ಶಿವಮೊಗ್ಗ: ಇನ್ನೆರಡು ದಿನವಾದ್ರೆ ಶಿವಮೊಗ್ಗದಲ್ಲಿ ಲೋಕಸಭಾ ಉಪಚುನಾವಣಾ ಮತದಾನ ನಡೆಯಲಿದೆ. ಅದಕ್ಕೂ ಮೊದಲೇ ದೋಸ್ತಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ.
ಲೋಕಸಭಾ ಉಪಚುನಾವಣೆಗೂ ಮುನ್ನ ಮೈತ್ರಿ ಕೂಟಕ್ಕೆ ಸಂತಸ ತಂದಿದ್ದು, ಶಿವಮೊಗ್ಗ ಜಿಲ್ಲಾ ಪಂಚಾಯ್ತಿಯಲ್ಲಿ ಅಧಿಕಾರಕ್ಕೆ ಬಂದಿದೆ. ಆವಿನಹಳ್ಳಿ ಜಿಪಂ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮನೇರಿ ಶಿವಪ್ಪ 530 ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ಸಹೋದರನ ಮಗ ಬಿ.ಟಿ.ರವಿ ಸೋಲು ಕಂಡಿದ್ದಾರೆ.
Advertisement
Advertisement
ಕಾಗೋಡು ಅಣ್ಣಾಜಿ ನಿಧನದಿಂದ ತೆರವಾಗಿದ್ದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆವಿನಹಳ್ಳಿ ಜಿಲ್ಲಾ ಪಂಚಾಯ್ತಿ ಇದೀಗ ಮೈತ್ರಿಕೂಟದಲ್ಲೇ ತಮ್ಮ ಅಧಿಕಾರವನ್ನು ಉಳಿಸಿಕೊಂಡಿದೆ. 31 ಸ್ಥಾನ ಬಲದ ಜಿಲ್ಲಾ ಪಂಚಾಯ್ತಿನಲ್ಲಿ ಬಿಜೆಪಿ 15, ಕಾಂಗ್ರೆಸ್-ಜೆಡಿಎಸ್ 15 ಸ್ಥಾನ ಹೊಂದಿದ್ದವು. ಈ ಗೆಲುವಿನೊಂದಿಗೆ ಮೈತ್ರಿ ಪಕ್ಷಗಳ ಬಲ 16ಕ್ಕೇರಿದೆ.
Advertisement
ಸೆ. 29ರಂದು ನಡೆದಿದ್ದ ಚುನಾವಣೆ, ಇಂದು ಎಂಟು ಸುತ್ತಿನಲ್ಲಿ ಮತ ಎಣಿಕೆ ಮುಗಿದಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv