ಚುನಾವಣೆಯಲ್ಲಿ ಸೋತ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಹೃದಯಾಘಾತದಿಂದ ಸಾವು

Public TV
1 Min Read
Harinarayan Gupta

ಭೋಪಾಲ್: ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ಬಳಿಕ ಅಭ್ಯರ್ಥಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶದ ರೇವಾದಲ್ಲಿ ಮುನ್ಸಿಪಲ್ ಕೌನ್ಸಿಲ್‌ಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಹರಿನಾರಾಯಣ್ ಗುಪ್ತಾ ಅವರು ಚುನಾವಣೆಯಲ್ಲಿ ಸೋತ ಸುದ್ದಿ ತಿಳಿದ ಬಳಿಕ ಭಾನುವಾರ ನಿಧನರಾಗಿದ್ದಾರೆ. ಇದನ್ನೂ ಓದಿ: ಮುನಿರತ್ನ, ಭೈರತಿ, ಗೋಪಾಲಯ್ಯ, ನಾಗೇಶ್ ಜನ ಉಪಯೋಗಿ ಮಂತ್ರಿಗಳು: ಬೊಮ್ಮಾಯಿ

evm 1490347648

ರೇವಾದ ಹನುಮಾನ ಪ್ರದೇಶದ ಪುರಸಭೆಯ ವಾರ್ಡ್ ನಂ.9 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಹರಿನಾರಾಯಣ್ ಗುಪ್ತಾ ಸ್ಪರ್ಧಿಸಿದ್ದರು. ಆದರೆ ಸ್ವತಂತ್ರ ಅಭ್ಯರ್ಥಿಯಾಗಿದ್ದ ಅಖಿಲೇಶ್ ಗುಪ್ತಾ ಅವರು ಹರಿನಾರಾಯಣ್ ಅವರನ್ನು 14 ಮತಗಳ ಅಂತರದಿಂದ ಸೋಲಿಸಿದ್ದಾರೆ. ಇದನ್ನೂ ಓದಿ: ಮಹಾಲಕ್ಷ್ಮಿ ಲೇಔಟ್ 55ನೇ ವಾರ್ಡ್‍ಗೆ ಅಪ್ಪು ಹೆಸರಿಟ್ಟಿರೋದು ಸಂತೋಷ ತಂದಿದೆ: ಸಿಎಂ

ಭಾನುವಾರ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ತಮ್ಮ ಸೋಲಿನ ಸುದ್ದಿ ಕೇಳುತ್ತಲೇ ಹರಿನಾರಾಯಣ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಹರಿನಾರಾಯಣ್ ಹನುಮಾನ ಕಾಂಗ್ರೆಸ್ ಘಟಕದ ಮಂಡಲ ಅಧ್ಯಕ್ಷರೂ ಆಗಿದ್ದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *