ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾನುವಾರ ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿಗೆ ಬೆಂಗಳೂರು ಉತ್ತರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜೀವ್ ಗೌಡ (Rajeev Gowda) ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ನಾಳೆ ರಾಜ್ಯಕ್ಕೆ ಬರ್ತಿದ್ದಾರೆ. ಅವರು ಬರುವ ಮುನ್ನ ಪ್ರಶ್ನೆಗಳಿವೆ. ಆ ಪ್ರಶ್ನೆಗಳಿಗೆ ಅವರು ಉತ್ತರಿಸಬೇಕು. ಬೆಂಗಳೂರಿನಲ್ಲಿ ನೀರನ ಸಮಸ್ಯೆ ದೊಡ್ಡದಿದೆ. ಮೇಕೆದಾಟಿಗೆ ಪ್ರಪೋಸಲ್ ಕೊಟ್ಟಿದ್ದೆವು. ಯಾಕೆ ಎನ್ವಿರಾನ್ಮೆಂಟ್ ಅಪ್ರೂವಲ್ ಕೊಟ್ಟಿಲ್ಲ. ಕೃಷ್ಣ ಟ್ರಿಬ್ಯೂನಲ್ ಆಗಿ 10 ವರ್ಷ ಆಯ್ತು. ಯಾಕೆ ಗೆಜೆಟ್ ಹೊರಡಿಸಿಲ್ಲ? ಅಪ್ಪರ್ ಭದ್ರಾಗೆ 5,300 ಕೋಟಿ ರೂ. ಘೋಷಿಸಿದ್ರು. ಯಾಕೆ ಇಲ್ಲಿಯವರೆಗೆ ಅದರ ಹಣ ಬಿಡುಗಡೆ ಮಾಡಿಲ್ಲ ಎಂದು ರಾಜೀವ್ ಗೌಡ ಕೇಳಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಮೂಲ ನಮ್ಮ ಪಕ್ಷದವರಲ್ಲ, ಬೇರೆ ಪಕ್ಷದಿಂದ ಬಂದವರು: ಡಿಕೆ ಸುರೇಶ್
Advertisement
Advertisement
15 ನೇ ಹಣಕಾಸು ಆಯೋಗದ ರಿಪೋರ್ಟ್ ಏನಿದೆ? ಕರ್ನಾಟಕಕ್ಕೆ 5,400 ಕೋಟಿ ಶಿಫಾರಸು ಮಾಡಿತ್ತು. ಅದರ ಬಗ್ಗೆ ಯಾಕೆ ಚಕಾರವಿಲ್ಲ. ಇಂಪ್ಲಿಮೆಂಟ್ ಮಾಡ್ತೇವೆ ಅಂದವರು ಯಾಕೆ ಮಾಡಿಲ್ಲ? ಫೈನಾನ್ಸ್ ಕಮಿಷನ್ ರೆಕಮೆಂಡೇಷನ್ ಮಾಡಿತ್ತು. ಯಾಕೆ ಹಣವನ್ನ ನಮಗೆ ಬಿಡುಗಡೆ ಮಾಡಿಲ್ಲ? ಪೆರಿಪೆರಲ್ ರಿಂಗ್ ರಸ್ತೆಗೆ ಹಣ ಯಾಕೆ ಕೊಟ್ಟಿಲ್ಲ. ಪ್ರಧಾನಿ, ಸಬರಬನ್ ರೈಲು ಉದ್ಘಾಟಿಸಿದರು. 40 ತಿಂಗಳಲ್ಲಿ ಯೋಜನೆ ಪೂರ್ಣ ಎಂದಿದ್ರಿ. ಈಗ 20 ತಿಂಗಳಾಯ್ತು, ಎಲ್ಲಿ ಹೋಯ್ತು ಯೋಜನೆ? ಬರ ಪರಿಹಾರದ ಬಗ್ಗೆ ಗಮನವೇ ಕೊಟ್ಟಿಲ್ಲ. 223 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಹೆಚ್ಚಿದೆ. ಗ್ರಾಮೀಣ ಭಾಗದ ಜನ ಸಂಕಷ್ಟದಲ್ಲಿದ್ದಾರೆ.
