಾಮಿ ಅವರು ತೀರ್ಮಾನ ಮಾಡುತ್ತಾರೆ. ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ. ಯಾರೇ ಅಭ್ಯರ್ಥಿ ಆದರೂ ಎರಡೂ ಪಕ್ಷಗಳು ಬೆಂಬಲ ಕೊಡಬೇಕು. ಬಿಜೆಪಿ-ಜೆಡಿಎಸ್ ಒಗ್ಗಟ್ಟಿನ ಮಂತ್ರ ಜಪಿಸಬೇಕು ಎಂದು ಹೇಳಿದರು.ಇದನ್ನೂ ಓದಿ: ಬ್ಯಾಕ್‌ಲೆಸ್ ಬ್ಲೌಸ್ ಜೊತೆ ಸೀರೆಯುಟ್ಟು ಮಿಂಚಿದ ‘ಉಪಾಧ್ಯಕ್ಷ’ ನಟಿ
ಬೆಂಗಳೂರು ಗ್ರಾಮಾಂತರದಲ್ಲಿ ಅವರ ಸಹೋದರ ಮೂರು ಬಾರಿ ಸಂಸದರಾಗಿದ್ದರು. ಆಗ ಆ ಕ್ಷೇತ್ರವನ್ನೇ ಕಳೆದುಕೊಂಡಿದ್ದರು. ಈ ಕ್ಷೇತ್ರವನ್ನು ಡಿಕೆಶಿ ಅವರು ಕಬ್ಜ ಮಾಡುವ ಪ್ಲ್ಯಾನ್‌ನಲ್ಲಿದ್ದಾರೆ. ಐದು ಕ್ಷೇತ್ರಗಳಲ್ಲಿ ಮಿತ್ರಪಕ್ಷಕ್ಕೆ ಹೆಚ್ಚು ಲೀಡ್ ಸಿಕ್ಕಿದೆ. ಎನ್‌ಡಿಎ (NDA) ಪಕ್ಷಕ್ಕೆ ಜನರ ಬೆಂಬಲ, ಆಶೀರ್ವಾದ ಇರೋದು ಸ್ಪಷ್ಟವಾಗಿದೆ. ಕನಕಪುರ, ಚನ್ನಪಟ್ಟಣದಲ್ಲೂ ದೊಡ್ಡ ಮಟ್ಟದ ಲೀಡ್ ಸಿಕ್ಕಿದೆ. ಹಾಗಾಗಿ ಈ ಕ್ಷೇತ್ರದಲ್ಲಿ ಮೈತ್ರಿ ಪಕ್ಷದ ಗೆಲುವು ಖಚಿತ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದೇ ವೇಳೆ ಡಿಕೆಶಿ ಕುರಿತು ಮಾತಾನಾಡಿದ ಅವರು, ಡಿಕೆಶಿಯವರು ಉದ್ಯೋಗ ಮೇಳ ಧ್ವಜಾರೋಹಣ ಮಾಡಿ ಕ್ಷೇತ್ರದ ಜನರನ್ನು ಓಲೈಕೆ ಮಾಡುವ ವಿಚಾರದಲ್ಲಿದ್ದಾರೆ. ಪ್ರೋಟೊಕಾಲ್ ಪ್ರಕಾರ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ಮಾಡಬೇಕು. ಆದರೆ ಉಪಚುನಾವಣೆ ಗಮನದಲ್ಲಿಟ್ಟುಕೊಂಡು ಚನ್ನಪಟ್ಟಣದಲ್ಲಿ ಧ್ವಜಾರೋಹಣ ಮಾಡಿದ್ದಾರೆ. ಅದೇನೋ 20 ಜನ ಪಿಡಿಓ ಬದಲಾವಣೆ ಮಾಡ್ತೀವಿ, ಸೈಟ್ ಕೊಡ್ತೀವಿ ಅಂತ ಆಶ್ವಾಸನೆ ಕೊಡ್ತಿದ್ದಾರೆ. ಆದರೆ ರಾಜ್ಯದ ಜನತೆಗೆ ಕೊಟ್ಟಿರುವ ಆಶ್ವಾಸನೆಗಳನ್ನೇ ಅವರು ಈಡೇರಿಸಿಲ್ಲ.ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್ | ಗಂಗಾವತಿಯಲ್ಲಿ ಬಿಲ್ಲು, ಬಾಣಗಳಿರುವ ವಿದ್ಯುತ್ ಕಂಬ ತೆರವು – ಆದೇಶ ಹಿಂಪಡೆದ ತಹಶೀಲ್ದಾರ್
ಇನ್ನೂ ಚನ್ನಪಟ್ಟಣಕ್ಕೂ ಇದೇ ಸ್ಥಿತಿ ಬರುತ್ತದೆ. ಇದಕ್ಕೆ ದೊಡ್ಡಮಟ್ಟದ ಪ್ರಚಾರ ಕೊಡುವ ಅಗತ್ಯ ಇಲ್ಲ. ಸರ್ಕಾರದ ಸಾಕಷ್ಟು ಮಂತ್ರಿಗಳು ಪಂಚಾಯಿತಿ ಮಟ್ಟಕ್ಕೆ ಬರ್ತಿದ್ದಾರೆ. ರಾಜ್ಯದಲ್ಲಿ ಚನ್ನಪಟ್ಟಣ ಉಪಚುನಾವಣೆ ಗಮನ ಸೆಳೆಯಲಿದೆ. ಏನೇ ಇದ್ರೂ ಕ್ಷೇತ್ರದ ಜನರು ಅಂತಿಮವಾಗಿ ತೀರ್ಮಾನ ಮಾಡುತ್ತಾರೆ. ಅವರೇ ಇದಕ್ಕೆ ತಕ್ಕ ಉತ್ತರ ಕೊಡುತ್ತಾರೆ ಎಂದರು.