ಬೆಂಗಳೂರು: ಬಿಟಿಎಂ ಲೇಔಟ್ ಕಾಂಗ್ರೆಸ್ ಅಭ್ಯರ್ಥಿ ರಾಮಲಿಂಗಾರೆಡ್ಡಿಗೆ ಸಂಕಷ್ಟ ಎದುರಾಗಿದೆ. ರಾಮಲಿಂಗಾರೆಡ್ಡಿ ವಿರುದ್ಧ ಸಹಿ ಹಾಕದ ನಾಮಪತ್ರ ಸಲ್ಲಿಸಿದ ಆರೋಪವೊಂದು ಕೇಳಿಬಂದಿದೆ.
ನಾಮಪತ್ರದಲ್ಲಿ ಸಲ್ಲಿಸಿರುವ ಮಾಹಿತಿಯನ್ನ ಪ್ರಮಾಣೀಕರಿಸಿದ ಮೇಲೆ ಸಹಿ ಮಾಡಬೇಕು. ಆದರೆ ರಾಮಲಿಂಗಾರೆಡ್ಡಿ ನಾಮಪತ್ರದಲ್ಲಿ ಸಹಿ ಮಾಡಿಲ್ಲ. ಅಲ್ಲದೇ ಸಹಿ ಮಾಡದ ನಾಮಪತ್ರವನ್ನ ಬಿಟಿಎಂ ಲೇಔಟ್ ಆರ್ ಓ ರಂಗಪ್ಪ ಅವರು ಚುನಾವಣಾ ಆಯೋಗಕ್ಕೂ ಕಳಿಸಿದ್ದಾರೆ.
Advertisement
Advertisement
ಈ ಕುರಿತು ಕರ್ನಾಟಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಾಗೇಶ್ ನಾಮಪತ್ರವನ್ನ ತಿರಸ್ಕಾರ ಮಾಡಬೇಕು ಎಂದು ದೂರು ಸಲ್ಲಿಸಿದ್ದಾರೆ. ಇತ್ತ ಆಯೋಗ ಕೂಡ ತಮ್ಮ ವೆಬ್ ಸೈಟ್ ನಲ್ಲೂ ಸಹಿ ಮಾಡದ ನಾಮಪತ್ರವನ್ನೇ ಅಪ್ಲೋಡ್ ಮಾಡಿದೆ ಎಂದು ಹೇಳಲಾಗುತ್ತಿದೆ.
Advertisement
ಈ ಕುರಿತು ರಾಮಲಿಂಗಾರೆಡ್ಡಿ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಒಬ್ಬರು ಮೂರು ನಾಮಪತ್ರ ಸಲ್ಲಿಸಬಹುದು. ಎರಡು ನಾಮಪತ್ರದಲ್ಲಿ ಸರಿಯಿದೆ. ಆದ್ರೆ ಒಂದರಲ್ಲಿ ಏನೋ ಮಿಸ್ಟೇಕ್ ಆಗಿರಬಹುದು. ಇದನ್ನೇ ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಅಪ್ಲೋಡ್ ಮಾಡುವವರು ಇದನ್ನು ಪರಿಗಣಿಸಬೇಕಿತ್ತು ಅಂತ ಸ್ಪಷ್ಟನೆ ನೀಡಿದ್ದಾರೆ.