ಹಾವೇರಿ: ಸದ್ಯದ ಸುತ್ತಿನಲ್ಲಿ ಬಿಜೆಪಿ ಲೀಡ್ ಇರಬಹುದು ಆದರೆ ಮುಂದಿನ ಸುತ್ತಲಿನ ಕಾಂಗ್ರೆಸ್ ಪರ ಆಗುತ್ತದೆ. 10 ಸಾವಿರ ಲೀಡ್‌ನಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಟಿಕೆಟ್ ವಂಚಿತ ಅಜ್ಮಂಪೀರ್ ಖಾದ್ರಿ (Ajjampir Khadri) ಭವಿಷ್ಯ ನುಡಿದಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಉಪಚುನಾವಣೆಯಲ್ಲಿ (By Election) ಗೆಲ್ಲುವ ನಿರೀಕ್ಷೆ ಇದೆ. ಮೊದಲ ಸುತ್ತಿನಲ್ಲಿ 400 ಮತಗಳ ಹಿನ್ನಡೆ ಇದ್ದೇವೆ. ಪ್ರತಿ ಚುನಾವಣೆಯಲ್ಲಿ 5 ಸಾವಿರ ಹಿನ್ನಡೆ ಇರುತ್ತಿದ್ದೆವು. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತವಾಗಿದೆ. ನನ್ನ ತ್ಯಾಗ ಅನ್ನೋದಕ್ಕಿಂತ ಸಿದ್ದರಾಮಯ್ಯ, ಡಿಕೆಶಿ, ಜಮೀರ್‌ರವರಿಂದ ಅಭಿವೃದ್ಧಿ ಕೆಲಸ ಆಗಿದೆ. ಹಾಗಾಗಿ ಸಿದ್ದರಾಮಯ್ಯನವರ ಜನಪರ ಆಡಳಿತವನ್ನು ಜನರು ಒಪ್ಪಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಜಾರ್ಖಂಡ್‌ನಲ್ಲಿ ಬಿಗ್ ಟ್ವಿಸ್ಟ್; ಜೆಎಂಎಂ ಮುನ್ನಡೆ – ಎನ್‌ಡಿಎ ಹಿಂದಿಕ್ಕಿದ ಇಂಡಿಯಾ ಒಕ್ಕೂಟ
ನನ್ನ ಹೇಳಿಕೆಯನ್ನು ವಿವಾದ ಮಾಡಲು ಬಿಜೆಪಿ (BJP) ಹೊರಟಿದೆ. ಸೋಲುವ ಭಯದಿಂದ ಈ ರೀತಿ ಪ್ರಚಾರ ಮಾಡುತ್ತಿದ್ದಾರೆ. ಎಷ್ಟೇ ಅಪಪ್ರಚಾರ ಮಾಡಿದರೂ ಗೆಲ್ಲುವುದು ಮಾತ್ರ ಕಾಂಗ್ರೇಸ್ ಅಭ್ಯರ್ಥಿ. ಸದ್ಯದ ಸುತ್ತಿನಲ್ಲಿ ಬಿಜೆಪಿ ಲೀಡ್ ಇರಬಹುದು ಆದರೆ ಮುಂದಿನ ಸುತ್ತಲಿನ ಕಾಂಗ್ರೆಸ್ ಪರ ಆಗುತ್ತದೆ. ಸದ್ಯ ಬಿಜೆಪಿ ಬೆಂಬಲ ಇರುವ ಮತಗಟ್ಟೆಗಳ ಮತ ಎಣಿಕೆ ನಡೆಯುತ್ತಿದೆ ಹೀಗಾಗಿ ಬಿಜೆಪಿಗೆ ಲೀಡ್ ಬರುತ್ತಿದೆ. ಆದರೆ ಬಿಜೆಪಿ ಪ್ರಾಬಲ್ಯ ಇರುವ ಕ್ಷೇತ್ರಗಳಲ್ಲಿ ಈ ಬಾರಿ ಕಾಂಗ್ರೆಸ್ ಸಮಬಲ ಸಾಧಿಸಿದೆ. ಹಾಗಾಗಿ ನಾವು ಗೆದ್ದೇ ಗೆಲ್ಲುತ್ತೇವೆ ಎಂದರು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಮಹಾಯುತಿಗೆ 200+ ಕ್ಷೇತ್ರಗಳಲ್ಲಿ ಮುನ್ನಡೆ
ಪ್ರವೇಶ ಪತ್ರವಿಲ್ಲದೆ ಮತ ಎಣಿಕೆ ಕೇಂದ್ರಕ್ಕೆ ಬಂದಿದ್ದ ಅಜ್ಮಂಪೀರ್ ಖಾದ್ರಿಗೆ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ ನಿಷೇಧ ಮಾಡಲಾಗಿತ್ತು. ಪೊಲೀಸರು ಮಾರ್ಗ ಮಧ್ಯದಲ್ಲಿಯೇ ಖಾದ್ರಿ ಅವರನ್ನು ತಡೆದು ವಾಪಸ್ ಕಳುಹಿಸಿದ್ದಾರೆ. ಪೊಲೀಸರ ಮಾತಿಗೆ ಸಿಟ್ಟಾಗಿ ಖಾದ್ರಿ ಹೊರ ನಡೆದಿದ್ದಾರೆ. ಇದನ್ನೂ ಓದಿ: Maharashtra Election Results: ಬಿಷ್ಣೋಯ್ ಗ್ಯಾಂಗ್‌ನಿಂದ ಹತ್ಯೆಯಾಗಿದ್ದ ಬಾಬಾ ಸಿದ್ದಿಕಿ ಪುತ್ರನಿಗೆ ಹಿನ್ನಡೆ