– ಪ್ರತಿಪಕ್ಷ ನಾಯಕರನ್ನ ಚುನಾವಣಾ ಆಯೋಗ ಗುರಿಯಾಗಿಸುತ್ತಿದೆ ಎಂದು ಆಕ್ರೋಶ
ಪಾಟ್ನಾ: ಬಿಹಾರದ (Bihar) ಸಮಸ್ತಿಪುರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು (Mallikarjun Kharge) ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ನ್ನು ಚುನಾವಣಾ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಇತ್ತೀಚೆಗೆ ಕೇರಳದಲ್ಲಿ ರಾಹುಲ್ ಗಾಂಧಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅನ್ನು ಸಹ ತಪಾಸಣೆ ನಡೆಸಿದ್ದರು.
Advertisement
केरल में श्री राहुल गांधी जी का और अब बिहार में @INCIndia अध्यक्ष श्री @kharge जी का हेलीकॉप्टर चुनाव आयोग और प्रशासन द्वारा तलाशी करना दुर्भाग्यपूर्ण है l @ECISVEEP वीडियो जारी कर देश को बताएं कि NDA के किन नेताओं का हेलीकॉप्टर चुनाव अभियान के दौरान चेक किया गया l@ANI pic.twitter.com/oD8ITS61xM
— Rajesh Rathorre (@RajeshRathorre1) May 12, 2024
Advertisement
ಖರ್ಗೆ ಅವರ ಹೆಲಿಕಾಪ್ಟರ್‌ನ್ನು ತಪಾಸಣೆ ನಡೆಸಿದ ವಿಚಾರವಾಗಿ ಕಾಂಗ್ರೆಸ್ (Congress) ಮುಖಂಡ ರಾಜೇಶ್ ರಾಥೋರ್ ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿದ್ದಾರೆ. ಪ್ರತಿಪಕ್ಷಗಳ ನಾಯಕರನ್ನು ಚುನಾವಣಾಧಿಕಾರಿಗಳು ಗುರಿಯಾಗಿಸುತ್ತಿದ್ದಾರೆ. ಬಿಜೆಪಿ ನೇತೃತ್ವದ ಎನ್‍ಡಿಎ ನಾಯಕರಿಗೆ ಮಾತ್ರ ಮುಕ್ತವಾಗಿ ತೆರಳಲು ಅವಕಾಶ ನೀಡಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ‘ಲೋಕ’ ಚುನಾವಣೆಯಲ್ಲಿ ಎಎಪಿ ಗೆದ್ದರೆ ವಿದ್ಯುತ್, ಆರೋಗ್ಯ ಸೇವೆ ಉಚಿತ – 10 ಗ್ಯಾರಂಟಿ ಘೋಷಿಸಿದ ಕೇಜ್ರಿವಾಲ್
Advertisement
Advertisement
ಕಾಂಗ್ರೆಸ್ ನಾಯಕರ ಹೆಲಿಕಾಪ್ಟರ್‌ಗಳನ್ನು ತಪಾಸಣೆ ಮಾಡುವುದು ವಾಡಿಕೆಯೇ? ಎನ್‍ಡಿಎ ಒಕ್ಕೂಟದ ಉನ್ನತ ನಾಯಕರ ಮೇಲೂ ಇದೇ ರೀತಿಯ ತಪಾಸಣೆ ನಡೆಸಲಾಗುತ್ತಿದೆಯೇ? ಎಂಬುದನ್ನು ಚುನಾವಣಾ ಆಯೋಗ ಸ್ಪಷ್ಟಪಡಿಸಬೇಕು. ಚುನಾವಣಾ ಆಯೋಗ ಅಂತಹ ಎಲ್ಲಾ ದಾಖಲೆಗಳನ್ನು ಸಾರ್ವಜನಿಕಗೊಳಿಸಬೇಕು ಎಂದು ರಾಜೇಶ್ ರಾಥೋರ್ ಒತ್ತಾಯಿಸಿದ್ದಾರೆ.
ಮೇ 11 ರಂದು ಮಲ್ಲಿಕಾರ್ಜುನ ಖರ್ಗೆಯವರು ಬಿಹಾರದ ಸಮಸ್ತಿಪುರ ಮತ್ತು ಮುಜಾಫರ್‍ಪುರದಲ್ಲಿ ಚುನಾವಣಾ (Lok Sabha election) ರ‍್ಯಾಲಿಯಲ್ಲಿ ಭಾಗವಹಿಸಿದ್ದರು. ಈ ವೇಳೆ ಸಮಸ್ತಿಪುರದಲ್ಲಿ ಚುನಾವಣಾ ಅಧಿಕಾರಿಗಳು ಖರ್ಗೆಯವರ ಹೆಲಿಕಾಪ್ಟರ್‌ನ್ನು ತಪಾಸಣೆ ನಡೆಸಿದ್ದರು. ಅಲ್ಲದೇ ಹೆಲಿಕಾಪ್ಟರ್ ತಪಾಸಣೆಯ ವೀಡಿಯೋವನ್ನು ಅಧಿಕಾರಿಗಳು ಎಕ್ಸ್‌ನಲ್ಲಿ ಹಂಚಿಕೊಂಡಿದ್ದರು. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಟ್ವಿಸ್ಟ್; ಪ್ರೀತಂ ಗೌಡ ಆಪ್ತ ಸೇರಿ ಇಬ್ಬರು ಎಸ್‌ಐಟಿ ವಶಕ್ಕೆ