ಇಲ್ಲಿಯವರೆಗೆ ಪರಿಹಾರದ ಹಣ ಕೊಟ್ಟಿಲ್ಲ ಎಂದು ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
Advertisement
ನಾ ಕಾವೂಂಗಾ ನಾ ಕಾನೇ ದೂಂಗಾ ಅಂತೀರ. ನಮ್ಮ ಎಂಪಿಯೊಬ್ಬರ ಮೇಲೆ ಇಡಿ ಕೇಸ್ ಇದೆ. ಅವರನ್ನ ಯಾಕೆ ಸಚಿವ ಸಂಪುಟಕ್ಕೆ ತೆಗೆದುಕೊಂಡ್ರಿ. ಶೋಭಾ ಅವರ ಮೇಲೆ 44 ಕೋಟಿ ರೂ. ಆರೋಪವಿದೆ. ಅವರನ್ನ ಹೇಗೆ ಸಚಿವೆಯನ್ನಾಗಿ ಮಾಡಿದ್ರಿ. ಇದು ನ್ಯಾಯಕ್ಕೆ ವಿರುದ್ಧವಾದುದು. ಶೋಭಾ ಕರಂದ್ಲಾಜೆ ಅವರನ್ನ ತಕ್ಷಣ ಕೆಳಗಿಳಿಸಿ, ಎಲೆಕ್ಟ್ರೋ ಬಾಂಡ್ನಲ್ಲಿ ದೊಡ್ಡ ಭ್ರಷ್ಟಾಚಾರ ಆಗಿದೆ. ಇಡಿ ರೇಡ್ ಮಾಡಿಸ್ತೀರ. ನಂತರ ಹಣವನ್ನ ಕಲೆಕ್ಟ್ ಮಾಡ್ತೀರ. ಭ್ರಷ್ಟಾಚಾರ ಅಂದ್ರೆ ಮೋದಿ ಸರ್ಕಾರ ಬರುತ್ತೆ. ನಮ್ಮ ರಾಜ್ಯಕ್ಕೆ ಬಂದಾಗ ಉತ್ತರ ಕೊಡಬೇಕು ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ತುಮಕೂರು ಕ್ಷೇತ್ರ ಗೆಲ್ಲಲು ಬಿಜೆಪಿ ಪ್ಲ್ಯಾನ್; ಮಾಧುಸ್ವಾಮಿ ಮುನಿಸು ಶಮನಕ್ಕೆ ಆಫರ್ – ಸೋಮಣ್ಣ ಪರ ಪ್ರಚಾರಕ್ಕಿಳಿತಾರಾ?
Advertisement
ಬಿಜೆಪಿ ಕ್ಯಾಂಡಿಡೇಟ್ (ಶೋಭಾ ಕರಂದ್ಲಾಜೆ) ಬಗ್ಗೆ ಒಳ್ಳೆ ಪ್ರತಿಕ್ರಿಯೆ ಇಲ್ಲ. ಅವರ ಕಾರ್ಯಕರ್ತರೇ ವಿರೋಧ ಮಾಡ್ತಾರೆ. ಉತ್ತರದಲ್ಲಿ ಜೆಡಿಎಸ್ ಕಾರ್ಯಕರ್ತರು ನಮ್ಮ ಜೊತೆ ಬಂದಿದ್ದಾರೆ. ಎಸ್.ಟಿ.ಸೋಮಶೇಖರ್ ಬೆಂಬಲ ಕೊಟ್ಟಿದ್ದಾರೆ. ಅದು ನಮಗೆ ಶಕ್ತಿ ತುಂಬಲಿದೆ. ಬಹಿರಂಗವಾಗಿಯೇ ಅವರು ಬೆಂಬಲ ನೀಡ್ತಾರೆ. ಶೋಭಾ ಕರಂದ್ಲಾಜೆ ಅವರ ಬಗ್ಗೆ ಪ್ರಚಾರ ಮಾಡ್ತೇವೆ. ಇಡಿ ಕೇಸ್ ಬಗ್ಗೆ ಜನರಿಗೆ ತಿಳಿಸ್ತೇವೆ ಎಂದು ಶೋಭಾ ಕರಂದ್ಲಾಜೆ ವಿರುದ್ಧ ಹರಿಹಾಯ್ದಿದ್ದಾರೆ.