ಯಾದಗಿರಿ: ಚುನಾವಣಾ ಪ್ರಚಾರದ (Election Campaign) ವೇಳೆ ಜೆಡಿಎಸ್ ಅಭ್ಯರ್ಥಿ (JDS Candidate) ಟೀಕಿಸೋ ಭರದಲ್ಲಿ ಹಣ-ಹೆಂಡ ಸ್ವೀಕರಿಸುವಂತೆ ಮತದಾರರಿಗೆ ಕಾಂಗ್ರೆಸ್ ಅಭ್ಯರ್ಥಿ (Congress Candidate) ಕರೆ ನೀಡಿ ಎಡವಟ್ಟು ಮಾಡಿಕೊಂಡಿರೋ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.
Advertisement
ಯಾದಗಿರಿಯ ಗುರುಮಠಕಲ್ ವಿಧಾನಸಭಾ ಕ್ಷೇತ್ರ (Gurumitkal Constituency) ದ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ (BabuRao chinchanasur) ಎಡವಟ್ಟು ಮಾಡಿಕೊಂಡಿದ್ದು, ಜನರಿಗೆ ಹಣದ ಜೊತೆಗೆ ಹೆಂಡ ಸ್ವೀಕರಿಸುವಂತೆ ಪ್ರಚೋದನೆ ನೀಡಿದ್ದಾರೆ. ಇದನ್ನೂ ಓದಿ: ದೇಶಕ್ಕೆ ದೇವೇಗೌಡರು, ರಾಜ್ಯಕ್ಕೆ ಕುಮಾರಣ್ಣ, ಹಾಸನಕ್ಕೆ ರೇವಣ್ಣ; ಎ.ಮಂಜು – ಭವಾನಿ ಜುಗಲ್ ಬಂದಿ
Advertisement
Advertisement
ಗುರುಮಠಕಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಮ್ಮನಳ್ಳಿ ಗ್ರಾಮದಲ್ಲಿ ಪ್ರಚಾರಕ್ಕೆ ಹೋಗಿದ್ದ ಬಾಬುರಾವ್ ಚಿಂಚನಸೂರ್ ಜೆಡಿಎಸ್ ಅಭ್ಯರ್ಥಿ ಶರಣಗೌಡ ಕಂದಕೂರು (Sharana Gowda Kandakuru) ಟಿಕಿಸೋ ಭರದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ. ಪಾಪದ ದುಡ್ಡು ಅವರ ಬಳಿ ತುಂಬಿ ತುಳುಕುತ್ತಿದೆ. ತಾಯಂದಿರೇ- ತಂಗಿಯಂದಿರೇ ಅವರ ಬಳಿ ಇರೋ ಪಾಪದ ದುಡ್ಡು ತಿನ್ನಿರಿ. ಒಲ್ಲೆ ಅನ್ನಬ್ಯಾಡ್ರಿ, ರೊಕ್ಕ ಹರೀತಿದೆ, ತುಂಬಿ ತುಳುಕಿದೆ. ಕುಡಿರಿ, ತಿನ್ನಿರಿ ಸಂತೋಷದಾಗ ಡ್ಯಾನ್ಸ್ ಮಾಡ್ರಿ. ಬಂದ ದುಡ್ಡನ್ನ ಜಾಡಿಸಬ್ಯಾಡ್ರಿ, ಲಕ್ಷಗಟ್ಟಲೇ ದುಡ್ಡು ತಿನ್ನಿರಿ. ಆದರೆ ವೋಟು ಮಾತ್ರ ನನಗೆ ಹಾಕ್ರಿ ಎಂದು ಬಾಬುರಾವ್ ಚಿಂಚನಸೂರ್ ಹೇಳಿದ್ದಾರೆ.
Advertisement
ತಂದೆ ಎಮ್ಎಲ್ಎ ಆಗಿದ್ದಕ್ಕೆ ಈ ರೀತಿ ಆಗಿದೆ. ಇನ್ನೂ ಶರಣಗೌಡ ಎಮ್ಎಲ್ಎ ಆದರೆ ಎಲ್ಲಾ ಖಲ್ಲಾಸ್ ಎಂದು ಇದೇ ವೇಳೆ ಟೀಕಿಸಿದ್ದಾರೆ.