ರಾಹುಲ್ ಗಾಂಧಿಗೆ ಮುಸ್ಲಿಂ ಲೀಗ್ ವೈರಸ್ ತಗುಲಿದೆ: ಯೋಗಿ ಆದಿತ್ಯನಾಥ್

Public TV
1 Min Read
Rahul Gandhi yogi adityanath

ಲಕ್ನೋ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮುಸ್ಲಿಂ ಲೀಗ್ ‘ವೈರಸ್’ ತಗುಲಿದ್ದು, ಅವರು ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಟ್ವೀಟ್ ಮೂಲಕ ರಾಹುಲ್ ಗಾಂಧಿ ವಿರುದ್ಧ ಯೋಗಿ ಆದಿತ್ಯನಾಥ್ ವ್ಯಂಗ್ಯವಾಡಿದ್ದು, ಮುಸ್ಲಿಂ ಲೀಗ್ ವೈರಸ್ ಇದ್ದಂತೆ. ಈ ಸೋಂಕು ತಗಲಿದವರು ಯಾರೂ ಉಳಿದಿಲ್ಲ. ಕಾಂಗ್ರೆಸ್‍ಗೆ ಈಗಾಗಲೇ ಮುಸ್ಲಿಂ ಲೀಗ್ ಸೋಂಕು ತಗುಲಿದೆ. ಮುಸ್ಲಿಂ ಲೀಗ್ ವೈರಸ್ ತಗುಲಿದ ರಾಹುಲ್ ಗಾಂಧಿ ಅವರು ಗೆಲುವು ಸಾಧಿಸಿದರೆ ದೇಶದ ಪರಿಸ್ಥಿತಿ ಏನಾಗುತ್ತದೆ. ಈ ವೈರಸ್ ದೇಶಾದ್ಯಂತ ಹರಡುತ್ತದೆ ಎಂದು ದೂರಿದ್ದಾರೆ.

‘1857ರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇಶ ಜನರು ಮಂಗಲ್ ಪಾಂಡೆ ಅವರ ಜೊತೆಗೆ ಸೇರಿ ಬ್ರಿಟಿಷರ ವಿರುದ್ಧ ಹೋರಾಡಿದ್ದರು. ಆದರೆ ಆಗ ಹುಟ್ಟಿಕೊಂಡ ಈ ಮುಸ್ಲಿಂ ಲೀಗ್ ವೈರಸ್ ದೇಶಾದ್ಯಂತ ಹರಡಿ ರಾಷ್ಟ್ರ ವಿಭಜನೆಗೆ ಕಾರಣವಾಯಿತು ಎಂದು ಹೇಳಿದ್ದಾರೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಉಗ್ರರಿಗೆ ಬಿರಿಯಾನಿ ಕೊಡುತ್ತಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಉಗ್ರರಿಗೆ ಬಾಂಬ್, ಬುಲೆಟ್ ತಿನಿಸುತ್ತಿದೆ ಎಂದು ಹೇಳಿದರು.

yogi 1 1

ರಾಹುಲ್ ಗಾಂಧಿ ಅವರು ಕೇರಳದ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್‍ಗೆ ಮುಸ್ಲಿಂ ಲೀಗ್ ಸಾಂಪ್ರದಾಯಿಕ ಮಿತ್ರ ಪಕ್ಷವಾಗಿದೆ. ಹೀಗಾಗಿ ಮುಸ್ಲಿಂ ಲೀಗ್ ಕಾರ್ಯಕರ್ತರು ರಾಹುಲ್ ಗಾಂಧಿ ನಾಮಪತ್ರದ ದಿನದಂದು ನಡೆದ ಬೃಹತ್ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಜೊತೆಗೆ ತಮ್ಮ ಪಕ್ಷದ ಹಸಿರು ಬಾವುಟಗಳನ್ನು ಹಿಡಿದು ಸಂಭ್ರಮಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *