ನವದೆಹಲಿ: ಕಾಂಗ್ರೆಸ್ ಪಕ್ಷ ಕೇವಲ ಮುಸ್ಲಿಂ ಸಮುದಾಯದ ಪುರುಷರಿಗಷ್ಟೇ ಸೀಮಿತವಾಗಿದೇಯಾ ಎಂದು ಪ್ರಶ್ನಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಉತ್ತರ ಪ್ರದೇಶದ ಅಜಂಪುರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ಪಕ್ಷ ಮುಸ್ಲಿಮರಿಗೆ ಮಾತ್ರ ಸೀಮಿತವಾಗಿದ್ದರೆ ಅದು ಅವರಿಗೆ ಬಿಟ್ಟಿದ್ದು. ಆದರೆ ಕಾಂಗ್ರೆಸ್ ಮುಸ್ಲಿಂ ಪುರುಷರಿಗೆ ಮಾತ್ರ ಸೀಮಿತವಾಗಿದೆಯಾ? ಏಕೆಂದರೆ ತ್ರಿವಳಿ ತಲಾಕ್, ನಿಖಾ ಹಲಾಲ ವಿರುದ್ಧ ಮುಸ್ಲಿಂ ಮಹಿಳೆಯರು ಹೋರಾಟ ನಡೆಸುವ ಸಂದರ್ಭದಲ್ಲಿ ನೀವು ಅವರ ಪರ ನಿಲ್ಲಲಿಲ್ಲ ಎಂದು ಆರೋಪಿಸಿದರು.
Advertisement
PM Narendra Modi arrives in Varanasi. He will inaugurate various projects in the city today. pic.twitter.com/V3I0nWXwq5
— ANI UP/Uttarakhand (@ANINewsUP) July 14, 2018
Advertisement
ಇದೇ ವೇಳೆ ಬಿಎಸ್‍ಪಿ ಹಾಗೂ ಸಮಾಜವಾದಿ ಪಕ್ಷದ ನಾಯಕರ ವಿರುದ್ಧವೂ ವಾಗ್ದಾಳಿ ನಡೆಸಿದ ಮೋದಿ, ಕೆಲವು ಪಕ್ಷಗಳು ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಸಿದ್ಧಾಂತವನ್ನು ಪಾಲನೆ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ ಸರ್ಕಾರ ರೂಪಿಸುತ್ತಿರುವ ಯೋಜನೆಗಳು ಎಲ್ಲರ ಅಭಿವೃದ್ಧಿಗಾಗಿ ಎಂಬ ಅಂಶವನ್ನೇ ಮರೆತಿದ್ದಾರೆ. ಇಂತಹ ಪಕ್ಷಗಳು ಕೇವಲ ತಮ್ಮ ಕುಟುಂಬ, ಆಪ್ತರ ಅಭಿವೃದ್ಧಿಗಾಗಿ ಮಾತ್ರ ಹೆಚ್ಚಿನ ಗಮನಹರಿಸುತ್ತವೆ. ದಲಿತರು ಹಾಗೂ ಹಿಂದುಳಿದವರನ್ನು ಕೇವಲ ರಾಜಕೀಯ ಉದ್ದೇಶಕ್ಕಾಗಿ ಬಳಕೆ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಪರಸ್ಪರ ಆರೋಪ ಮಾಡುತ್ತಿದ್ದ ಅವರು ಇಂದು ಮೋದಿಯನ್ನು ಎದುರಿಸಲು ಒಂದಾಗಿದ್ದರೆ ಎಂದು ವಾಗ್ದಾಳಿ ನಡೆಸಿದರು.
Advertisement
2019 ರ ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಎರಡು ದಿನಗಳ ಹಿಂದೆಯಷ್ಟೇ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿ, ಕಾಂಗ್ರೆಸ್ ಕೇವಲ ಕೋಮುಭಾವನೆಯನ್ನು ಮುಂದಿಟ್ಟು ಚುನಾವಣೆ ಎದುರಿಸಲು ಮುಂದಾಗಿದೆ ಎಂದು ಆರೋಪಿಸಿದ್ದರು.
Advertisement
The take of these parties on triple talaq have exposed them. On one side the Centre is trying to make the lives of women easy, on the other side these people have grouped together to make the lives of women, especially Muslim women, difficult: PM Modi pic.twitter.com/aNKk6RPdp1
— ANI UP/Uttarakhand (@ANINewsUP) July 14, 2018
Those who didn't even like looking at each other earlier, are now chanting Modi Modi. These people, out on bail, & the dynast parties now want to create obstacles on your path to development: PM Narendra Modi pic.twitter.com/BehGrOHVfl
— ANI UP/Uttarakhand (@ANINewsUP) July 14, 2018