ರಾಮ ಕಾಲ್ಪನಿಕ ಎಂದಿದ್ದ ಕಾಂಗ್ರೆಸ್‌ ಈಗ ಜೈ ಶ್ರೀರಾಮ್‌ ಜಪಿಸ್ತಿದೆ: ಮೋದಿ ವಾಗ್ದಾಳಿ

Public TV
1 Min Read
NARENDRA MODI 4

ಚಂಡೀಗಢ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುವುದು ಬೇಡ, ರಾಮ ಕಾಲ್ಪನಿಕ ಎಂದು ಕರೆದವರು ಈಗ ಜೈ ಸಿಯಾ ರಾಮ್ (Jai Siya Ram) ಅಂತಾ ಘೋಷಣೆ ಕೂಗುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ (Congress) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹರ್ಯಾಣದ ರೇವಾರಿಯಲ್ಲಿ ಹಲವಾರು ಯೋಜನೆಗಳ ಉದ್ಘಾಟನೆ ಮತ್ತು AIIMS ಸಂಸ್ಥೆಯ ಅಡಿಪಾಯವನ್ನು ಹಾಕಿದ ಬಳಿಕ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ (Narendra Modi), ನಾನು ಕೊಟ್ಟಿದ್ದ ಕೆಲವೊಂದು ಭರವಸೆಗಳನ್ನು ಈಡೇರಿಸಿದ್ದೇನೆ. ದೇಶವು ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರವನ್ನು (Ram Mandir) ಬಯಸಿತ್ತು. ಅದು ಈಡೇರಿದೆ ಎಂದರು.

ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸುವಲ್ಲಿ ಕಾಂಗ್ರೆಸ್ ದಶಕಗಳಿಂದ ಅಡೆತಡೆಗಳನ್ನು ಸೃಷ್ಟಿಸಿದೆ ಎಂದು ಕಿಡಿಕಾರಿದರು. ಭಾರತವು ಇಂದು ವಿಶ್ವದಲ್ಲಿಯೇ ಎತ್ತರದ ಸ್ಥಾನವನ್ನು ಅಲಂಕರಿಸಿದೆ. ಇದು ಜನರ ಆಶೀರ್ವಾದದಿಂದ ಸಾಧ್ಯವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ರಷ್ಯಾ ಅಧ್ಯಕ್ಷ ಪುಟಿನ್‌ ಹೆಚ್ಚು ಭಯಪಡುತ್ತಿದ್ದ ಬದ್ಧವೈರಿ ‘ಅಲೆಕ್ಸಿ ನವಲ್ನಿ!’

ಇದೇ ವೇಳೆ ಈ ವಾರ ತಮ್ಮ ಯುಎಇ ಮತ್ತು ಕತಾರ್ ಭೇಟಿಯನ್ನು ಉಲ್ಲೇಖಿಸಿದ ಅವರು, ಭಾರತಕ್ಕೆ ಈಗ ಪ್ರತಿಯೊಂದು ಮೂಲೆಯಿಂದಲೂ ಗೌರವ ಸಿಗುತ್ತದೆ. ಕೇವಲ ಮೋದಿಯವರಿಗೆ ಮಾತ್ರವಲ್ಲ, ಪ್ರತಿಯೊಬ್ಬ ಭಾರತೀಯನಿಗೂ ಈ ಗೌರವ ಸಿಗುತ್ತದೆ ಎಂದು ಮೋದಿ ಹೇಳಿದರು.

ಪ್ರಜಾಪ್ರಭುತ್ವದಲ್ಲಿ ಸೀಟುಗಳು ಮುಖ್ಯ, ಆದರೆ ನನಗೆ ಜನರ ಆಶೀರ್ವಾದವೇ ದೊಡ್ಡ ಆಸ್ತಿ ಎಂದು ಅವರು ಹೇಳಿದರು.

Share This Article